ಕರ್ನಾಟಕದ ಪ್ರತಿ ಪೋಷಕರು ಈ ವಿಡಿಯೋ ನೋ.ಡಲೇಬೇಕು

 | 
ರಗ

ಐಷಾರಾಮಿ, ಹೈಟೆಕ್‌, ಅತ್ಯಂತ ಸುರಕ್ಷಿತ ಎಂದೆಲ್ಲ ಹೇಳಲಾಗುವ ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ ಒಂದರಲ್ಲಿ 10 ವರ್ಷದ ಬಾಲಕಿ ವಿದ್ಯುತ್‌ ಆಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಆಕೆ ಅಲ್ಲಿನ ಸ್ವಿಮ್ಮಿಂಗ್‌ ಪೂಲ್‌ಗೆ  ಇಳಿದಾಗ ನೀರಿನಲ್ಲಿ ವಿದ್ಯುತ್‌ ಶಾಕ್‌ ತಗುಲಿ ಮೃತಪಟ್ಟಿದ್ದಾಳೆ. ಗುರುವಾರ ಸಂಜೆ 7.30ಕ್ಕೆ ವಿದ್ಯುತ್‌ ಆಘಾತಕ್ಕೆ ಒಳಗಾದ ಬಾಲಕಿ ಒಂಬತ್ತು ಗಂಟೆಯ ಹೊತ್ತಿಗೆ ಉಸಿರು ಚೆಲ್ಲಿದ್ದಾಳೆ .

 ಹೈಟೆಕ್‌ ಅಪಾರ್ಟ್‌ಮೆಂಟ್‌ಗಳ ಈ ಸುರಕ್ಷತಾ ನಿರ್ಲಕ್ಷ್ಯಕ್ಕೆ  ಬಾಲಕಿ ಬಲಿಯಾಗಿದ್ದು ಅಲ್ಲಿ ಭಾರಿ ಆತಂಕದ ಕ್ಷಣಗಳನ್ನು ಸೃಷ್ಟಿಸಿದೆ.ವರ್ತೂರುನಲ್ಲಿರುವ ಪ್ರೆಸ್ಟೀಜ್ ಹೆಬಿಟ್ಯಾಟ್ ಅಪಾರ್ಟ್ ಮೆಂಟ್ ನಲ್ಲಿ ಘಟನೆ ನಡೆದಿದೆ. ಮಾನ್ಯ ಎಂಬ 10 ವರ್ಷದ ಬಾಲಕಿಯೇ ಪ್ರಾಣ ಕಳೆದುಕೊಂಡವಳು. ನೀರಿಗೆ ಇಳಿದ ವೇಳೆ ವಿದ್ಯುತ್‌ ಆಘಾತದಿಂದ ಬಾಲಕಿ ಚೀರುತ್ತಿದ್ದಂತೆಯೇ ಅಲ್ಲಿದ್ದವರು ಆಕೆಯನ್ನು ಅದು ಹೇಗೋ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ,ರಾತ್ರಿ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಬಾಲಕಿ ಪೋಷಕರು ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಪಾರ್ಟ್ ಮೆಂಟ್ ಅಸೋಶಿಯೇಶನ್ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ನಿವಾಸಿಗಳು ಆರೋಪಿಸುತ್ತಾರೆ. ಈ ಹಿಂದೆ ಕೂಡ ಕೆಲ ಘಟನೆ ನಡೆದಿರುವುದಾಗಿ ಆರೋಪಿಸಿರುವ ಅಪಾರ್ಟ್ಮೆಂಟ್ ವಾಸಿಗಳು ಸಮಸ್ಯೆಯನ್ನು ಕೂಡಲೇ ಬಗೆ ಹರಿಸಲು ಆಗ್ರಹಿಸಿದ್ದಾರೆ.ಈ ನಡುವೆ ಕೋಟಿ ಕೋಟಿ ಪಡೆದು ನಿರ್ಮಾಣ ಮಾಡಿರುವ ಅಪಾರ್ಟ್ ಮೆಂಟ್ ನಲ್ಲಿ ಇಲ್ವಾ ಜೀವಕ್ಕೆ ಭದ್ರತೆ ಎಂಬ ಪ್ರಶ್ನೆಯೂ ಎದುರಾಗಿದೆ. ಅಪಾರ್ಟ್ ಮೆಂಟ್ ಮೆಂಟೈನೆಸ್ಸ್ ಟೀಂ ಎಡವಟ್ಟಿಗೆ ಅಮಾಯಕ ಜೀವ ಬಲಿಯಾಗಿದೆ. 

ಈ ಅಪಾರ್ಟ್‌ಮೆಂಟ್‌ನಲ್ಲಿ ಹಿಂದೆಯೂ ಮಕ್ಕಳು ಆಟವಾಡುವಾಗ ಶಾಕ್‌ ಅನುಭವಿಸಿದ್ದರ ಬಗ್ಗ ದೂರು ನೀಡಲಾಗಿತ್ತು. 15 ತಿಂಗಳ ಮಗುವೊಂದು ಆಟವಾಡುತ್ತಾ ಒಂದು ಕಂಬವನ್ನು ಹಿಡಿದು ನಿಂತಾಗ ಅದರಲ್ಲಿ ಶಾಕ್‌ ಹೊಡೆದಿತ್ತು. ಎಸೆಯಲ್ಪಟ್ಟ ಮಗುವನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು.ಹಲವು ಬಾರಿ ಘಟನೆ ನಡೆದರೂ ಆಡಳಿತ ಮಂಡಳಿ ಕಣ್ಮುಚ್ಚಿ ಕುಳಿತಿದೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.