ಶ್ರೀಲಂಕಾದಲ್ಲಿ ನಟ ಯಶ್ ಸಿನಿಮಾ ಶೂಟಿಂಗ್ ಗೆ ಕ್ಷಣಗಣನೆ, 200 ಕೋಟಿಯ ಅದ್ಧೂರಿ ಸೆಟ್ ಹೇಗಿದೆ ಗೊತ್ತಾ

ಸ್ಯಾಂಡಲ್‌ವುಡ್ ನಟ ಯಶ್ , ಸದ್ಯ ಏನು ಮಾಡುತ್ತಿದ್ದಾರೆ? ಈ ವಿಚಾರವನ್ನು ಸ್ವತಃ ಯಶ್ ಅಧಿಕೃತವಾಗಿ ಖಚಿತಪಡಿಸಿಲ್ಲ. ಇತ್ತ ಅಭಿಮಾನಿ ವಲಯದಲ್ಲಿ ಮಾತ್ರ ಆ ಕುತೂಹಲ ಹೆಚ್ಚಾಗುತ್ತಲೇ ಇದೆ. ಈ ನಡುವೆಯೇ ಶ್ರೀಲಂಕಾದಿಂದ ಅವರ ಸಿನಿಮಾದ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಅಂದರೆ, ಯಶ್ ಅವರ ಮುಂದಿನ ಸಿನಿಮಾದ ಶೂಟಿಂಗ್ ಶ್ರೀಲಂಕಾದಲ್ಲಿ ನಡೆಯಲಿದೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆ ಆಗಿ ಇಂದಿಗೆ ಸರಿಯಾಗಿ ಒಂದು ವರ್ಷವಾಯಿತು. ಅಂದಿನಿಂದ ಇಂದಿನವರೆಗೂ ನಟ ಯಶ್ ತಮ್ಮ ಮುಂದಿನ ಸಿನಿಮಾ ಯಾವುದು ಎಂಬುದನ್ನು ಘೋಷಣೆ ಮಾಡಿಲ್ಲ. ಜನವರಿ 8ರಂದು ಬರ್ತ್‌ಡೇ ದಿನವಾದರೂ ಮುಂದಿನ ಸಿನಿಮಾದ ವಿಚಾರವನ್ನು ಅಧಿಕೃತಪಡಿಸಲಿದ್ದಾರೆ ಎಂದು ಕಾದಿದ್ದೇ ಬಂತು, ಘೋಷಣೆ ಆಗಲಿಲ್ಲ.
ಈ ನಡುವೆ ಯಶ್ ಆ ನಿರ್ದೇಶಕರ ಸಿನಿಮಾದಲ್ಲಿ ನಟಿಸಲಿದ್ದಾರೆ, ಇವರ ನಿರ್ಮಾಣದ ಚಿತ್ರದಲ್ಲಿ ಇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡತೊಡಗಿದವು. ಆದರೆ, ಯಾವೊಂದು ಸುದ್ದಿಯೂ ಅಧಿಕೃತವಾಗಲಿಲ್ಲ. ಇದೀಗ ಸದ್ದಿಲ್ಲದೆ ತಮ್ಮ ಮುಂದಿನ ಸಿನಿಮಾದ ಶೂಟಿಂಗ್ ಅನುಮತಿ ಪಡೆಯಲು ಶ್ರೀಲಂಕಾಕ್ಕೆ ಹಾರಿದ್ದಾರೆ ಯಶ್! ಯಶ್ ಸದ್ಯ ಶ್ರೀಲಂಕಾದಲ್ಲಿದ್ದಾರೆ. ಅವರ ಕೆಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆ ಪೈಕಿ ಶ್ರೀಲಂಕಾದಲ್ಲಿನ ಬೋರ್ಡ್ ಆಫ್ ಇನ್ವೆಸ್ಟ್ಮೆಂಟ್ ಇನ್ ಶ್ರೀಲಂಕಾದ ಮುಖ್ಯಾಧಿಕಾರಿ ದಿನೇಶ್ ವೇರಕ್ಕೋಡಿ ಅವರನ್ನು ಭೇಟಿ ಮಾಡಿದ್ದಾರೆ.
ಭೇಟಿ ವೇಳೆ ಶ್ರೀಲಂಕಾದಲ್ಲಿ ಸಿನಿಮಾ ಚಿತ್ರೀಕರಣ ಮಾಡುವ ವಿಚಾರವೂ ವಿನಿಮಯವಾಗಿದೆ. ಚಿತ್ರೀಕರಣಕ್ಕೂ ಒಪ್ಪಿಗೆಯನ್ನು ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ದಿನೇಶ್ ಟ್ವಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಯಶ್ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಭಾರತದ ನಟ ನವೀನ್ ಕುಮಾರ್ ಗೌಡ ಅವರನ್ನು ಭೇಟಿಯಾದೆ. ಇವರು ಮೂರು ಫಿಲಂಫೇರ್ ವಿಜೇತರೂ ಹೌದು. ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಅವರು ಬಯಸಿದ್ದಾರೆ” ಎಂದು ಟ್ವಿಟ್ ಮಾಡಿದ್ದಾರೆ.
ಈ ನಡುವೆ ನಟ ಯಶ್ ಅವರೊಂದಿಗೆ ಅಲ್ಲಿನ ಹೊಟೇಲ್ ಸಿಬ್ಬಂದಿಯೂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ತಮ್ಮ 19ನೇ ಸಿನಿಮಾ ಬಗ್ಗೆ ಯಶ್ ಸಾಕಷ್ಟು ಗುಟ್ಟು ಕಾಯ್ದುಕೊಂಡಿದ್ದಾರೆ. ಸಿನಿಮಾ ಬಗ್ಗೆ ಒಂದೇ ಒಂದು ವಿಚಾರ ಕೂಡ ಲೀಕ್ ಆಗದಂತೆ ನೋಡಿಕೊಂಡಿದ್ದಾರೆ. ಹೀಗಿರುವಾಗ ಸಿನಿಮಾ ಶೂಟಿಂಗ್ ಸ್ಥಳದ ಫೋಟೋ ಲೀಕ್ ಆಗೋಕೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.