ಮುಸ್ಲಿಂ ಮದುವೆಯಾದರು ಸನಾತನ ಧರ್ಮ ಪೂಜಿಸುತ್ತಿರುವ ಕರೀನಾ ಕಪೂರ್;

 | 
ರ
ಕಪೂರ್ ಕುಟುಂಬದ ಮಗಳಾದ ಕರೀನಾ, ನಟ ಸೈಫ್ ಅಲಿ ಖಾನ್ ಅವರನ್ನು ವಿವಾಹವಾಗಿ ಪಟೌಡಿ ಕುಟುಂಬದ ಸೊಸೆಯಾದರು. ಈ ದಂಪತಿಗೆ ತೈಮೂರ್ ಮತ್ತು ಜೆಹ್ ಎಂಬ ಇಬ್ಬರು ಮಕ್ಕಳಿದ್ದಾರೆ. ಪ್ರತಿಷ್ಠಿತ ಹಿಂದೂ ಕುಟುಂಬದವರಾಗಿದ್ದರೂ, ಕರೀನಾ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಲು ನಿರ್ಧರಿಸಿದಾಗ, ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದರು.
ಹಿಂದೂ ಕುಟುಂಬ ಹುಡುಗಿ ಕರೀನಾ ಮುಸ್ಲಿಂ ವ್ಯಕ್ತಿಯನ್ನ ಮದುವೆಯಾದ ನಂತರ ನಟಿಯ ಬಗ್ಗೆ ಅನೇಕರು ಕಿಡಿಕಾರಿದ್ರು. ಆದ್ರೆ ನಟಿ ಪ್ರೀತಿ ಧರ್ಮಕ್ಕಿಂತ ಹೆಚ್ಚಾಗಿದೆ ಎಂದಿದ್ರು. ಮದುವೆಯಾದ ಬಳಿಕ ಕರೀನಾ ಯಾವ ಧರ್ಮವನ್ನು ಅನುಸರಿಸುತ್ತಾರೆ, ಹಿಂದೂ ಅಥವಾ ಮುಸ್ಲಿಂ? ಈ ರಹಸ್ಯವನ್ನು ಅವರ ಪುತ್ರರಾದ ತೈಮೂರ್ ಅಲಿ ಖಾನ್ ಮತ್ತು ಜೆಹ್ ಅವರ ದಾದಿ ಲಲಿತಾ ಡಿಸಿಲ್ವಾ ಬಯಲು ಮಾಡಿದ್ದಾರೆ.
ಕರೀನಾ ಕಪೂರ್ ಖಾನ್ ಮಕ್ಕಳ ತಾಯಿ ಆಗಿ ಹೇಗಿರ್ತಾರೆ? ಕೆಲಸದ ಜೊತೆಗೆ ತನ್ನ ಮಕ್ಕಳಿಗೆ ಹೇಗೆ ಟೈಮ್ ಕೊಡ್ತಾರೆ. ಮಕ್ಕಳೊಂದಿಗೆ ಅವರ ನಡವಳಿಕೆ ಹೇಗಿದೆ? ಯಾವ ಧರ್ಮವನ್ನು ಫಾಲೋ ಮಾಡ್ತಾರೆ? ಸೈಫ್ ಅಲಿ ಖಾನ್ ಮತ್ತು ಕರೀನಾ ಮನೆಯಲ್ಲಿ ಕುಟುಂಬ ಸದಸ್ಯರು ಮತ್ತು ಸಿಬ್ಬಂದಿ ನಡುವೆ ತಾರತಮ್ಯವಿದೆಯೇ? ಇಂತಹ ಹಲವು ಪ್ರಶ್ನೆಗಳಿಗೆ ತೈಮೂರ್ ಮತ್ತು ಜೆಹ್ ಅವರ ದಾದಿ ಲಲಿತಾ ಡಿಸಿಲ್ವಾ ಉತ್ತರ ನೀಡಿದ್ದಾರೆ. ಅವ್ರು ಕೊಟ್ಟ ಉತ್ತರ ತಿಳಿದ್ರೆ ನೀವು ಕೂಡ ಆಶ್ಚರ್ಯ ಪಡುತ್ತೀರಾ.
ದಾದಿ ಲಲಿತಾ ಡಿಸಿಲ್ವಾ ಅವರು ನಟಿ ಕರೀನಾ ಕಪೂರ್ ಫಾಲೋ ಮಾಡುವ ಧರ್ಮದ ಬಗ್ಗೆ ಮಾತಾಡಿದ್ದಾರೆ. ಕರೀನಾ ಕಪೂರ್ ಅವರು ಹಿಂದೂ ಅಥವಾ ಮುಸ್ಲಿ ಎರಡೂ ಧರ್ಮವನ್ನು ಕೂಡ ಫಾಲೋ ಮಾಡೋದಿಲ್ಲವಂತೆ. Mooಆಕೆ ತನ್ನ ತಾಯಿ ಬಬಿತಾ ಕಪೂರ್ನಂತೆ ಕ್ರಿಶ್ಚಿಯನ್ ಧರ್ಮವನ್ನು ಫಾಲೋ ಮಾಡ್ತಾರೆ ಎಂದು ದಾದಿ ಲಲಿತಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.