ಕನಾ೯ಟಕದ ಪ್ರಸಿದ್ಧ ನ್ಯೂಸ್ ಚಾನೆಲ್ ವಿರುದ್ಧ ಗುಡುಗಿದ ಸುಂದರ ಮುಖದ ಯುವತಿ, ಕಾರಣ ಏನು ಗೊತ್ತಾ

 | 
ಕಿಕಿಕ

 ಸ್ವಯಂ ಘೋಷಿತ ರೈತ ನಾಯಕಿ ಮಂಜುಳಾ ಪೂಜಾರಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಜಮೀನು ವಿಚಾರವಾಗಿ ನ್ಯಾಯ ಕೊಡಿಸಿ ಅಂತಾ ಬಂದ ಮೂಡಲಗಿ ತಾಲೂಕಿನ ನಾಗನೂರಿನ ಸಂತೋಷ್​ ಪಾಟೀಲ್ ಬಳಿ ಹಣ ಪೀಕಿದ್ದೂ ಅಲ್ಲದೇ ಇನ್ನು ದುಡ್ಡು ಕೊಡು ಎಂದು ಟಾರ್ಚರ್ ಮಾಡಿದ್ದಾಳೆ ಎಂದು ಆರೋಪಿಸಿ ಎಸ್​ಪಿಗೆ ದೂರು ನೀಡಿದ್ದಾರೆ.

ಅಕ್ಕ ಬಾಂಡ್​ನ ಧಮ್ಕಿಯಿಂದ ಸಂತೋಷ್ ಮಾನಸಿಕ ಕಿರುಕುಳ ಅನುಭವಿಸಿದ್ದಾರೆ. ಹೀಗಾಗಿ ಸೆ.19 ರಂದು ಬೆಳಗಾವಿ ಎಸ್​ಪಿಗೆ ದೂರು ನೀಡಿದ್ದರು. ದೂರಿನಲ್ಲಿ ಎಲ್ಲವನ್ನೂ ಎಳೆ ಎಳೆಯಾಗಿ ಉಲ್ಲೇಖ ಮಾಡಲಾಗಿದೆ. ಇದರಲ್ಲಿ ಮಂಜುಳಾ ಪೂಜಾರಿಯಿಂದ ರಕ್ಷಣೆಗೂ ಸಂತೋಷ್ ಮನವಿ ಮಾಡಿದ್ದಾರೆ.

ಸಂತೋಷ್ ಕುಮಾರ್ ಮಲ್ಲನಗೌಡ ಪಾಟೀಲ್ ಆದ ನಾನು ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ನಿವಾಸಿಯಾಗಿದ್ದೇನೆ. ಹಾವೇರಿ ಜಿಲ್ಲೆ ರೈತ ಸಂಘದ ಮಹಿಳೆ ಮಂಜುಳಾ ಪೂಜಾರಿ ಸುಮಾರು ವರ್ಷದಿಂದ ಪರಿಚಯವಿದೆ. ಜಮೀನು ಸಮಸ್ಯೆಗೆ ಪರಿಹಾರ ಬೇಕಾಗಿದ್ದರಿಂದ ಮಂಜುಳಾ ಪೂಜಾರಿಯನ್ನು ಸಂಪರ್ಕ ಮಾಡಿದ್ದೇನೆ. ಅದನ್ನ ಪರಿಹರಿಸಲು ಸುಮಾರು ಬಾರಿ ಸುತ್ತಾಡಿದ್ದಾರೆ. ಆದರೆ ನನ್ನ ಖಾಸಗಿ ಸಮಸ್ಯೆ ಇದ್ದು ಅಣ್ಣ ನನಗೆ ಮಾನಸಿಕ ಕಿರುಕುಳ ಮತ್ತು ಮಾನ ಹಾನಿ ಮಾಡಿದ್ದಾರೆ. ಇದರಿಂದ ಬೇಸತ್ತು 2022 ಜನವರಿ 22 ರಂದು ವಿಷ ಕುಡಿದಿದ್ದೆ.

ಮಂಜುಳಾ ಸೇರಿ ಕೆಲವರು ಬಂದು ನನ್ನ ಕಾಪಾಡಿದ್ದಾರೆ. ಕೆಲ ದಿನಗಳ ನಂತರ ನಾವು ಹಣ ಖರ್ಚು ಮಾಡಿದ್ದೇವೆ ಅಂತ ಹಣ ಕೇಳಿದ್ರು. ಹೀಗಾಗಿ 50 ಸಾವಿರ ರೂ.ಗಳನ್ನ ಫೋನ್ ಪೇ ಮಾಡಿದ್ದೆ. ಗೋಕಾಕ್​ಗೆ ಬಂದಾಗ 10 ಸಾವಿರ ರೂ. ಸಂಬಂಧಿಕರ ಕಡೆಯಿಂದ ಕೊಟ್ಟಿದ್ದೇನೆ.

ಆದರೆ ನೀ ನಾಟಕ ಮಾಡುತ್ತೀಯಾ ಎಂದು ಹೆದರಿಸಿ 2 ಲಕ್ಷ ರೂ.ಗಳನ್ನು ಇಸ್ಕೊಂಡಿದ್ದಾರೆ. ಅವರು ಕೇಳಿದಾಗಲ್ಲ ಹಣ ಹಾಕಿದ್ದೇನೆ. ಮತ್ತೆ ಹಣ ಕೇಳಿ, ಹೆದರಿಸುತ್ತಿದ್ದಾರೆ. ನನ್ನ ಅಣ್ಣನ ಜತೆ ನನಗೆ ಒಳ್ಳೆಯ ಸಂಬಂಧ ಇಲ್ಲದಿದ್ದರೂ ಕಾನ್ಫರೆನ್ಸ್ ಕಾಲ್​ನಲ್ಲಿ ಇಲ್ಲ ಸಲ್ಲದ ಮಾತಾಡಿದ್ದಾರೆ. ಕೇಸ್ ಹಾಕೋದಾಗಿ ಹೆದರಿಸಿ ನಾನಿಲ್ಲದಾಗ ಮನೆಗೆ ಬಂದು ಬಾಡಿಗೆದಾರರಿಗೆ ಬಗ್ಗೆ ಕೇಳಿದ್ದಾರೆ. 

ಫೋನ್​ನಲ್ಲಿ ನನಗೆ ಬಹಳ ಬೈದಿದ್ದು, ಬೇರೆಯವರ ಕಡೆಯಿಂದಲೂ ಬೈಸಿದ್ದಾರೆ. ಇದೆಲ್ಲ ಫೋನ್ ರೆಕಾರ್ಡಿಂಗ್ ನನ್ನ ಬಳಿ ಇವೆ. ಇದರ ಬಗ್ಗೆ ತನಿಖೆ ನಡೆಸಿ, ಮಂಜುಳಾ ಪೂಜಾರಿಯಿಂದ ರಕ್ಷಣೆ ನೀಡಬೇಕೆಂದು ಮನವಿ ಮಾಡ್ತೇನೆ ಅಂತ ದೂರಿನಲ್ಲಿ ಸಂತೋಷ್ ಆರೋಪ ಮಾಡಿದ್ದಾರೆ.
ಇನ್ನು ಈ ಘಟನೆಯ ಕುರಿತಾಗಿ ಪ್ರಸಾರ ಮಾಡಿದ್ದರಿಂದ ನ್ಯೂಸ್ ಚಾನೆಲ್ ವಿರುದ್ಧ ಈ ಹೋರಾಟಗಾರ್ತಿ ಗುಡುಗಿದ್ದಾರೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.