ರಕ್ಷಕ್ ಬುಲೆಟ್ ಹಾಗೂ ಬಾಳು ಬೆಳಗುಂದಿ ನಡುವೆ ಜಗಳ, ರಕ್ಷಕ್ ಪರ ನಿಂತ ಗಗನ
Apr 8, 2025, 12:58 IST
|

ಅಷ್ಟಕ್ಕೂ ಭರ್ಜರಿ ಬ್ಯಾಚುಲರ್ಸ್ ಭಾಗ 2 ಮತ್ತು ಸರಿಗಮಪ ಮಹಾಸಂಚಿಕೆ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಈಗಾಗಲೇ ಜೀ ವಾಹಿನಿಯ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಭರ್ಜರಿ ಬ್ಯಾಚುಲರ್ಸ್ ತಮ್ಮ ಸುಂದರಿಯರ ಜೊತೆಗೆ ಮೈಚಳಿ ಬಿಟ್ಟು ರೊಮ್ಯಾಂಟಿಕ್ ಆಗಿ ಸ್ಟೆಪ್ ಹಾಕಿದ್ದಾರೆ. ಈ ಕಡೆ ನಾವು ಯಾರಿಗೂ ಕಮ್ಮಿಯಿಲ್ಲ ಅಂತ ಸರಿಗಮಪ ಸಿಂಗರ್ಸ್ ಅದ್ಭುತ ಹಾಡುಗಳನ್ನು ಹಾಡಿ ಸೈ ಎನಿಸಿಕೊಂಡಿದ್ದಾರೆ.
ಇದರ ಜೊತೆಗೆ ಸದ್ಯ ಸಖತ್ ವೈರಲ್ ಆಗುತ್ತಿರುವ ಕ್ಲಿಪ್ ಅಂತಂದರೆ ರಕ್ಷಕ್ ಬುಲೆಟ್ ಮತ್ತು ಬಾಳು ಬೆಳಗುಂದಿ ಅವರ ಮಾತನ ಸಮರದ ವಿಡಿಯೋ. ಈ ಮಾತಿನ ಸಮರದಲ್ಲಿ ಗೆಲ್ಲೋದ್ಯಾರು? ಎಂದು ಪ್ರೋಮೋವನ್ನು ರಿಲೀಸ್ ಮಾಡಿದ್ದಾರೆ. ಪ್ರೋಮೋ ಹೋಲುವಂತೆ ರಕ್ಷಕ್ ಮತ್ತು ಬಾಳು ಮಧ್ಯೆ ಡೈಲಾಗ್‌ಗಳ ಜಟಾಪಟಿ ನಡೆದಿದೆ. ಮೊದಲಿಗೆ, ಈ ಸ್ಟೇಜ್ ಮೇಲೆ ಬಂದು ನಿಂತವರೇ ಲಕ್ಕಿ. ಇಡೀ ಕರ್ನಾಟಕದಲ್ಲಿ ಸರಿಗಮಪ ಶೋ ಅಂದ್ರೆ ಬೆಂಕಿ ಎಂದು ಬಾಳು ಬೆಳಗುಂದಿ ಹೇಳುತ್ತಿದ್ದಂತೆ, ಅವರ ಹವಾ ಇದೆ, ಇವರ ಹವಾ ಇದೆ ಅಂತಾರೆ. ನಾನು ಬಂದಮೇಲೆ ಬುಲೆಟ್‌ದೇ ಹವಾ ಎಂದು ರಕ್ಷಕ್ ಡೈಲಾಗ್ ಹೊಡೆದಿದ್ದಾರೆ.
ಮುಂದುವರೆದು, ಯಾವುದೋ ಒಂದು ಹಾಡು ಹಾಡಿ ಹಿಟ್ ಮಾಡಿ ಹಿಟ್ ಆದವನಲ್ಲ ಕಣಣ್ಣಾ ನಾನು. ಹಿಟ್ ಮೇಲೆ ಹಿಟ್ ಕೊಟ್ಟು, ಸೂಪರ್ ಹಿಟ್ ಆದವನ ಎಂಬ ಬಾಳು ಡೈಲಾಗ್‌ಗೆ, ಶಾಕ್ ಆಯ್ತಾ ಆಗಲೇ ಬೇಕು, ಆಗಲೇ ಬೇಕು ಅಂತ ತಾನೇ ನಿನ್ನನ್ನು ಈ ಜಾಗಕ್ಕೆ ಕರೆದುಕೊಂಡು ಬಂದಿದ್ದು ಎಂದು ನಟ ರವಿಶಂಕರ್ ಅವರ ಖಡಕ್ ಡೈಲಾಗ್ ಹೊಡೆದಿದ್ದಾರೆ ರಕ್ಷಕ್ ಬುಲೆಟ್. ಇದು ಬರೀ ಪ್ರೋಮೋ ಅಷ್ಟೇ ಆಗಿದ್ದು ಈ ಮಾತಿನ ಸಮರದಲ್ಲಿ ಗೆದ್ದವರ್ಯಾರು ನೋಡೋಕೆ Zee ಕನ್ನಡ ಚಾನಲ್ ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,27 Apr 2025
ಶ್ರೀಧರ್ ಪರಿಸ್ಥಿತಿ ಚಿಂತಾಜನಕ, ಮುದ್ದಾದ ಜೀವನ ಅಂತ್ಯದ ಹಾದಿ
Sun,27 Apr 2025