120 ಕೆಜಿಯನ್ನು ಒಂದೇ ಬಾರಿ ಎತ್ತಿ ಬಿಸಾಕಿದ ಮಹಿಳೆ
Oct 4, 2024, 09:38 IST
|

ಅನೇಕ ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಜಿಮ್‌ಗೆ ಹೋಗುತ್ತಾರೆ. ಅನೇಕ ಜನರು ಜಿಮ್‌ಗೆ ಹೋಗಲು ವಿಶೇಷ ಬಟ್ಟೆಗಳನ್ನು ಖರೀದಿಸುತ್ತಾರೆ. ಆದರೆ, ಕೆಲ ಮಹಿಳೆಯರು ಸಾಂಪ್ರದಾಯಿಕ ಸೀರೆಯಲ್ಲಿ ಜಿಮ್ ನಲ್ಲಿ ವ್ಯಾಯಾಮ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ಸೀರೆ ಉಟ್ಟ ಕೆಲವು ಮಹಿಳೆಯರು ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದಾಳೆ. ಅನೇಕರು ಈ ಮಹಿಳೆಯರನ್ನು ಹೊಗಳಿದದರೆ, ಇನ್ನೂ ಕೆಲವರು, ಜಿಮ್‌ನಲ್ಲಿ ಹುಚ್ಚಾಟ ಬೇಡ ಅಂತ ಕಾಮೆಂಟ್‌ಗಳ ಮೂಲಕ ಪಾಠ ಮಾಡುತ್ತಿದ್ದಾರೆ.
ಆದರೆ ಹಸಿರು ಸೀರೆಯಲ್ಲಿ ಕಂಗೊಳಿಸುವ ಈ ನಾರಿ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ 120 ಕೇಜಿ ತೂಕವನ್ನು ಅನುಭವಿ ಲಿಫ್ಟರ್ ತರಹವೇ ಎತ್ತಿದ್ದಾರೆ.ವಾರೆವ್ಹಾ! ಮಹಿಳೆಯರು ಹೀಗೂ ಜಿಮ್ ಮಾಡಬಹುದು ಅಂತ ಒಬ್ಬರು ಕಮೆಂಟ್ ಮಾಡಿದ್ರೆ, ಇನ್ನೂ ಒಬ್ಬರು ಹೀಗೆ ನಾ ನೀವು ಜಿಮ್‌ಗೆ ಹೋಗೋದು ಅಂತ ಪ್ರಶ್ನೆ ಮಾಡಿದ್ದಾರೆ. ಹೀಗೆ ಹಲವಾರು ಕಮೆಂಟ್ಗಳನ್ನು ಪಡೆದುಕೊಂಡಿದೆ ಈ ವಿಡಿಯೋ.
ಅಷ್ಟಕ್ಕೂ ಹೆಣ್ ಮಕ್ಳೇ ಸ್ಟ್ರಾಂಗು ಗುರು ಅಂತ ಹಾಡು ನೆನಪಿಗೆ ಬರುತ್ತೆ ಈ ವಿಡಿಯೋ ನೋಡಿದ್ರೆ. ಯಾಕಂದ್ರೆ ಆ ರೀತಿಯಾಗಿ ಇದೆ ಈ ವಿಡಿಯೋ. ಸೀರೆಯನ್ನು ಉಟ್ಟು ಸಾಂಪ್ರದಾಯಿಕವಾಗಿ ಪೂಜೆಗಳನ್ನು ಕೂಡ ಮಾಡುತ್ತಾರೆ ಮಹಿಳೆಯರು, ಇಲ್ಲದಿದ್ದಲ್ಲಿ ಹೀಗೆ ಜಿಮ್‌ಗೆ ಕೂಡ ಹೋಗುತ್ತಾರೆ ಅಂತ ಸಾಧಿಸಿ ತೋರಿಸಿದ್ದಾರೆ ಈ ಮಹಿಳೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.