ಯೂಟ್ಯೂಬರ್ ಮಧು ಗೌಡ ವಿಡಿಯೋದಲ್ಲಿ ಉಡುಪಿ ಬಗ್ಗೆ ಅಸಹ್ಯ ಪದಬಳಕೆ, ರೊ ಚ್ಚಿಗೆದ್ದ ತುಳುನಾಡ ಜನತೆ
Oct 10, 2024, 18:03 IST
|
ಬುದ್ಧಿವಂತರ ಜಿಲ್ಲೆ ಎಂದೇ ಕರೆಸಿಕೊಳ್ಳುವ ಶ್ರೀಕೃಷ್ಣನೂರು, ಕರಾವಳಿಯ ಪ್ರಮುಖ ಜಿಲ್ಲೆ ಉಡುಪಿ. 25 ಆಗಸ್ಟ್ 1997ರಂದು ದಕ್ಷಿಣ ಕನ್ನಡದಿಂದ ವಿಭಜಿಸಿ ಉಡುಪಿಯನ್ನು ಹೊಸ ಜಿಲ್ಲೆಯನ್ನು ರೂಪಿಸಲಾಯಿತು. ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ನಾಲ್ಕು ತಾಲೂಕುಗಳನ್ನು ಒಳಗೊಂಡಿರುವ ಈ ಜಿಲ್ಲೆ ಜನ ಸಂಖ್ಯೆ ಹಾಗೂ ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆಯಾಗಿದೆ.
ಉಡುಪಿಗೆ ಈ ಹೆಸರು ಯಾಕೆ ಬಂತು ಎನ್ನುವುದರ ಬಗ್ಗೆ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ. ಉಡುಪಿ ಹೆಸರನ್ನು ತುಳು ಹೆಸರು 'ಒಡಿಪು' ಇಂದ ಪಡೆಯಲಾಗಿದೆ ಎನ್ನಲಾಗಿದೆ. ಉಡುಪಿ ಎಂಬ ಪದವು ಸಂಸ್ಕೃತ ಭಾಷೆಯ 'ಉಡು' ಹಾಗೂ 'ಪ' ಅಂದರೆ ನಕ್ಷತ್ರ ಹಾಗೂ ದೇವರು ಈ ಪದಗಳಿಂದ ಎಂಬ ಪದವು ಹುಟ್ಟಿಕೊಂಡಿರೋ ಕಾರಣದಿಂದಾಗಿ ಇದನ್ನು ಉಡುಪಿ ಅನ್ನಲಾಗ್ತಿದೆ.
ಈ ಜಿಲ್ಲೆಯ ಪೂರ್ವ ಗಡಿಯುದ್ದಕ್ಕೂ ಎತ್ತರವಾದ ಮತ್ತು ದಟ್ಟವಾದ ಕಾಡಿನಿಂದ ಕೂಡಿದ ಪಶ್ಚಿಮ ಘಟ್ಟದ ಶ್ರೇಣಿಗಳಿವೆ. ಬೈಂದೂರು, ಗಂಗೊಳ್ಳಿ, ಕುಂದಾಪುರ, ಮಲ್ಪೆ, ಪಡುಬಿದ್ರಿ ಮೊದಲಾದ ಸ್ಥಳಗಳಲ್ಲಿ ವಿಶಾಲವಾದ ಸಮುದ್ರಗಳಿದ್ದು, ಮೀನುಗಾರಿಕೆಯಿಂದ ಉಡುಪಿ ಜಿಲ್ಲೆ ಸಾಗರದಾಚೆಗಿನ ದೇಶಗಳಲ್ಲೂ ಹೆಸರುವಾಸಿಗಿದೆ.
ಆದರೆ ಇಲ್ಲೊಬ್ಬ ಉದ್ಧಟ ಯು ಟ್ಯೂಬ್ರ ಒಬ್ಬ ಉಡುಪಿ ಬಚ್ಚಲು ಮನೆಯಂತಿದೆ ಎಂದು ಹೇಳಿ ಉಡುಪಿಯ ಜನರ ಭಾವನೆ ಕೆರಳಿಸಿದ್ದಾನೆ. ಹೌದು ಮಧು ಗೌಡ ಅವರ ಜೊತೆ ಕಾಣಿಸಿಕೊಂಡಿರುವ ಲೋಹಿತ್ ಎನ್ನುವ ವ್ಯಕ್ತಿಯೇ ಉಡುಪಿಯ ಬಗ್ಗೆ ಮಾತನಾಡಿದ್ದಾರೆ. ಈ ಕುರಿತಾಗಿ ಮಂಗಳೂರಿನ ತುಳು ಸಂಘಟನೆಯ ಅಧ್ಯಕ್ಷ ರೋಷನ್ ರೋನಾಲ್ಡ್ ಇವರಿಗೆ ಕರೆ ಮಾಡಿ ಚೆನ್ನಾಗಿ ವಿಚಾರಿಸಿ ಕೊಂಡು ಉಗಿದು ಉಪ್ಪಿನಕಾಯಿ ಹಾಕಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.