ದೇವಾಲಯದ ಹುಂಡಿಗೆ 100 ಕೋಟಿ ರೂ ಚೆಕ್ ಹಾಕಿದ ಭಕ್ತ, ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ದೊಡ್ಡ ಶಾ‌.ಕ್

 | 
ರ

ದೇವರಿಗೆ ಕಾಣಿಕೆ ಎಂದು ಹಣ ಚಿನ್ನ ಬೆಳ್ಳಿ ಕೊಡುವುದನ್ನು ಕೇಳಿರುತ್ತೀರಿ ಆದರೆ ಚೆಕ್ ನೀಡಿದ್ದನ್ನು ಕೇಳಿದ್ದೀರಾ ಹೌದು ವಾಡಿಕೆಯಂತೆ 15 ದಿನಕ್ಕೊಮ್ಮೆ ಹುಂಡಿ ಎಣಿಕೆ ಮಾಡಿದ ದೇವಸ್ಥಾನದ ಅಧಿಕಾರಿಗಳು ಮೊದಮೊದಲು ಸಂತಸದಿಂದಲೇ ತಪಾಸಣೆ ನಡೆಸಿದ್ರಾದರೂ ಮುಂದೆ ಮುಂದೆ ಆಘಾತ ಹಾಗೂ ಭಾವುಕರಾದರು. 

ಯಾಕಪ್ಪಾ ಅಂದ್ರೆ ಎಣಿಕೆ ಮಾಡುತ್ತಿದ್ದ ಸಿಬ್ಬಂದಿಯ ಕಣ್ಣಿಗೆ ಒಂದಲ್ಲ, ಎರಡಲ್ಲ, 100 ಕೋಟಿ ರೂಪಾಯಿ ಮೌಲ್ಯದ ಚೆಕ್ ಬಿದ್ದಿದೆ. ಅವರು ತಕ್ಷಣ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನೂರಾರು ವರ್ಷಗಳ ದೇವಸ್ಥಾನದ ಇತಿಹಾಸದಲ್ಲಿಯೇ ನಡೆಯದ ಈ ವಿಶೇಷ ಘಟನೆಯನ್ನು ಉನ್ನತ ಅಧಿಕಾರಿಗಳು ಅನುಮಾನಿಸದಿದ್ದರೂ, ಸದರಿ ಭಕ್ತ ಜನ ಯಾರೆಂದು ಅವರಿಗೂ ತಿಳಿಯದ ಕಾರಣ ಅವರನ್ನು ದೇವಾಲಯದ ಶಿಷ್ಟಾಚಾರಗಳೊಂದಿಗೆ ಖುದ್ದಾಗಿ ಭೇಟಿ ಮಾಡಲು ಆಲೋಚಿಸಿದರು. 

ಸಿಂಹಾಚಲಂ ವರಾಹಲಕ್ಷ್ಮಿ ನರಸಿಂಹ ಸ್ವಾಮಿ ಹುಂಡಿಯನ್ನು 15 ದಿನಕ್ಕೊಮ್ಮೆ ಎಣಿಸಲಾಗುತ್ತದೆ. ಅಲ್ಲದೇ ಹುಂಡಿ ಎಣಿಕೆ ವೇಳೆ ಸಿಬ್ಬಂದಿಗೆ ಅಪಾರ ಮೊತ್ತದ ಕಾಣಿಕೆಯೊಂದು ಹೀಗೆ ಸಿಕ್ಕಿದೆ. ಆಘಾತದಿಂದ ಚೇತರಿಸಿಕೊಂಡ ನಂತರ, ದೆಗುಲದ ಅಧಿಕಾರಿಗಳು ಮತ್ತು ಸಿಬ್ಬಂದಿ 100 ಕೋಟಿ ರೂಪಾಯಿ ಮೌಲ್ಯದ ಚೆಕ್ ಮೂಲ ವಿವರಗಳನ್ನು ಸಂಗ್ರಹಿಸಲು ಮುಂದಾದರು. ಚೆಕ್​​ ಮೇಲಿನ ವಿವರಗಳ ಆಧಾರದ ಮೇಲೆ ಅದು ಬೊಡ್ಡೆಪಲ್ಲಿ ರಾಧಾಕೃಷ್ಣ ಅವರ ಉಳಿತಾಯ ಖಾತೆಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಹ

ಚೆಕ್ ಸಂಖ್ಯೆ MVP ಡಬಲ್ ರೋಡ್ ಶಾಖೆಯ ಹೆಸರಿನಲ್ಲಿತ್ತು. ಏನೇ ಆದರೂ ಉಳಿತಾಯ ಖಾತೆಯಿಂದ 100 ಕೋಟಿ ದೇಣಿಗೆ ನೀಡಿರುವ ಬಗ್ಗೆ ದೇವಸ್ಥಾನದ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಅದರಲ್ಲಿಯೂ ವರಾಹ ಲಕ್ಷ್ಮೀ ನರಸಿಂಹ ದೇವಸ್ಥಾನದ ಹೆಸರಿನಲ್ಲಿ ಬರೆದಿದ್ದ ಚೆಕ್‌ನಲ್ಲಿ ಮೊದಲು 10 ರೂಪಾಯಿ ಎಂದು ಬರೆದು, ಮತ್ತೆ 100 ಕೋಟಿ ಎಂದು ಬರೆದಿರುವುದು ಕಂಡು ಬಂದಿದೆ. 

ಎಲ್ಲರಿಗೂ ಕುತೂಹಲದ ಜತೆಗೆ ಅನುಮಾನವೂ ಮೂಡಿತ್ತು. ಹುಂಡಿಯಲ್ಲಿ 100 ಕೋಟಿ ರೂ ಮೊತ್ತದ ಚೆಕ್ ವಿಚಾರ ಮಾಧ್ಯಮಗಳ ಗಮನಕ್ಕೂ ಬಂದಿದೆ. ಕೆಲ ಮಾಧ್ಯಮ ಪ್ರತಿನಿಧಿಗಳೂ ತಕ್ಷಣವೇ ಬ್ಯಾಂಕ್​ಗೆ ಹೋಗಿ ಖಾತೆಯನ್ನು ಪರಿಶೀಲಿಸಿದರು. ಈ ಬಾರಿ ಅವರೂ ಶಾಕ್ ಆಗಿದ್ದಾರೆ. ಯಾಕೆಂದರೆ ಆ ಖಾತೆಯಲ್ಲಿ ಕೇವಲ 17 ರೂಪಾಯಿ ಹೌದು, ಅಕ್ಷರಶಃ ಹದಿನೇಳು ರೂಪಾಯಿ ಇತ್ತು. ಇದರೊಂದಿಗೆ ಈ ಚೆಕ್​ ಹಿಂದಿನ ರಹಸ್ಯ ಯಾರೋ ತಮಾಷೆಗೆ ಮಾಡಿರಬಹುದಾ ಅಥವಾ ಹುಚ್ಚುಹುಚ್ಚಾಗಿ ಹೀಗೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.