ನನ್ನನ್ನು ಮುಸ್ಲಿಂ ಮಾಡಿ ಆದಿಲ್ ಕೈ ಕೊಟ್ಟ ಎಂದು ಮೆಕ್ಕಾದ ಅಲ್ಲಾನ ಮುಂದೆ ರಾಖಿ ಕಣ್ಣೀರು, ಮನುಕುಲವೇ ಕಂಗಾಲು

 | 
Hd

ಯಾ ಅಲ್ಲಾ ಹ್​... ಇದೇನು ಮಾಡಿದೆ? ಆತ ನನ್ನ ಜೀವನ ಹಾಳು ಮಾಡಿದ. ಬಾಲಿವುಡ್​ನಲ್ಲಿ ಮಿಂಚಲು ನನ್ನನ್ನು ಬಳಸಿಕೊಂಡ. ಮಹಿಳೆಯೊಬ್ಬಳ ಜೀವನವನ್ನೇ ಬರ್ಬಾದ್ ಮಾಡಿದ. ನ್ಯಾಯ ಕೋರಿ ನಿನ್ನ ಬಳಿ ಬಂದಿದ್ದೇನೆ. ನನಗೆ ನ್ಯಾಯ ಕೊಡಿಸು. ನನ್ನ ಜೀವನ ಅವನಿಂದ ಹಾಳಾಗಿ ಹೋಯ್ತು... ಎಂದು ನಟಿ ರಾಖಿ ಸಾವಂತ್​ ಮೆಕ್ಕಾದಲ್ಲಿ ಮೊನ್ನೆಯಷ್ಟೇ ಬಿಕ್ಕಿಬಿಕ್ಕಿ ಅತ್ತಿದ್ದರು. 

ತಮ್ಮ ಮಾಜಿ ಪತಿ ಆದಿಲ್​ ಖಾನ್​ ದುರ್ರಾನಿ ತಮಗೆ ಮೋಸ ಮಾಡಿರುವುದಾಗಿ ಒಂದೇ ಸಮನೆ ಮೆಕ್ಕಾದಲ್ಲಿ ರೋಧಿಸಿದ್ದರು. ರಾಖಿ ಸಾವಂತ್​. ಕೆಲ ದಿನಗಳ ಹಿಂದೆ ಉಮ್ರಾ ನೆರವೇರಿಸಲು ಉಮ್ರಾ ಎಂದರೆ ಮುಸ್ಲಿಮರು ಮೆಕ್ಕಾದಲ್ಲಿರುವ ಮಸ್ಜಿದ್ ಅಲ್-ಹರಾಮ್‌ಗೆ ಮಾಡುವ ತೀರ್ಥಯಾತ್ರೆಯಾಗಿದೆ ರಾಖಿ ಮೆಕ್ಕಾಗೆ ಹೋಗಿದ್ದರು. ಅಲ್ಲಿಯ ಮಸ್ಜಿದ್-ಅಲ್-ಹರಾಮ್ ನಲ್ಲಿ ಉಮ್ರಾ ನೆರವೇರಿಸಿದ್ದರು. 

ಅವರ ಸ್ನೇಹಿತ ವಹಿದ್ ಅಲಿ ಖಾನ್ ಮತ್ತು ಅವರ ಪತ್ನಿ ಶೈಸ್ತಾ ಅಲಿ ಖಾನ್ ಜೊತೆಗೆ ರಾಖಿ ಮೆಕ್ಕಾಗೆ ಹೋಗಿದ್ದರು. ಆದರೆ ರಾಖಿ ಎಂದರೇನೇ ಡ್ರಾಮಾ ಕ್ವೀನ್​ ಎನ್ನುವುದು ಜಗಜ್ಜಾಹೀರವಾಗಿದೆ. ಈ ಡ್ರಾಮಾ ಮಾಡಲು ಮೆಕ್ಕಾದಂಥ ಪವಿತ್ರ ಸ್ಥಾನವನ್ನು ಬಳಸಿಕೊಂಡಿರುವುದು ಸರಿಯಲ್ಲ ಎಂದು ಸಿಕ್ಕಾಪಟ್ಟೆ ಟ್ರೋಲ್​ಗೆ ಒಳಗಾಗುತ್ತಲೇ ಇದ್ದಾರೆ. ಅಷ್ಟಕ್ಕೂ ರಾಖಿ ಸಾವಂತ್​ ಮತ್ತು ಅವರ ಮಾಜಿ ಪತಿ ಮೈಸೂರಿನ ಯುವಕ ಆದಿಲ್​ ಖಾನ್​ ನಡುವಿನ ಜಟಾಪಟಿ ಎಲ್ಲಿರಿಗೂ ತಿಳಿದದ್ದೇ. 

ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ.
ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. 

ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಜೈಲಿಗೆ ಹೋಗಿ ಈಗ ಬಿಡುಗಡೆಯಾಗಿದ್ದಾರೆ. ಕಳೆದೊಂದು ವಾರದಿಂದ ಇವರಿಬ್ಬರ ನಡುವಿನ ಜಗಳ ತಾರಕಕ್ಕೇರಿತ್ತು. ಒಬ್ಬರ ಮೇಲೊಬ್ಬರು ಗೂಬೆ ಕೂರಿಸುತ್ತಾ ನಿತ್ಯವೂ ಪತ್ರಿಕಾಗೋಷ್ಠಿ ಮಾಡುತ್ತಿದ್ದರು. 

ಇವರಿಬ್ಬರ ಮದುವೆಯ ಸುದ್ದಿ ಹಾಗೂ ನಂತರ ನಡೆದ ಡ್ರಾಮಾ ಎಲ್ಲರಿಗೂ ತಿಳಿದ ವಿಷಯವೇ. ಆದಿಲ್​ ಖಾನ್​ ಮೊದಲು ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.