ಮುಗ್ಧ ಹೆಣ್ಣುಮಗಳು ಸೌಜನ್ಯಗೆ ನ್ಯಾಯ ಸಿಗಲ್ವಾ? ತಿಮರೋಡಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆ ಕೊಟ್ಟಿದ್ದು ಗೊತ್ತಾ

 | 
ರ್

ಸೌಜನ್ಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಮರು ತನಿಖೆಗೊಳಪಡಿಸಲು ತೀವ್ರ ಹೋರಾಟ ನಡೆಯುತ್ತಿರುವಾಗಲೇ ಸರ್ಕಾರ ಮರು ತನಿಖೆ ಅಸಾಧ್ಯ ಎಂದು ತಿಳಿಸಿದೆ. ಗೃಹ ಸಚಿವ ಜಿ.ಪರಮೇಶ್ವರ್ ಅವರು ಈ ಕುರಿತು ಮಾತನಾಡಿದ್ದು, ಈ ಪ್ರಕರಣ ಕಾನೂನಾತ್ಮಕವಾಗಿ ಮುಗಿದು ಹೋಗಿದೆ. ಈ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಈ ಮೂಲಕ ಸೌಜನ್ಯಾ ಹತ್ಯೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ವಿವಿಧ ವೇದಿಕೆಗಳಲ್ಲಿ ಹರಡುತ್ತಿರುವ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಧಾರವಾಡದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್‌ ಅವರು ಪ್ರಕರಣದ ಮರು ತನಿಖೆ ಅಸಾಧ್ಯ ಎಂದು ತಿಳಿಸಿದ್ದಾರೆ. ಈಗ ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸರ್ಕಾರದ ನಿಲುವಿನ ಪ್ರಶ್ನೆ ಅಲ್ಲ ಈಗ ಮರು ತನಿಖೆ ಆಗಬೇಕು ಎನ್ನುತ್ತಿರುವವರು ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸ ಬೇಕು. 

ಕೋರ್ಟ್ ಏನು ನಿರ್ದೇಶನ ನೀಡುತ್ತದೆಯೋ ಅದನ್ನಾಧರಿಸಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಕೋರ್ಟ್ ಮರು ತನಿಖೆ ಮಾಡಿ ಎಂದು ನಿರ್ದೇಶಿಸಿದರೆ ಸರ್ಕಾರ ಮರು ತನಿಖೆ ಮಾಡಬಹುದು. ಅದನ್ನು ಬಿಟ್ಟು ಈಗ ಸರ್ಕಾರ ಏನೂ ಮಾಡಲಾಗದು ಎಂದರು. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಸೌಜನ್ಯಾ ಕೊಲೆ ಪ್ರಕರಣದಲ್ಲಿ ಕಾನೂನು ಪ್ರಕಾರ ಏನು ಮಾಡಬೇಕಿತ್ತೋ ಅದನ್ನು ಮಾಡಿ ಆಗಿದೆ. ಮರು ತನಿಖೆ ಮಾಡಬೇಕು ಅನ್ನುವವರು ಕೋರ್ಟ್‌ಗೆಹೋಗಿ ನಿರ್ದೇಶನ ತರಲಿ. 

ಅದನ್ನು ಬಿಟ್ಟು ಎಸ್‌ಐಟಿ ತನಿಖೆ ರಾಜ್ಯ ಸರ್ಕಾರದ ಹಂತದಲ್ಲಿ ಸಾಧ್ಯವಿಲ್ಲ ಎಂದರು. ಸಂತೋಷ್‌ ರಾವ್‌ ಅನ್ನು ಪ್ರಕರಣದ ಆರೋಪಿ ಎಂದು ಬಂಧಿಸಲ್ಪಟ್ಟಿದ್ದರು, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಿಡುಗಡೆಯಾದ ಬಳಿಕ ಸೌಜನ್ಯಾ ಪ್ರಕರಣ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಸೌಜನ್ಯಾಗೆ ನ್ಯಾಯ ಕೊಡಿಸಬೇಕೆಂದು ತೀವ್ರ ಹೋರಾಟ ನಡೆಯುತ್ತಿದೆ. 

ಈ ತಿಂಗಳಾಂತ್ಯಕ್ಕೆ ಬೃಹತ್‌ ಸಭೆ ಆಯೋಜಿಸಲಾಗಿದ್ದು, ಇದರ ನಡುವೆಯೇ ಸ್ವತಃ ಗೃಹ ಸಚಿವರೇ ಮರು ತನಿಖೆ ಸಾಧ್ಯ ಇಲ್ಲ ಎಂದಿರುವುದರಿಂದ ಕೊನೆಗೂ ಸೌಜನ್ಯಾಳನ್ನು ಕೊಂದದ್ದು ಯಾರು ಎನ್ನುವುದು ಪ್ರಶ್ನೆಯಾಗಿಯೇ ಉಳಿಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸೌಜನ್ಯಾ ಪ್ರಕರಣ ಸಮಾಧಿ ಆಗುವ ಎಲ್ಲ ಲಕ್ಷಣಗಳೂ ಕಾಣುತ್ತಿರೋದಂತೂ ಸತ್ಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.