ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ, ರೊಚ್ಚಿಗೆದ್ದ ಸ್ನೇಹಿತ್ ಮಾಡಿದ್ದೇನು ಗೊ.ತ್ತಾ

 | 
Hdhh

ಬಿಗ್ಬಾಸ್ ಮನೆಯಲ್ಲಿ ಶುರುವಾಗಿದೆ ಲವ್ ಕಹಾನಿ. ಹೌದು ಕೆಲ ದಿನಗಳ ಹಿಂದಷ್ಟೇ ಬಿಗ್‌ ಬಾಸ್‌ ಸೀಸನ್‌ 10 ಶುರುವಾಗಿದೆ. ಕಿಚ್ಚ ಸುದೀಪ್‌ ಒಬ್ಬೊಬ್ಬ ಸ್ಪರ್ಧಿಗಳನ್ನು ಮನೆಯ ಒಳಗಡೆ ಕಳಿಸುತ್ತಿದ್ದಾರೆ. ಬಿಗ್‌ ಮನೆ ಪ್ರವೇಶಕ್ಕೆ ಒಂದಷ್ಟು ಹೊಸ ಮಾನದಂಡಗಳನ್ನು ಅಳವಡಿಸಿಕೊಂಡಿರುವ ಈ ಸಲದ ಬಿಗ್‌ಬಾಸ್‌ ಮನೆ ಪ್ರವೇಶಕ್ಕೂ ಮುನ್ನ ವೋಟಿಂಗ್‌ ವ್ಯವಸ್ಥೆಯೊಂದನ್ನು ಪರಿಚಯಿಸಿದೆ.

ಅಲ್ಲಿ ಶೇ 80ರ ಮೇಲೆ ವೋಟ್‌ ಪಡೆದವರಿಗೆ ಮಾತ್ರ ಮನೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಆ ಪೈಕಿ ಮೊದಲ ಸ್ಪರ್ಧಿಯಾಗಿ ನಾಗಿಣಿ ಸೀರಿಯಲ್‌ ಖ್ಯಾತಿಯ ನಮ್ರತಾ ಗೌಡ ಮನೆ ಪ್ರವೇಶ ಪಡೆದಿದ್ದಾರೆ. ಅದೇ ರೀತಿ ಕಳೆದ ಹಲವು ವರ್ಷಗಳಿಂದ ಸಿನಿಮಾ, ಸೀರಿಯಲ್‌ನಲ್ಲಿ ನಟಿಸಬೇಕು ಅನ್ನೋ ಆಸೆಗೆ ಸಾಕಷ್ಟು ಆಡಿಷನ್‌ ನೀಡಿ ಕೊನೆಗೆ ನಮ್ಮನೆ ಯುವರಾಣಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು ನಟ ಸ್ನೇಹಿತ್‌ ಗೌಡ. 

ಇದೀಗ ಬಿಗ್‌ಬಾಸ್‌ಗೂ ಎಂಟ್ರಿ ಪಡೆದುಕೊಂಡಿದ್ದಾರೆ.
ಡಯಟ್‌ ವಿಚಾರದಲ್ಲಿ ತಾನೊಬ್ಬ ಕಟ್ಟುನಿಟ್ಟು ಎಂದೇ ಹೇಳಿಕೊಳ್ಳುವ ಸ್ನೇಹಿತ್‌ ಕಳೆದ 10 ವರ್ಷದಿಂದ ಸಕ್ಕರೆ ಮತ್ತು ಉಪ್ಪು ತಿನ್ನದೆ ಡಯಟ್‌ ಮುಂದುವರಿಸಿದ್ದಾರೆ. ಸುದೀಪ್‌ ಮುಂದೆ ಆಗಮಿಸಿದ ಸ್ನೇಹಿತ್‌ಗೆ ಆಡಿಯೆನ್ಸ್‌ ಕಡೆಯಿಂದಲೂ 80 ಪ್ಲಸ್‌ ಮಾರ್ಕ್ಸ್‌ ಸಿಕ್ಕಿದೆ. ನೇರವಾಗಿ ಬಿಗ್‌ ಮನೆ ಪ್ರವೇಶ ಪಡೆದಿದ್ದಾರೆ.

ಮ್ಯೂಸಿಕ್‌ ಅಂದ್ರೆ ತುಂಬ ಇಷ್ಟ ಈ ಇಶಾನಿಗೆ. ಮೈಸೂರಿನಲ್ಲಿ ಹುಟ್ಟಿದ್ದು, ದುಬೈನಲ್ಲಿ ಬೆಳೆದಿದ್ದು. ಬಿಗ್‌ ಬಾಸ್‌ ಅಂದ್ರೆ ಮೊದಲಿಂದಲೂ ಇಶಾನಿಗೆ ಇಷ್ಟ. ಇದೀಗ ರ್ಯಾಪರ್‌ ಆಗಿಯೇ ಅವರು ಗುರುತಿಸಿಕೊಂಡಿದ್ದಾರೆ. ಇಶಾನಿಗೂ ಸಹ ಬಿಗ್‌ ವೇದಿಕೆ ಮೇಲೆ ಪಬ್ಲಿಕ್‌ ಕಡೆಯಿಂದ 80 ಪ್ಲಸ್‌ ವೋಟ್‌ ಸಿಕ್ಕಿದೆ. ಇದೇ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. 

ಹಿಂದಿನ ವಿನ್ನರ್‌ ಮಂಜು ಪಾವಗಡ ಜತೆಗೂ ಒಂದಷ್ಟು ಹಾಸ್ಯ ಚಟಾಕಿ ಹಾರಿಸಿದ್ದಾರೆ ಇಶಾನಿ. ಕೊನೆಗೆ ಕಣ್ಣೀರು ಹಾಕುತ್ತಲೇ ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದಾರೆ. ಮನೆ ಪ್ರವೇಶ ಪಡೆದು, ವೆಲ್‌ಕಮ್‌ ಡ್ರಿಂಕ್‌ ಅಂತ ಕಾಫಿ ಕೊಟ್ಟು ಸ್ವಾಗತಿಸಿದ್ದಾರೆ ಸ್ನೇಹಿತ್‌. ಸ್ನೇಹಿತ್‌ ಮತ್ತು ನಮ್ರತಾಗೂ ರ್ಯಾಪ್‌ ಹೇಳಿ ಮೋಡಿ ಮಾಡಿದ್ದಾರೆ ಇಶಾನಿ. 

ಇನ್ನು ಸ್ನೇಹಿತ್ ಹಾಗೂ ಇಶಾನಿ ನೋಡ್ತಿದ್ದರೆ ಒಳಗೊಳಗೇ ಲವ್ ಅಲ್ಲಿ ಬಿದ್ದಿದ್ದಾರೆ ಅನ್ನಿಸುವಂತಿದೆ. ಈಗಾಗಲೇ ಸಾಕಷ್ಟು ಹುಡುಗಿಯರ ಕ್ರಶ್ ಆದ ಸ್ನೇಹಿತ್ ಇಶಾನಿ ಯ ಪ್ರೀಮಿಯಾಗ್ತಾನಾ ಅಥವಾ ಸ್ನೇಹಿತನಾಗೇ ಇರುತ್ತಾನಾ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.