ಸಾ ವಿನ ಎರಡನೇ ದಿನಕ್ಕೆ ಅಪರ್ಣಾ ಮನೆ ವಿ ಚಾರ ಬಯಲಿಗೆ;

ಕನ್ನಡದ ಮಟ್ಟಿಗೆ ತುಂಬಾನೇ ಬೋಲ್ಡ್ ಅನಿಸುವ ದೃಶ್ಯದಲ್ಲಿ ಕಾಣಿಸಿಕೊಂಡವರು ಹದಿಹರೆಯದ ಅಪರ್ಣಾ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಅಪರ್ಣಾ ಅವರನ್ನು ವೇಶ್ಯಾವಾಟಿಗೆಗೆ ದೂಡಲ್ಪಟ್ಟ ಬಾಲೆಯಾಗಿ ತೆರೆ ಮೇಲೆ ತಂದಿದ್ದರು. ಅಂದಿನಿಂದ ಕನ್ನಡ ಸಿನಿ ರಸಿಕರ, ಕನ್ನಡಿಗರ ಚಿರಪರಿಚಿತ ಮುಖವಾದ ಅಪರ್ಣಾ ಇಂದು ಅವರ ಮೊದಲ ಸಿನಿಮಾದ ಹೆಸರಿನಂತೆ ಮಸಣದ ಹೂ ಆಗಿದ್ದಾರೆ.
ಅಪರ್ಣಾ 1984ರಲ್ಲಿ ಬಿಡುಗಡೆಯಾದ ಮಸಣದ ಹೂವು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ವರ್ಷಗಳಲ್ಲಿ ಕನ್ನಡ ನಿರೂಪಕಿಯಾಗಿ ತಮ್ಮದೇ ಛಾಪೂ ಮೂಡಿಸಿದರು. 2015ರ ನಂತರದಲ್ಲಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ನಲ್ಲಿ ವರಲಕ್ಷ್ಮೀಯಾಗಿ ಮನೆ ಮಾತಾದರು. ನಕ್ಕು ನಲಿಸುತ್ತಿದ್ದ ಅವರನ್ನು ಕ್ಯಾನ್ಸರ್ ಒಳಗಿದೊಳಕೆ ತಿಂದು ಹಾಕಿದ್ದು ಮಾತ್ರ ವಿಪರ್ಯಾಸ.
ಅಪರ್ಣಾ ಚಂದನ ಟಿವಿ ಚಾನೆಲ್‌ನಲ್ಲಿ ನಿರೂಪಕರಾಗಿ ಪ್ರಸಿದ್ಧರಾಗಿದ್ದಾರೆ. ಅವರು ಕನ್ನಡದ ವಿವಿಧ ಕಾರ್ಯಕ್ರಮಗಳಲ್ಲಿ ಮತ್ತು ಸುದ್ದಿಪ್ರಸಾರಗಳಲ್ಲಿ ತಮ್ಮ ಅದ್ಭುತ ನಿರೂಪಣೆಯಿಂದ ಜನಪ್ರಿಯರಾಗಿದ್ದಾರೆ. ಅವರ ವೃತ್ತಿಪರ ಜೀವನದ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿದ್ದರೂ, ಅವರ ವೈಯಕ್ತಿಕ ಜೀವನವನ್ನು ಅವರು ಬಹಳ ಖಾಸಗಿಯಾಗಿ ಇಟ್ಟಿದ್ದಾರೆ.
ಅವರ ಮೊದಲ ಮದುವೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ಆದರೆ ಅಪರ್ಣಾ ಅವರಿಗೆ ಎರಡು ಮದುವೆಯಾಗಿದ್ದು ತಮ್ಮ NRI ಮೊದಲನೇ ಪತಿಯಿಂದ ಮಾನಸಿಕ ಹಿಂಸೆ ನೀಡಿದ ಕಾರಣ ಅವರಿಂದ ದೂರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅಪರ್ಣ ಅವರು ೨೦೦೩ ರಲ್ಲಿ ನಾಗರಾಜ್ ವಸ್ತಾರೆ ಅವರೊಂದಿಗೆ ಮದುವೆ ಆಗುತ್ತಾರೆ. ಇವರಿಬ್ಬರದು ಅನುರೂಪ ದಾಂಪತ್ಯ ಈ ಕ್ಯಾನ್ಸರ್ ನಡುವೆಯೂ ಅವರು ಹಲವು ʼಮಜಾ ವಿದ್ ಸೃಜಾʼ ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಹಾಗೂ ʼಎಡೆಯೂರು ಶ್ರೀ ಸಿದ್ದಲಿಂಗೇಶ್ವರʼ ಮುಂತಾದ ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಲವಲವಿಕೆಯಿಂದ ನಟಿಸಿ ಎಲ್ಲರನ್ನೂ ನಗಿಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.