ಪ್ರಿಯತಮೆಗಾಗಿ ಬಹುಕೋಟಿ ವೆಚ್ಚದ ಮನೆ ನಿರ್ಮಾಣ ಮಾಡಿದ ದಿಲೀಪ್ ಶೆಟ್ಟಿ, ಸೀರಿಯಲ್ ನಲ್ಲಿ ದುಡಿದ ಹಣದಲ್ಲಿ ಮನೆ ಕಟ್ಟಿದ್ದಾರೆ

 | 
Zzz
ಕನ್ನಡ ಸೀರಿಯಲ್‌ಗಳಲ್ಲಿ ಅಭಿನಯಿಸುವ ಸಲುವಾಗಿ ದುಬೈನಲ್ಲಿನ ಕೆಲಸ ಬಿಟ್ಟು ಬಂದವರು ದಿಲೀಪ್ ಶೆಟ್ಟಿ. ಮಿಸ್ಟರ್ ದುಬೈ ಆಗಿದ್ದ ದಿಲೀಪ್ ಶೆಟ್ಟಿ ವಿದ್ಯಾ ವಿನಾಯಕ, ಕಸ್ತೂರಿ ನಿವಾಸ, ನೀನಾದೆ ನಾ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇಂತಿಪ್ಪ ದಿಲೀಪ್ ಶೆಟ್ಟಿ ಇದೀಗ ಕನಸು ನನಸಾಗಿಸಿಕೊಂಡ ಖುಷಿಯಲ್ಲಿದ್ದಾರೆ.
ಹೌದು.. ನಟ ದಿಲೀಪ್‌ ಶೆಟ್ಟಿ ಹೊಸ ಮನೆಗೆ ಕಾಲಿಟ್ಟಿದ್ದಾರೆ. ತಮ್ಮ ಸ್ವಂತ ಮನೆಯ ಗೃಹಪ್ರವೇಶವನ್ನ ದಿಲೀಪ್ ಶೆಟ್ಟಿ ನೆರವೇರಿಸಿದ್ದಾರೆ. ಸ್ವಂತ ಸೂರಿಗೆ ಕಾಲಿಟ್ಟ ಖುಷಿಯಲ್ಲಿ, ಬಾಡಿಗೆ ಮನೆಯ ಮೇಲ್ಚಾವಣಿಯಿಂದ ನಮ್ಮದೇ ಆದ ಮನೆಯವರೆಗೆ… ಕನಸಿನಿಂದ ಆರಂಭವಾಗಿ, ಅನೇಕ ಸಂಕಷ್ಟಗಳನ್ನು ಹಾದುಬಂದು, ಇಂದು ನಮ್ಮದೇ ಆದ ನೆಲೆ ಸಿಕ್ಕಿದೆ. ಪ್ರತಿಯೊಂದು ತ್ಯಾಗವೂ ಈ ಪ್ರಯಾಣವನ್ನು ಸಾರ್ಥಕವಾಗಿಸಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ದಿಲೀಪ್ ಶೆಟ್ಟಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ದಿಲೀಪ್‌ ಶೆಟ್ಟಿಯ ಗೃಹ ಪ್ರವೇಶದ ಫೋಟೋಗಳು ವೈರಲ್‌ ಆಗಿತ್ತು. ಈಗ ಅವರು ಈ ಮನೆ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ದಿಲೀಪ್‌ ಶೆಟ್ಟಿ ಅವರ ಹೊಸ ಮನೆ ಪ್ರವೇಶದಲ್ಲಿ ಖುಷಿ ಶಿವು ಕೂಡ ಭಾಗಿಯಾಗಿದ್ದಾರೆ. ಈ ಜೋಡಿ ಕಂಡರೆ ಅನೇಕರಿಗೆ ಇಷ್ಟ ಎನ್ನಬಹುದು.ಈ ಹಿಂದೆ ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ದಿಲೀಪ್‌ ಶೆಟ್ಟಿ ನಟಿಸಿದ್ದರು. ಆ ನಂತರ ಡ್ಯಾನ್ಸಿಂಗ್ ಶೋನಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ತೆಲುಗಿನಲ್ಲಿಯೂ ಅವರು ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ
ದಿಲೀಪ್‌ ಶೆಟ್ಟಿ ಅವರು ನಟನೆಗೂ ಮುನ್ನ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸೆಯಿಂದ ಆ ಕೆಲಸಕ್ಕೆ ಗುಡ್‌ಬೈ ಹೇಳಿ ಧಾರಾವಾಹಿಯತ್ತ ಮುಖ ಮಾಡಿದ್ದರು. ಕನ್ನಡ ಕಿರುತೆರೆಯಲ್ಲಿ ಆರು ಅಡಿ ಎತ್ತರದ ದಿಲೀಪ್‌ ಶೆಟ್ಟಿ ಒಂದಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ದಿಲೀಪ್‌ ಶೆಟ್ಟಿ ಈಗ ಬೆಂಗಳೂರಿನಲ್ಲಿ ಹೊಸ ಮನೆಗೆ ಕಾಲಿಟ್ಟಿದ್ದಾರೆ. ನಟಿ ಅಮೃತಾ ರಾಮಮೂರ್ತಿ, ಖುಷಿ ಶಿವು, ರಾಘವೇಂದ್ರ, ಕಿಶನ್‌ ಬಿಳಗಲಿ ಸೇರಿದಂತೆ ಸಾಕಷ್ಟು ಜನರು ಈ ಮನೆಗೆ ಆಗಮಿಸಿ ಶುಭ ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು) ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub