ಕಾಮಿಡಿ ಕಿಲಾಡಿಗಳು ನಯನ ಸೀಮಂತ ಕಾಯ೯ಕ್ರಮ, ಎಷ್ಟು ಬಗೆಯ ತಿಂಡಿ ಇತ್ತು ಗೊತ್ತಾ

 | 
ಗಿಿಗ

 ಜೀ ಕನ್ನಡದಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಶೋ ಮೂಲಕ ನಾಡಿನ ಜನತೆಗೆ ಪರಿಚಯವಾದವರು ನಟಿ ನಯನಾ ಶರತ್. ಸಿನಿಮಾ, ಸೀರಿಯಲ್‌ಗಳಲ್ಲಿಯೂ ಬಿಜಿಯಾಗಿರುವ ಈ ನಟಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯಲ್ಲಿಯೇ ಸಿಹಿಕಹಿ ಚಂದ್ರು ಅವರಿಂದ ಸೀಮಂತ ಶಾಸ್ತ್ರವನ್ನೂ ನೆರವೇರಿಸಿಕೊಂಡು, ಬಸರಿ ಬಯಕೆ ಈಡೇರಿಸಿಕೊಂಡಿದ್ದಾರೆ. 

ಕನ್ನಡ ಕಿರುತೆರೆಯ ಖ್ಯಾತ ಹಾಸ್ಯ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡ ನಟಿ ನಯನಾ, ಕಾಮಿಡಿ ಕಿಲಾಡಿ ನಯನಾ ಎಂದೇ ಫೇಮಸ್‌. ತಮ್ಮ ಪಂಚಿಂಗ್‌ ಡೈಲಾಗ್‌, ನಟನೆ ಮೂಲಕವೇ ಎಲ್ಲರನ್ನು ನಗಿಸುತ್ತಾರೆ ಈ ನಟಿ. 

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಸಿನಿಮಾ, ಕಿರುತೆರೆಯಲ್ಲಿಯೂ ಅಪಾರ ಜನಮೆಚ್ಚುಗೆ ಪಡೆದ ನಯನಾ, ಈಗಲೂ ಈ ಎರಡೂ ಕ್ಷೇತ್ರಗಳಲ್ಲಿ ಬಿಜಿಯಾಗಿದ್ದಾರೆ.ಸದ್ಯ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ಯಲ್ಲಮ್ಮನ ತಾಯಿ ದೇವಮ್ಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಸೀರಿಯಲ್‌ ಮೂಲಕವೂ ಅತ್ಯುತ್ತಮ ನಟನೆ ನೀಡುತ್ತಿರುವ ನಯನಾ ನೋಡುಗರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇದೀಗ ನಯನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇವರಿಗೆ ಇದೀಗ 8 ತಿಂಗಳು ತುಂಬಿದ್ದು ಕಾಮಿಡಿ ಕಿಲಾಡಿಗಳು ಸೆಟ್ ಅಲ್ಲಿ ಅವರ ಸೀಮಂತ ಮಾಡಿ ಊಟ ಬಡಿಸಿ ಸಂತೋಷಪಟ್ಟಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.