ಹಕ್ಕಿಪಿಕ್ಕಿ ಹೇರ್ ಆಯಿಲ್ ಹಚ್ಚಿದ್ರೆ ನಿಜಕ್ಕೂ ಕೂದಲು ಬರುತ್ತಾ, ಇಲ್ಲಿದೆ ಅಸಲಿ ಸತ್ಯ

 | 
Hu
 ಕೂದಲು ಉದುರುವ ಸಮಸ್ಯೆ ಬಹುತೇಕರನ್ನು ಕಾಡುತ್ತಿದೆ. ತಲೆಕೂದಲು ಬಾಚುವಾಗ ಕೂದಲು ಬಾಚಣಿಗೆಯಲ್ಲಿ ತುಂಬಿರುತ್ತದೆ. ಋತುಗಳು ಬದಲಾಗುತ್ತಿರಬಹುದು, ಆದರೆ ಕೂದಲು ಉದುರುವಿಕೆಯ ಸಮಸ್ಯೆ ಎಂದಿಗೂ ಕೊನೆಗೊಳ್ಳುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುತ್ತಾರೆ. ಆದರೂ ಕೂದಲು ಉದುರುವ ಸಮಸ್ಯೆ ಮಾತ್ರ ನಿಲ್ಲೋದಿಲ್ಲ. 
ಹಾಗಾಗಿ ಕೂದಲು ಉದುರುವ ಸಮಸ್ಯೆಯನ್ನು ನಿಲ್ಲಿಸಲು ಸಹಕಾರಿಯಾಗಬಲ್ಲ ಎಣ್ಣೆಯೊಂದನ್ನು ನಾವಿಲ್ಲಿ ತಿಳಿಸಲಿದ್ದೇವೆ.ಹುಣಸೂರು ತಾಲೂಕಿನ ಒಂದನೇ ಪಕ್ಷಿರಾಜಪುರ ಹಕ್ಕಿಪಿಕ್ಕಿ ಕಾಲನಿಯಲ್ಲಿ ಪರಿಶಿಷ್ಟ ವರ್ಗಗಳ ಬುಡಕಟ್ಟು ಜನರ ಪಾರಂಪರಿಕ ವೈದ್ಯ ಪದ್ಧತಿ ಉತ್ಪಾದಿತ ಗಿಡ ಮೂಲಿಕೆ ಔಷಧಗಳ ತಯಾರಿಸುತ್ತಾರೆ ಆದಿವಾಸಿಗಳ ಹೇರ್ ಆಯಿಲ್ ಎಂದೇ ಫೇಮಸ್.
ಹೌದು ಕೆಲವರು ಇವರ ಹೆಸರು ಹೇಳಿಕೊಂಡು ಮೋಸ ಮಾಡಿದರೆ ಇನ್ನು ಕೆಲವರು ಇವರ ಎಣ್ಣೆಯೇ ಸುಳ್ಳು ಎಂದು ಜರಿದಿದ್ದಾರೆ. ಅಷ್ಟಕ್ಕೂ ವಿಶ್ವ ಮಾನ್ಯತೆ ಪಡೆದಿರುವ ಇವರ ಎಣ್ಣೆಗೆ ವಿದೇಶದಲ್ಲಿ ಕೂಡ ಸಾಕಷ್ಟು ಉತ್ತಮ ಹೆಸರಿದೆ. ನೂರೆಂಟು ಬಗೆಯ ಗಿಡ ಮೂಲಿಕೆಗಳ ಬಳಸಿ ಮಾಡುವ ಈ ಎಣ್ಣೆಯನ್ನು ಹಲವಾರು ಕಲಾವಿದರು ಸಹ ಬಳಸುತ್ತಾರೆ.
ಇನ್ನು ತಳ ಸಮುದಾಯದ ಈ ಬುಡಕಟ್ಟು ಮಂದಿ ಗಿಡಮೂಲಿಕೆಗಳನ್ನು ಬಳಸಿ ಕೇಶತೈಲ, ಮಸಾಜ್‌ ಎಣ್ಣೆ ತಯಾರಿಕೆ ಹಾಗೂ ವಿವಿಧ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವುದನ್ನು ಗುರುತಿಸಿದ್ದು, ಇವರನ್ನು ಮುಖ್ಯವಾಹಿನಿಗೆ ತರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಆಯವ್ಯಯದಲ್ಲಿ ಬುಡಕಟ್ಟು ಜನರ ಪಾರಂಪರಿಕ ವೈದ್ಯ ಪದ್ಧತಿ ಮತ್ತು ಆಚರಣೆಗಳ ದಾಖಲೀಕರಣ ಹಾಗೂ ಆಯ್ದ ಔಷಧಿಗಳ ಸಂಸ್ಕರಣಾ ಘಟಕ ಸ್ಥಾಪಿಸಲು ರಾಜ್ಯದ ಶಿಕಾರಿಪುರ ಹಾಗೂ ಹುಣಸೂರಿನಲ್ಲಿ ಆಯುಷ್‌ ಇಲಾಖೆ ಸಹಯೋಗದೊಂದಿಗೆ ಘಟಕ ಸ್ಥಾಪಿಸಲು 5 ಕೋಟಿ ರೂ. ಮಂಜೂರು ಮಾಡಲಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.