ಸೆಲ್ಫಿ ತೆಗೆಯಲು ಹೋಗಿ ಜಲಪಾತಕ್ಕೆ ಜಾರಿ ಬಿದ್ದ ಯುವಕ, ಕುಟುಂಬಸ್ಥರ ಆಕ್ರಂದನ
ಪ್ರಸಿದ್ಧ ಧಾರ್ಮಿಕ ಕೇಂದ್ರ ಕೊಲ್ಲೂರು ಸಮೀಪದ ಅರಿಶಿನ ಗುಂಡಿ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದಿದ್ದ ಶರತ್ ಇನ್ನೂ ಪತ್ತೆಯಾಗಿಲ್ಲ. ಇನ್ನೂ ಕೂಡ ಶರತ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮುಳುಗು ತಜ್ಞರನ್ನು ಕರೆಸಿ ಶರತ್‌ಗಾಗಿ ಹುಡುಕಾಡಿದ್ರೂ ಶರತ್‌ನ ಸುಳಿವಿಲ್ಲ. ಭದ್ರಾವತಿ ಮೂಲದ ಯುವಕ ಶರತ್, ತನ್ನ ಸ್ನೇಹಿತನೊಂದಿಗೆ ಅರಿಶಿನಗುಂಡಿ ಫಾಲ್ಸ್‌ಗೆ ಬಂದಿದ್ದ.
ಈ ವೇಳೆ ಜಲಪಾತದ ಬಳಿ ನಿಂತು ರೀಲ್ಸ್ ಮಾಡುವ ವೇಳೆ ಕಾಲು ಜಾರಿ ಫಾಲ್ಸ್‌ನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಆತ ಜಾರಿ ಬೀಳುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡಿದವರು ಬೆಚ್ಚಿ ಬೀಳುವಂತಿದೆ. ಇನ್ನು ಶರತ್ ಈ ರೀತಿ ಅನಾಹುತ ಮಾಡಿಕೊಂಡಿದ್ದಕ್ಕೆ ಕಾರಣಗಳು ಏನು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲಿನ ಅಕ್ಕಪಕ್ಕದವರು ಹೇಳುವ ಪ್ರಕಾರ ಚೆಕ್ ಪೋಸ್ಟ್ ಹಾಗೂ ಸ್ಥಳೀಯ ಮನೆಗಳ ಜನರ ಕಣ್ತಪ್ಪಿಸಿ ಜಲಪಾತಕ್ಕೆ ಹೋಗಿದ್ದೇ ಯುವಕ ಅನಾಹುತ ಮಾಡಿಕೊಳ್ಳುವುದಕ್ಕೆ ಕಾರಣವಾಯ್ತು ಎನ್ನಲಾಗಿದೆ.
ಒಂದು ವೇಳೆ ಚೆಕ್ ಪೋಸ್ಟ್ ರಸ್ತೆಯಲ್ಲೇ ತೆರಳಿದ್ರೆ ಪೊಲೀಸರು ತಡೆಯುತ್ತಿದ್ದರು. ಅಲ್ಲದೇ ಜಲಪಾತಕ್ಕೆ ಹೋಗುವ ಮಾರ್ಗದಲ್ಲೇ ಕೆಲವು ಮನೆಗಳು ಇದ್ದವು. ಅಲ್ಲಿನ ನಿವಾಸಿಗಳು ಮುಂದೆ ತೆರಳಲು ಬಿಡ್ತಾ ಇರಲಿಲ್ಲ. ಆದರೆ ಶರತ್ ಮತ್ತು ಸ್ನೇಹಿತ ಎಲ್ಲರ ಕಣ್ತಪ್ಪಿಸಿ ಜಲಪಾತಕ್ಕೆ ಹೋಗಿದ್ದಾರೆ. ಅರಿಶಿನ ಗುಂಡಿ ಜಲಪಾತಕ್ಕೆ ತೆರಳಲೇ ಬೇಕು ಎನ್ನುವ ಹುಚ್ಚು ಸಾಹಸದಲ್ಲಿ ಚೆಕ್ ಪೋಸ್ಟ್, ಸ್ಥಳೀಯ ಮನೆಗಳನ್ನು ಶರತ್ ಹಾಗೂ ಸ್ನೇಹಿತ ತಪ್ಪಿಸಿದ್ದರು. ಇಬ್ಬರೂ ಮಾರ್ಗ ಮಧ್ಯೆ ಕಾರು ನಿಲ್ಲಿಸಿ, ಏಳು ಕಿಲೋಮೀಟರ್ ನಡೆದುಕೊಂಡು ತೆರಳಿದ್ದರು.
ಕಾಡಿನ ಮಧ್ಯೆ ತಾವೇ ದಾರಿ ಮಾಡಿಕೊಂಡು ಹುಚ್ಚು ಸಾಹಸಕ್ಕೆ ಮುಂದಾಗಿದ್ದ ಶರತ್ ಹಾಗೂ ಸ್ನೇಹಿತ ಕೊಲ್ಲೂರಿನ ಅರಶಿನ ಗುಂಡಿ ಜಲಪಾತ ತಲುಪಿದ್ದರು. ಈ ವೇಳೆ ಕಾಲು ಜಾರಿ ಬಿದ್ದಿರುವ ಶರತ್ ಇದುವರೆಗೂ ಪತ್ತೆಯಾಗದೇ ನಾಪತ್ತೆಯಾಗಿದ್ದಾನೆ. ಇದೀಗ ಮುಳುಗುತಜ್ಞರು ಕೂಡ ಅವನ ಪತ್ತೆಗೆ ಹರಸಾಹಸ ಪಡುತ್ತಿದ್ದಾರೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.