ಇದೇ ವರ್ಷ ಆಗಸ್ಟ್‌ ನಲ್ಲಿ ನನ್ನ ಮದುವೆ, ಕನ್ನಡಿಗರಿಗೆ ಆಮಂತ್ರಣ ಕೊಟ್ಟ ಅನುಶ್ರೀ

 | 
ಕ್
ಆಗಾಗ ಅಲ್ಲಲ್ಲಿ ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರ ಮದುವೆ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಕರ್ನಾಟಕದ ಮನೆಮಗಳಾಗಿರುವ ಅನುಶ್ರೀ ಅವರ ಮದುವೆ ಮಾತುಕತೆಯಂತೂ ಸದಾ ಸುದ್ದಿಯಲ್ಲಿರುತ್ತದೆ. ರಿಯಾಲಿಟಿ ಶೋಗಳಲ್ಲಿ, ಯೂಟ್ಯೂಬ್‌ ವಿಡಿಯೋಗಳಲ್ಲಿ ಹೀಗೆ ಅನೇಕ ಕಡೆಗಳಲ್ಲಿ ಅನುಶ್ರೀ ಮದುವೆ ಟಾಪಿಕ್‌ ಇದ್ದೇ ಇರುತ್ತದೆ.
ಕೊನೆಗೂ ಆ್ಯಂಕರ್‌ ಅನುಶ್ರೀ ಮದುವೆ ಫಿಕ್ಸ್‌, ಇವರೇ ನೋಡಿ ಆ್ಯಂಕರ್‌ ಅನುಶ್ರೀ ಪತಿ, ಅನುಶ್ರೀ ಮದುವೆ ವಿಡಿಯೋ ನೋಡಿ, ಮದುಮಗಳಾದ ಅನುಶ್ರೀ ಎಂದೆಲ್ಲಾ ನೂರಾರು ವಿಡಿಯೋ ಹಾಗೂ ಸುದ್ದಿಗಳನ್ನು ಈಗಾಗಲೇ ನೀವು ನೋಡಿರಬಹುದು. ಇಂತಹ ಊಹಾಪೋಹಗಳು ಸಾಕಷ್ಟು ಹರಿದಾಡುತ್ತಲೇ ಇರುತ್ತದೆ. ಆದರೆ ಅದೆಲ್ಲವೂ ಸತ್ಯಕ್ಕೆ ದೂರವಾದ ಸುದ್ದಿಸುದ್ದಿ.
ಆದರೆ ಇದೀಗ ಅನುಶ್ರೀ ಮದುವೆ ಬಗ್ಗೆ ಅಧೀಕೃತವಾದ ಮಾಹಿತಿಯೊಂದು ಹೊರಬಿದ್ದಿದೆ. ಬೇರೇ ಯಾರೋ ಅಲ್ಲ, ಸ್ವತಃ ನಿರೂಪಕಿ ಅನುಶ್ರೀಯೇ ತಮ್ಮ ಮದುವೆ ಹಾಗೂ ಭಾವಿ ಪತಿಯ ಬಗ್ಗೆ ಮಾತನಾಡಿದ್ದು, ಈವರೆಗೂ ರಹಸ್ಯವಾಗಿ ಇಟ್ಟುಕೊಂಡಿದ್ದ ಕೆಲವು ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಈ ವರ್ಷ ಮದುವೆಯಾಗುತ್ತೇನೆ ಎನ್ನುವ ಮೂಲಕ ಅನುಶ್ರೀ 2025ರ ಅಂತ್ಯದೊಳಗೆ ಹಸೆಮಣೆ ಏರುವುದಾಗಿ ತಿಳಿಸಿದ್ದಾರೆ.ಇದೇ ವೇಳೆ ತಮ್ಮ ಹುಡುಗ ಹೇಗಿರಬೇಕು ಎಂದು ಮಾತನಾಡಿದ ನಿರೂಪಕಿ ಅನುಶ್ರೀ,ನನ್ನ ಹುಡುಗ ತುಂಬಾ ಜವಾಬ್ದಾರಿಯುತ ವ್ಯಕ್ತಿಯಾಗಿರಬೇಕು. 
ನನ್ನ ಪರವಾಗಿ ಅಲ್ಲ, ಅವನ ಜೀವನದ ಬಗ್ಗೆ ಅವನಿಗೆ ಜವಾಬ್ದಾರಿ ಇದ್ದರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕಲು ಬಿಡಬೇಕು ಎಂದು ಹೇಳುವ ಮೂಲಕ ಈ ವರ್ಷವೇ ಮದುವೆಯಾಗುವುದಾಗಿ ಕೊನೆಗೂ ಅಧೀಕೃತವಾಗಿ ಅನುಶ್ರೀ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub