ಮಂಜುಳಾ ಅವರ ಮಗ ಈಗ ಹೇಗಿದ್ದಾರೆ ಗೊ ತ್ತಾ; ಕಿಚ್ಚ ಸುದೀಪ್ ಅವರ ಮುಖಭಾವ

 | 
ಹ್

ಬಜಾರಿ ಪಾತ್ರಕ್ಕೂ ಸೈ ನಟಿಸಿ ನಗಿಸಿ ಅಳೋದಕ್ಕೂ ಜೈ ಎನಿಸಿಕೊಂಡ ನಟಿ ಮಂಜುಳಾ ಅವರು. ಹೌದು 90ರ ದಶಕದ ನಟಿ ಮಣಿಯರಲ್ಲಿ ಮರೆಯಲಾಗದ ನಟಿ ಎಂದರೆ ಅದು ಮಂಜುಳಾ ಅವರು. ಕನ್ನಡ ಚಿತ್ರರಂಗದ  80 – 90ರ ದಶಕಗಳನ್ನು ಮೆಲುಕು ಹಾಕಿದರೆ, ಅದೆಷ್ಟೋ ಸಿನಿಮಾಗಳು ಮತ್ತೆ ಮತ್ತೆ ನೆನಪಾಗುತ್ತವೆ. ಆ ಸಿನಿಮಾದಲ್ಲಿನ ಹಾಡುಗಳು, ನಟ ನಟಿಯರು ಜನರ ಮನಸ್ಸಿನಲ್ಲಿ ಈಗಲೂ ಅಚ್ಚಳಿಯದಂತೆ ತಮ್ಮ ಅದ್ಭುತ ನಟನೆಯಿಂದ ಶಾಶ್ವತವಾಗಿ ನೆಲೆಸಿದ್ದಾರೆ ಎನ್ನಬಹುದು.

ಅಂದಿನ ಕಾಲದ ನಟಿಯರು ಇಂದಿಗೂ ಎವರ್ ಗ್ರೀನ್ ನಟಿಯರು ಎನಿಸಿಕೊಂಡಿದ್ದಾರೆ. ಅಂತವರಲ್ಲಿ ಕನ್ನಡದ ಮೇರು ನಟಿ ಮಂಜುಳ  ಕೂಡ ಒಬ್ಬರು.ಅದೆಷ್ಟೋ ಸಿನಿಮಾಗಳಲ್ಲಿ  ಅಭಿನಯಿಸಿ ಅತ್ಯದ್ಭುತ ಅಭಿನೇತ್ರಿ ಎನಿಸಿಕೊಂಡ ಕಲಾವಿದೆ ಮಂಜುಳಾ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಮಂಜುಳಾ ನಟಿಸದೇ ಇರುವ, ಮಾಡದೆ ಇರುವ ಪಾತ್ರಗಳೇ ಇಲ್ಲ. 

ಅವರ ನಟನೆಯ ಸಿನಿಮಾಗಳು ಇಂದಿಗೂ ಬಹುಶಃ ಥಿಯೇಟರ್ ನಲ್ಲಿ ತೆರೆ ಕಂಡರೆ 100 ಡೇಸ್ ಓಡಿದರೆ ಆಶ್ಚರ್ಯವಿಲ್ಲ. ನಟಿ ಮಂಜುಳಾ ಇಂದು ನಮ್ಮ ಜೊತೆಗೆ ಇಲ್ಲದೆ ಇದ್ದರೂ ಅವರ ನೆನಪು ಮಾತ್ರ ಶಾಶ್ವತವಾಗಿ ಉಳಿದಿದೆ. ಇನ್ನು ಈ ನಟಿಯ ಬಗ್ಗೆ ಈಗಲೂ ಕೂಡ ತಿಳಿದುಕೊಳ್ಳಲು ಜನರಿಗೆ ಕುತೂಹಲ ಇದೆ, ಹಾಗಾದ್ರೆ ನಟಿ ಮಂಜುಳಾ ಅವರಿಗೆ ಇರುವ ಒಬ್ಬನೇ ಒಬ್ಬ ಮಗ ಈಗ ಎಲ್ಲಿದ್ದಾರೆ. ಏನು ಮಾಡುತ್ತಿದ್ದಾರೆ ಗೊತ್ತಾದರೆ ಆಶ್ಚರ್ಯ ಪಡ್ತೀರಿ.

ದಿವಂಗತ ನಟಿ ಮಂಜುಳಾ ಅವರ ಮಗ ಅಭಿಷೇಕ್. ಖಾಸಗಿ ಕಂಪನಿ ಒಂದರಲ್ಲಿ ಉದ್ಯೋಗಿಯಾಗಿದ್ದು ಬೆಂಗಳೂರಿನ ನಿವಾಸಿಯಾಗಿದ್ದಾರೆ. ನಟಿ ಮಂಜುಳಾ ಅವರ ಮಗ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದು, ತಮಗೆ ತಮ್ಮ ತಾಯಿ ಅಭಿನಯದ ಎರಡು ಕನಸು ಸಿನಿಮಾ ತುಂಬಾ ಇಷ್ಟ ಎಂದಿದ್ದಾರೆ.

ಅಭಿಷೇಕ್ ಅವರ ಬಳಿ ನಿನ್ನ ತಾಯಿಯ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಎಂದು ಯಾರಾದ್ರೂ ಹೇಳಿದ್ರೆ ಬಹಳ ಖುಷಿಯಾಗುತ್ತಂತೆ. ಅವರಿಗೂ ಚಿತ್ರರಂಗದ ಬಗ್ಗೆ ಬಹಳ ಆಸಕ್ತಿ ಇದ್ದು ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ತನ್ನ ಮಗನನ್ನು ಚಿತ್ರರಂಗಕ್ಕೆ ನಟನಿಗಾಗಿ ಕಳುಹಿಸುವ ಬಗ್ಗೆ ಆಸಕ್ತಿ ಇದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.