ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪ್ ಬಂದ ಛಲಪತಿ ಮಗ, ಫಿದಾ ಆದ ಪುನೀತ್ ರಾಜ್‍ಕುಮಾರ್ ಕುಟುಂಬ
May 3, 2025, 15:04 IST
|

ಇನ್ನು ಛಲಪತಿ ಮತ್ತು ಲಕ್ಷ್ಮೀ ದಂಪತಿಯ ಪುತ್ರನಾಗಿರುವ ಹರ್ಷ ವರ್ಧನ್ ಪಡೆದುಕೊಂಡಿರುವ ಅಂಕಗಳ ವಿವರ ಹೀಗಿದೆ. ಹರ್ಷ ವರ್ಧನ್ 625ಕ್ಕೆ 595 ಅಂಕಗಳನ್ನು ಪಡೆದುಕೊಂಡಿದ್ದಾನೆ. ಕನ್ನಡದಲ್ಲಿ 121, ಇಂಗ್ಲಿಷ್‌ನಲ್ಲಿ 93, ಹಿಂದಿಯಲ್ಲಿ 100, ಗಣಿತ, 97, ವಿಜ್ಞಾನ 86 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಹರ್ಷ ವರ್ಧನ್ ಪಡೆದುಕೊಂಡಿದ್ದಾನೆ. ಹಿಂದಿಯಲ್ಲಿ 100ಕ್ಕೆ 100 ಅಂಕ ಪಡೆದಿರುವುದು ವಿಶೇಷ. ಮಗನ ಈ ಸಾಧನೆಗೆ ಛಲಪತಿ ದಂಪತಿ ಹೆಮ್ಮೆ ಪಟ್ಟಿದ್ದಾರೆ.
ಇನ್ನು ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ಛಲಪತಿ ಅವರ ಮಗಳು ಅಮೂಲ್ಯ 94.33% ಅಂಕ ಪಡೆದುಕೊಂಡಿದ್ದರು. ಕನ್ನಡದಲ್ಲಿ 98, ಇಂಗ್ಲೀಷ್‌ನಲ್ಲಿ 90, ಎಕನಾಮಿಕ್ಸ್‌ನಲ್ಲಿ 97, ಬಿಸಿನೆಸ್ ಸ್ಟಡೀಸ್‌ನಲ್ಲಿ 90, ಅಕೌಂಟೆನ್ಸಿಯಲ್ಲಿ 96, ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕಗಳನ್ನ ಅಮೂಲ್ಯ ಪಡೆದುಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಮಗಳ ಸಾಧನೆಯನ್ನು ಕೊಂಡಾಡಿದ್ದ ಛಲಪತಿಗೆ ಈಗ ಮಗನಿಂದಲೂ ಖುಷಿ ಸಿಕ್ಕಿದೆ.
ನನ್ನ ಪುತ್ರಿ ಅಮೂಲ್ಯಳ ಸಾಧನೆಗೆ ನಮ್ಮ ಯಜಮಾನರು ಪುನೀತ್ ರಾಜ್‌ಕುಮಾರ್ ಅವರ ಆಶೀರ್ವಾದವೇ ಕಾರಣ. ನನ್ನ ಮಗಳು ಪ್ರೈಮರಿ ಸ್ಕೂಲ್‌ನಲ್ಲಿ ಇದ್ದಾಗಿನಿಂದಲೂ ನಮ್ಮ ಯಜಮಾನರೇ ಅವಳ ಖರ್ಚು ವೆಚ್ಚ ನೋಡಿಕೊಂಡಿದ್ದರು. ನನ್ನಿಬ್ಬರು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅವರೇ ಹೊತ್ತಿದ್ದರು ಎಂದು ಪುನೀತ್ ರಾಜ್‌ಕುಮಾರ್ ಅವರ ಸಹಾಯವನ್ನು ಛಲಪತಿ ನೆನಪು ಮಾಡಿಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023