ಬಿಗ್ ಬಾಸ್ ಮನೆಯಿಂದ ನೀತು ವನಜಾಕ್ಷಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ, ಕೋಟಿ ಲೆಕ್ಕದಲ್ಲಿ

 | 
Js

ನೀತು ವನಜಾಕ್ಷಿ ಎಂಬ ಹೆಸರು ಇದೀಗ ಇಡೀ ಕರುನಾಡಿಗೆ ಚಿರಪರಿಚಿತ. ಟ್ರಾನ್ಸ್‌ಜೆಂಡರ್‌ ಆಗಿದ್ದು, ಹಲವು ಸಾಧನೆಗಳನ್ನು ಬರೆದ ನೀತು ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಕ್ಕೆ ಎಂಟ್ರಿ ಕೊಟ್ಟರು. 50 ದಿನದ ಆಟ ಮುಗಿಸಿ ಮನೆಯಿಂದ ಎಲಿಮಿನೇಟ್‌ ಆದರು. ನೀತು ಬಿಗ್‌ ಬಾಸ್‌ ನಲ್ಲೂ ಹಲವು ದಾಖಲೆಗಳನ್ನು ಬರೆದಿದ್ದಾರೆ. 

ನೀತು ವನಜಾಕ್ಷಿ ಬಿಗ್‌ ಬಾಸ್‌ ಮನೆಗೆ ಬಂದ ದಿನದಿಂದಲೇ ಮನೆ ಮಾತಾದರು. ಆ ಬಳಿಕ ಎರಡು ವಾರ ಮನೆಯಲ್ಲಿ ಯಾರಿಗೂ ಕಿಚ್ಚನ ಚಪ್ಪಾಳೆ ಸಿಕ್ಕಿರಲಿಲ್ಲ. ನೀತು ವನಜಾಕ್ಷಿ ತಮ್ಮ ಆಟದ ಶೈಲಿಯ ಮೂಲಕ ಸುದೀಪ್‌ ಅವರ ಮೆಚ್ಚುಗೆ ಗಳಿಸಿದರು. ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಕಿಚ್ಚನ ಚಪ್ಪಾಳೆ ಪಡೆದ ಮೊದಲ ಕಂಟೆಸ್ಟಂಟ್‌ ಆದರು. 

ಆ ಬಳಿಕ ನೀತು ಎರಡು ಬಾರಿ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ಆದರು. ಎರಡು ಬಾರಿ ಕ್ಯಾಪ್ಟನ್‌ ಆದ ಮೊದಲ ಸ್ಪರ್ಧಿ ನೀತು ಆದರು. ಆ ನಂತರ ನೀತು ಮನೆಯಿಂದ ಹೊರ ಬಂದರು. ಎರಡನೇ ಬಾರಿ ಕ್ಯಾಪ್ಟನ್‌ ಆಗಿದ್ದ ನೀತು ಎಲಿಮಿನೇಟ್‌ ಆದರು. ಕ್ಯಾಪ್ಟನ್‌ ಆದ ವಾರವೇ ಮನೆಯಿಂದ ಹೊರಬರಬೇಕಾಯಿತು. ನೀತು ವನಜಾಕ್ಷಿ ಇದರಲ್ಲೂ ದಾಖಲೆ ಬರೆದಿದ್ದಾರೆ. ಕ್ಯಾಪ್ಟನ್‌ ಆಗಿ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿ ನೀತು ಆಗಿದ್ದಾರೆ.

ಇನ್ನು ಬಿಗ್ ಬಾಸ್ ಷೋ ಅಲ್ಲಿ ಗಳಿಸಿದ ಹಣ ಏಷ್ಟು ಎಂದು ಕೇಳಿದಾಗ ನನಗೆ ಪ್ರೀತಿ ಬೇಕಾಗಿತ್ತು. ಅದು ಸಿಕ್ಕಿದೆ.ಸಿಂಪತಿ ಬೇಕಾಗಿರ್ಲಿಲ್ಲ. ಸಿಂಪತಿ ಇಲ್ಲದ ಪರಿಪೂರ್ಣ ಪ್ರೀತಿಯನ್ನು ಹುಡುಕಿಕೊಂಡು ನಾನು ಬಿಗ್‌ಬಾಸ್ ಮನೆಗೆ ಹೋಗಿದ್ದೆ. ಅದು ನನಗೆ ಸಿಕ್ಕಿದೆ. ನನಗೆ ಇದೊಂದು ಒಳ್ಳೆಯ ಅವಕಾಶ. ಮನೆಯಲ್ಲಿ ಒಂದೊಂದು ಕ್ಷಣವನ್ನೂ ಎಂಜಾಯ್ ಮಾಡಿದೀನಿ. ಈ ನೆನಪುಗಳನ್ನು ನನ್ನ ಜೀವನವಿಡೀ ಒಂದೊಂದು ಎಪಿಸೋಡ್ ನೋಡ್ತಾ ಎಂಜಾಯ್ ಮಾಡ್ತೀನಿ. ಟ್ರಾನ್ಸ್‌ಜೆಂಡರ್‍ಗಳ ಬದುಕಿನ ಬಗ್ಗೆ ಎಷ್ಟೋ ಜನರಿಗೆ ಗೊತ್ತಿಲ್ಲ.

ನಮಗೆ ಏನು ಬೇಕು, ನಾವು ಸಮಾಜದಿಂದ ಏನು ನಿರೀಕ್ಷಿಸುತ್ತಿದ್ದೇವೆ ಎಂಬುದು ಗೊತ್ತಿರಲಿಲ್ಲ. ಕೊನೆಗೂ ನಮಗೆ ಬೇಕಾಗಿರುವುದು ಪ್ರೀತಿ. ನಮಗೆ ಕರುಣೆ ಬೇಡ. ಪ್ರೀತಿ ಕೊಟ್ಟರೆ ಸಾಕು. ಅದು ನನಗೆ ಬಿಗ್‌ಬಾಸ್ ಮನೆ ಕೊಟ್ಟಿದೆ. ಅದನ್ನು ನಾನು ಮನದುಂಬಿ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.