ದೇವರಂತ ಗುರೂಜಿ ಮಗ ನಿಜಕ್ಕೂ ಐಶಾರಾಮಿ ಜೀವನ ನಡೆಸುತ್ತಿದ್ದಾರಾ
Feb 15, 2025, 14:36 IST
|

ನಮಸ್ಕಾರ ಸ್ನೇಹಿತರೇ.. ಹಲವಾರು ಬಾರಿ ನಾವಂದುಕೊಂಡತಹ ಬದುಕು ನಮ್ಮದಲ್ಲ ಎನ್ನಿಸುತ್ತದೆ. ಆಗ ಮಾನಸಿಕವಾಗಿ ಕುಗ್ಗಿ ಕಂಗಾಲಾಗ್ತೇವೆ. ದೇವರ ಹಾಗೂ ಜ್ಯೋತಿಷಿಗಳ ಮೊರೆ ಹೋಗ್ತೇವೆ. ಅವರ ಮಾತುಗಳ ನಂಬಿ ಹೋಮ ಹವನ ಪೂಜೆ ಪುನಸ್ಕಾರ ಎಲ್ಲವನ್ನು ಮಾಡ್ತೇವೆ. ಎಕೆಂದರೆ ನಮಗೆ ಭವಿಷ್ಯ ಚೆನ್ನಾಗಿರಬೇಕು ಎಂಬ ನಂಬಿಕೆ ಆಳವಾಗಿ ಬೇರೂರಿರುತ್ತದೆ. ಅದನ್ನೇ ಬಂಡವಾಳ ಮಾಡಿಕೊಂಡ ಹಲವಾರು ಜನ ತಾವೇನೋ ದೈವಾಂಶ ಸಂಭೂತರು, ಅವಧೂತರು ಎನ್ನುವ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂತಹ ಒಬ್ಬ ಪ್ರಖ್ಯಾತ ಜ್ಯೋತಿಷಿಯ ಕುರಿತಾಗಿ ಒಂದಿಷ್ಟು ನೋಡ್ಕೊಂಡ್ ಬರೋಣ ಬನ್ನಿ
ಸ್ನೇಹಿತರೇ...ನಿರಂತರವಾಗಿ ಕಾಡುವ ನೋವುಗಳಿಗೆ ಒಂದಿಷ್ಟು ಸಾಂತ್ವನ, ನಂಬಿಕೆ , ದೃಢ ಸಂಕಲ್ಪ, ಕಷ್ಟಗಳನ್ನು ಸಹಿಸುವ ಮನಸ್ಸಿಗೆ ಭರವಸೆಯ ಹಾದಿ ಅಂತ ಟ್ಯಾಗ್ ಲೈನ್ ಹೊಂದಿರುವ ಮಹರ್ಷಿವಾಣಿ ಕಾರ್ಯಕ್ರಮ ನೀವು ನೋಡಿಯೇ ಇರ್ತಿರಿ.ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ 8 ರಿಂದ 9.3೦ ರವರೆಗೆ ಪ್ರಸಾರವಾಗುವ ಮಹರ್ಷಿವಾಣಿ ನೊಂದವರ ನೋವಿಗೆ ಧ್ವನಿಯಾಗಿ, ನಮ್ಮ ಆಚಾರ, ವಿಚಾರಗಳ ಪ್ರತಿಧ್ವನಿಯಾಗಿದೆ ಅನ್ನೋ ಮಾತು ಕೂಡ ಆಗೊಮ್ಮೆ ಈಗೊಮ್ಮೆ ಕೇಳಿ ಬರ್ತಿದೆ.
ಸ್ನೇಹಿತರೇ...ಪರಿಸರದಲ್ಲಿ ಸಿಗುವ ಸುಲಭ ಪದಾರ್ಥಗಳ ಮುಖಾಂತರ ವಿಶೇಷ ತಂತ್ರಸಾರ, ಪೂಜಾ ವಿಧಾನ. ಸಮಸ್ಯೆಗಳ ನಿರ್ವಹಣೆಗೆ ಬೇಕಾದ ಮನೋಧೈರ್ಯ, ಸನಾತನ ಧರ್ಮದ ತಳಹದಿಯ ಮೇಲೆ ಆಚಾರ, ವಿಚಾರಗಳ ಮೂಲಕ ಪ್ರತಿ ನಿತ್ಯ ಸಂಸ್ಕಾರದ , ಅರಿವಿನ ಪಾಠ. ಜಾತಕ ,ಗ್ರಹಗಳ ದೋಷಗಳ ಭಯವನ್ನು ಬದಿಗಿಟ್ಟು ದೃಢ ಸಂಕಲ್ಪ ಮತ್ತು ಮನೋಧೈರ್ಯದಿಂದ ಬದುಕಿನ ಸವಾಲುಗಳನ್ನು ಎದುರಿಸಬೇಕೆಂಬುದು ಅಲ್ಲಿ ಬರುವ ಆನಂದ ಮಹರ್ಷಿಯ ಮಹಾಮಂತ್ರವಾಗಿದೆ.
ಸ್ನೇಹಿತರೇ... ಅಷ್ಟೇ ಅಲ್ಲ ಗುರುಬಲಕ್ಕಾಗಿ ಗುರು ಪ್ರಾರ್ಥನೆ, ಶನಿ ಕಾಟ ಇದ್ದಲ್ಲಿ ಮೂರ್ತಿ ಪೂಜೆ, ಹೋಮ ಹವನ ಹೀಗೆ ನೂರೆಂಟು ಪೂಜೆ ಮಾಡುತ್ತ ಜನರಿಗೆ ಸಾಂತ್ವನ ತುಂಬುತ್ತ, ಭವಿಷ್ಯದ ಬಗ್ಗೆ ಧೈರ್ಯ ತುಂಬುತ್ತ. ಮೊನ್ನೆ ತಾನೇ ಮಹಾ ಕುಂಭಮೇಳದಲ್ಲಿ ಶಿವಲಿಂಗ ಹೊತ್ತು ಸಾಮನ್ಯರ ನಡುವೆ ಶ್ರೀ ಸಾಮಾನ್ಯರಾಗಿ ಆನಂದ ಗುರೂಜಿ ಹಾಗೂ ಅವರ ಸುಪುತ್ರ ಶ್ರೀನಿವಾಸ್ ಶರ್ಮ ಜನರಿಗೆ ಹತ್ತಿರವಾಗಿದ್ದಾರೆ.
ಸ್ನೇಹಿತರೇ ಆದ್ರೆ ನಾವ್ ಇವತ್ತು ಹೇಳೋಕೆ ಹೊರಟಿರೋದು ಬೇರೇನೆ ಇದೆ. ಹೌದು ನಿಮಗೆಲ್ಲ ಗೊತ್ತಿರುವ ಹಾಗೆ ಆನಂದ ಗುರೂಜಿ ಹಲವರ ಹುಬ್ಬೇರಿಸುವಂತೆ ಭವಿಷ್ಯ ನೋಡುತ್ತಾರೆ. ಪರಿಹಾರ ಹೇಳ್ತಾರೆ . ಆದರೆ ಕಳೆದ ವರ್ಷ 50 ಲಕ್ಷ ಹಣ ಕಳೆದು ಕೊಂಡು ಪೊಲೀಸ್ ಇಲಾಖೆ ಮೊರೆ ಹೋಗಿದ್ದು ಇದೇ ದೇವ ಮಾನವರು ಸೋ ಕಾಲ್ಡ್ ಗುರೂಜಿಗಳು. ಅಷ್ಟಕ್ಕೂ ಅವರ ಭವಿಷ್ಯ ಅವರಿಗೆ ಗೊತ್ತಾಗಲೇ ಇಲ್ವಾ. ಬ್ಲಾಕ್ ಮೇಲ್ ಮಾಡಿದ್ರಿಂದ ಹಣ ನೀಡಬೇಕಾಯ್ತು ಅಂದಿರೋ ಇವರಿಗೆ ಬ್ಲ್ಯಾಕ್ ಮೇಲ್ ಮಾಡುವಂತ ಅದೆಂತಹ ವಿಷಯವಿತ್ತು? ಏಕೆಂದರೆ ಹೇಳಿ ಕೇಳಿ ಅವರೇ ಹೇಳಿಕೊಂಡತೆ ದೈವಾಂಶ ಸಂಭೂತರಲ್ಲವೇ!
ಸ್ನೇಹಿತರೇ.... ಅದೆಲ್ಲ ಹೋಗಲಿ ಬಿಡಿ ಇನ್ನು ಅವರ ಸುಪುತ್ರ ಶ್ರೀನಿವಾಸ ಶರ್ಮ ಅವರ ಕುರಿತು ನೋಡೋದಾದರೆ. ಟಿವಿ ಚಾನಲ್ ಗಳಲ್ಲಿ ಅಪ್ಪನೊಂದಿಗೆ ಕಾಣಿಸಿ ಕೊಳ್ಳುವ ಇವರ ಮುಖದಲ್ಲಿ ವಿಭೂತಿಯ ನಾಮಗಳೇನು!, ರುದ್ರಾಕ್ಷಿಗಳೇನು! ಗಂಧ ಚಂದನದ ತಿಲಕಗಳೇನು!? ನಾಗ, ಹೋಮಗಳ ಕುರಿತು ಪುಂಖಾನು ಪುಂಖವಾಗಿ ಹೇಳೋದೇನು!?ಆಹಾ ನೋಡುತ್ತಿದ್ದ ಹಾಗೆ ಭಕ್ತಿ ಮೂಡಬೇಕು ಅನ್ನಿಸೋ ರೀತಿಯಲ್ಲಿ ಕಾಣೋದೇನು . ಅದೆಲ್ಲಾ ಬಿಡಿ ಮೊನ್ನೆ ಮಹಾ ಕುಂಭಮೇಳದಲ್ಲಿ ಬಾಹುಬಲಿ ಸಿನಿಮಾದಲ್ಲಿ ತೋರಿಸಿದ ರೀತಿಯಲ್ಲಿ ಶಿವ ಲಿಂಗ ಹೊತ್ತು ಹೋಗಿದ್ದೇನು!? ಹೇಗಿರಬೇಕು ಭಕ್ತಿ ಎಂದು ಅಂದುಕೊಳ್ಳುವಷ್ಟರಲ್ಲಿ ಬಯಲಾಯ್ತು ನೋಡಿ ಇವರ ಅಸಲೀಯತ್ತು..
ಸ್ನೇಹಿತರೇ... ಹೌದು ಕೇಸರಿ ಮಡಿಯುಟ್ಟು ಕುಳಿತರೆ ಅದೇನೋ ಆನಂದ. ದೇವಿ ಸನ್ನಿಧಿಯಲ್ಲಿ ದಿನದ ಬಹಳಷ್ಟು ಹೊತ್ತು ಕಳೆಯುವ ನಾ ದೈವ ಭಕ್ತ ಎಂದು ಹೇಳಿಕೊಳ್ಳುವ ಇವರ ಅಸಲಿ ರೂಪವೇ ಬೇರೆ.
Car ವಿಡಿಯೋ
ಅರೆರೆ ನೋಡಿದ್ರಲ್ಲಾ... ಲಕ್ಷುರಿ ಕಾರಿನಲ್ಲಿ ಶೂ ಧರಿಸಿ ಹೀರೋ ರೀತಿ ಪೋಸ್ ಕೊಟ್ಟಿದ್ದು ಕೂಡಾ ಅದೇ ಶ್ರೀನಿವಾಸ ಶರ್ಮ ಅವ್ರು. ಯಾಕ್ರೀ ಸನ್ಯಾಸಿಗಳು ಕಾರಲ್ಲಿ ತಿರುಗ್ ಬಾರ್ದ. ಅವರಿಗೆ ಜೀವನ ಇಲ್ವಾ ಅನ್ನೋರು ಹಲವಿರರಬಹುದು ಆದ್ರೆ. ತೆರೆಯ ಮುಂದೆ ದೇವರ ಸೇವಕರು. ಸಮಾನ್ಯ ಜನರ ಕಷ್ಟ ನಿವಾರಿಸಲು ಬಂದವರು ಎಂದೆಲ್ಲ ಹೇಳಿ ಈಗ ಈ ಶೋಕಿ ಬೇಕಾ ಅಂತಿದ್ದಾರೆ ಇನ್ನು ಕೆಲವರು.
ಸ್ನೇಹಿತರೇ... ದುಡ್ಡು ಯಾರಪ್ಪನ ಮನೆ ಸೊತ್ತು ಅಲ್ಲ. ಇವರು ಇವರ ಹಣದಲ್ಲಿ ಏನಾದ್ರು ಮಾಡ್ಕೊಂಡು ಹೋಗ್ಲಿ ಆದ್ರೆ ಭವಿಷ್ಯ. ನಿಮ್ಮ ಕಷ್ಟಗಳಿಗೆ ಪರಿಹಾರ ನೀಡ್ತಿವೆ ಎಂದು ಪುಂಖಾನು ಪುಂಖವಾಗಿ ತೆರೆಯ ಮುಂದೆ ಹೇಳಿ ಅವರಿಂದ ಹಣ ಪಡೆದು ಪೂಜೆ ಪುನಸ್ಕಾರ ಮಾಡಿ. ಜನರ ನಂಬಿಕೆ ಜೊತೆಗೆ ಆಟವಾಡುವುದು ಇದೆಯಲ್ಲಾ ಅದು ನಿಜಕ್ಕೂ ಬೇಸರ ಮೂಡಿಸಿದ ಸಂಗತಿ. ಮಾಡೋದೆಲ್ಲ ಅನಾಚಾರ ಮನೆಮುಂದೆ ಬೃಂದಾವನ ಅನ್ನಿಸಿ ಬಿಡುತ್ತೆ ಅದೆಲ್ಲಾ ಹೋಗ್ಲಿ ಬಿಡ್ರೀ.... ಆನಂದ ಗುರೂಜಿ ನೇತೃತ್ವದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಶ್ರೀನಿವಾಸ ಶರ್ಮ ಅವರೇ ಜೊತೆಯಾಗಬೇಕೆ ಅಪ್ಪನ ನಂತರದಲ್ಲಿ ಮಗನಿಗೆ ಆಸ್ತಿ ಬಂದಂತೆ ಕಾರ್ಯಕ್ರಮ ನಡೆಸಿಕೊಡಲು ಕೂಡ ಇವರೇ ಬೇಕೇನು? ದೈವಾಂಶ ಸಂಭೂತರೂ ಅನ್ನಿಸಿಕೊಂಡವರು ಮಹಾ ಕುಂಭಮೇಳದಲ್ಲಿ ಪ್ಲಾಸ್ಟಿಕ್ ಶಿವಲಿಂಗ ಹೊತ್ತು ಹೋಗಿ ಹೆಸರು ಮಾಡಬೇಕೇನು? ಜನರಿಗೆ ಭವಿಷ್ಯ ನೋಡಿ ಹೇಳುವ ಇವರೇ ಮೋಸ ಹೋಗಿದ್ದಾದರೂ ಯಾಕೇ? ಹೀಗೇ ಹತ್ತು ಹಲವು ಪ್ರಶ್ನೆಗಳು ಹಲವರ ಮನದಲ್ಲಿದೆ. ಇವಕ್ಕೆಲ್ಲ ಆನಂದ ಗುರೂಜಿ ಅವರೇ ಮುಂದೊಂದು ದಿನ ಉತ್ತರ ಕೊಡಬಹುದು ಎಂಬ ನಿರೀಕ್ಷೆಯಲ್ಲಿ ಭಕ್ತರಿದ್ದಾರೆ.