ಬಾಲ ನಟಿಗೆ ತನ್ನ ಮಕ್ಕಳನ್ನು ಸಾಕಲು ಹೆ ಣಗಾಟ; ಕನ್ನಡಿಗರ ನೆಚ್ಚಿನ ನಟಿ ಬಾಳಲ್ಲಿ ಬಿ ರುಗಾಳಿ
Aug 4, 2024, 16:23 IST
|
70 ರಿಂದ 80 ದಶಕದ ಮಕ್ಕಳಿಗೆ ಬೇಬಿ ಇಂದಿರಾ ಬಗ್ಗೆ ವಿಶೇಷವಾಗಿ ಹೇಳುವುದು ಬೇಡ. ಇಂದಿಗೂ ಈ ನಟಿಯನ್ನು ಬೇಬಿ ಇಂದಿರಾ ಅಂತಲೇ ಕರೆಯುತ್ತಾರೆ. ಬೇಬಿ ಇಂದಿರಾ ಬೆಳೆದು ನಾಯಕಿಯಾಗುವ ವಯಸ್ಸಿಗೆ ಸಿನಿಮಾರಂಗದಿಂದ ದೂರವಾಗಿದ್ದರು. ತೆರೆಮರೆಯಲ್ಲಿ ಬದುಕು ನಡೆಸುತ್ತಿದ್ದರು.ಮದುವೆ ಬಳಿಕ ಬೇಬಿ ಇಂದಿರಾ ಸಿನಿಮಾರಂಗದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ಚಿತ್ರರಂಗದಿಂದ ಸಂಪೂರ್ಣವಾಗಿ ದೂರವೇ ಉಳಿದಿದ್ದ ಬೇಬಿ ಇಂದಿರಾ ಇದೇ ಮೊದಲ ಬಾರಿಗೆ ಕನ್ನಡದ ನಿರ್ದೇಶಕ ಕಮ್ ನಿರೂಪಕ ರಘು ರಾಮ್ ಅವರ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಸಿನಿಮಾದಿಂದ ದೂರವಿದ್ದ ತಮ್ಮ ಬದುಕನ್ನು ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.
ಬೇಬಿ ಇಂದಿರಾ ಸಂದರ್ಶನಕ್ಕೆ ಸಿಗುವುದಕ್ಕೂ ಮುನ್ನ ಅವರ ಪತಿಯ ಸಾವಿನ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ತಪ್ಪು ಸುದ್ದಿಗಳನ್ನು ಬಿತ್ತರಿಸಿದ್ದರು. ಅವರ ಪತಿ ಶ್ರೀಧರ್ ನಿಧನಕ್ಕೆ ಅಸಲಿ ಕಾರಣವೇನು? ಅನ್ನುವುದನ್ನು ರಘುರಾಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಬೇಬಿ ಇಂದಿರಾ ರಿವೀಲ್ ಮಾಡಿದ್ದಾರೆ.
ಬೇಬಿ ಇಂದಿರಾ ಪತಿ ಮಲ್ಟಿಟಾಸ್ಕ್ ಮಾಡುತ್ತಿದ್ದರು. ಇಂದಿರಾ ಅವರಂತೆಯೇ ಪತಿ ಶ್ರೀಧರ್ ಕೂಡ ಬಾಲ್ಯದಲ್ಲಿಯೇ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ವಿವಾಹದ ಬಳಿಕ ನಟನೆಯಿಂದ ಕೊಂಚ ದೂರ ಉಳಿದಿದ್ದರೂ, ಕೆಲವು ಧಾರಾವಾಹಿಗಳನ್ನು ನಿರ್ದೇಶನ ಮಾಡುತ್ತಿದ್ದರು. ಸಾಕಷ್ಟು ಡಾಕ್ಯೂಮೆಂಟರಿ ಮಾಡಿದ್ದಾರೆ. ಜೊತೆಗೆ ಬಿಲ್ಡರ್ ಆಗಿದ್ದರು. ವಾಸ್ತು, ಆಧ್ಯಾತ್ಮದ ಬಗ್ಗೆ ಟಿವಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಹೀಗಾಗಿ ಸಿಕ್ಕಾಪಟ್ಟೆ ಕೆಲಸ ಮಾಡುತ್ತಿದ್ದರು. ಅವರ ದಿಢೀರ್ ಸಾವಿಗೆ ಇದೂ ಒಂದು ಕಾರಣವಿರಬಹುದು ಅನ್ನೋದು ಬೇಬಿ ಇಂದಿರಾ ಅವರ ಅಭಿಪ್ರಾಯ.
ಪತಿ ಶ್ರೀಧರ್ ಇದ್ದಿದ್ದರೆ, ಮುಂದಿನ ವರ್ಷ ಫೆಬ್ರವರಿ 11ಕ್ಕೆ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ, ವಿಧಿಗೆ ಆಟವೇ ಬೇರೆಯಾಗಿತ್ತು. ಬೆಳಗ್ಗೆ ಮನೆಯಲ್ಲಿ ನನ್ನ ಮಡಿಲಿನಲ್ಲಿ.. ನಮ್ಮ ದೊಡ್ಡ ಮಗ ಇದ್ದ ಜೊತೆಯಲ್ಲಿದ್ದ. ಏನು ಹೇಳುವುದು. ನನ್ನನ್ನು ಸ್ಟ್ರಾಂಗ್ ವ್ಯಕ್ತಿಯನ್ನಾಗಿ ಮಾಡಿದ್ದಾರೆ. ಒಳ್ಳೆಯ ಮಕ್ಕಳನ್ನು ಕೊಟ್ಟಿದ್ದಾರೆ. ಮಕ್ಕಳು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ.ಎಂದು ಬೇಬಿ ಇಂದಿರಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.