ನೂರಾರು ಸಿನಿಮಾಗಳಲ್ಲಿ ನಟಿಸಿದ ರಮೇಶ್ ಪರಲೋಕ, ಇನ್ನುಮುಂದೆ ಜನಪ್ರಿಯ ಕಾರ್ಯಕ್ರಮ ರದ್ದು

 | 
Hxhx

ಇತ್ತೀಚಿನ ದಿನಗಳಲ್ಲಿ ಸಾವಿನ ಪ್ರಕರಣ ಗಳು ಹೆಚ್ಚಾಗುತ್ತಿದ್ದು ಚಿತ್ರರಂಗದ ಹಲವಾರು ಗಣ್ಯರು ಇನ್ನಿಲ್ಲವಾಗಿದ್ದಾರೆ. ಇದೀಗ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ರಮೇಶ್ ಅವರು ಮೃತಪಟ್ಟಿದ್ದಾರೆ. ತೆಲುಗಿನ ಖ್ಯಾತ ನಟ, ಹಾಸ್ಯ ಕಲಾವಿದ ಅಲ್ಲು ರಮೇಶ್ ಅವರು ಮಂಗಳವಾರ ಸಂಜೆ ಅವರ ಊರು ವಿಶಾಖಪಟ್ಟಣಂನಲ್ಲಿ ಮೃತಪಟ್ಟಿದ್ದಾರೆ. ನಟನಿಗೆ 52 ವರ್ಷ ವಯಸ್ಸಾಗಿತ್ತು.ಸಿನಿಮಾ ನಿರ್ದೇಶಕ ಆನಂದ್ ರವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಡನ್ ಆಗಿ ಪೋಸ್ಟ್ ಹಾಕಿದ್ದ ಖ್ಯಾತ ಹಾಸ್ಯ ನಟ ನಿಧನರಾದ ಸುದ್ದಿಯನ್ನು ತಿಳಿಸಿದ್ದಾರೆ. 

ರಮೇಶ್ ಅವರು ಮೊದಲು ರಂಗಭೂಮಿಯಿಂದ ನಟನೆ ಶುರು ಮಾಡಿದರು. ಚಿರುಜಲ್ಲು ಸಿನಿಮಾದ ಮೂಲಕ ಅವರು ಟಾಲಿವುಡ್​ಗೆ ಎಂಟ್ರಿ ಕೊಟ್ಟರು. ತೊಲು ಬೊಮ್ಮಲಾಟ, ಮಥುರಾ ವೈನ್ಸ್, ವೀದಿ, ಬ್ಲೇಡ್ ಬಾಬ್ಜಿ, ನೆಪೊಲೀಯನ್ ಸಿನಿಮಾದಲ್ಲಿ ನಟಿಸಿದ್ದರು. ಕೊನೆಯ ಬಾರಿಗೆ ಅನುಕೊನಿ ಪ್ರಣಯಂ ಸಿನಿಮಾದಲ್ಲಿ ನಟಿಸಿದ್ದರು.ನಟ ಮಾ ವಿದಕು ಎನ್ನುವ ವೆಬ್ ಸಿರೀಸ್​ನಲ್ಲಿಯೂ ನಟಿಸಿದ್ದರು. ಚಿಕ್ಕ ಪುಟ್ಟ ರೋಲ್ ಮಾಡುತ್ತಿದ್ದರೂ ತಮ್ಮ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ ನಟ. ತಮ್ಮ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟನ ಅಗಲಿಕೆ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಹಾಸ್ಯ ಇರ್ಬೇಕು ಹಾಸ್ಯ ಇದೆ ಅಂದ್ರೆ ಅಲ್ಲಿ ಅಲ್ಲು ರಮೇಶ್ ಇರಬೇಕು. ಅಷ್ಟರ ಮಟ್ಟಕ್ಕೆ ಹೆಸರು ಮಾಡಿರುವ ರಮೇಶ್ ಇನ್ನಿಲ್ಲ ಅನ್ನೋ ವಿಚಾರ ತಿಳಿದು ಚಿತ್ರರಂಗ ಮತ್ತು ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ನಟ ಅಲ್ಲು ರಮೇಶ್ ಅವರು ಸಣ್ಣಪುಟ್ಟ ರೋಲ್ ಮಾಡಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ನಟನ ಸಾವಿನ ಕುರಿತು ನೆಟ್ಟಿಗರು ಸಂತಾಪ ವ್ಯಕ್ತಪಡಿಸಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಯುವ ನಟರೂ ಕೂಡಾ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಚಿಕ್ಕ ವಯಸ್ಸಿನವರೂ ಹೃದಯಾಘಾತದಿಂದ ನಿಧನರಾಗುತ್ತಿದ್ದಾರೆ  ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ದಿನದಿಂದ ನನಗೆ ದೊಡ್ಡ ಸಪೋರ್ಟ್‌ ಅಗಿ ನಿಂತವರು ಅಲ್ಲು ರಮೇಶ್ ಸರ್. ನಮ್ಮ ತಲೆಯಲ್ಲಿ ನಿಮ್ಮ ಧ್ವನಿ ಇನ್ನೂ ಓಡುತ್ತಿದೆ. ಎಲ್ಲೋ ಪಕ್ಕದಲ್ಲಿ ನಿಂತುಕೊಂಡು ಕೂಗುತ್ತಿದ್ದೀರಿ ಅನಿಸುತ್ತಿದೆ. ರಮೇಶ್ ಗಾರು ಅಗಲಿರುವ ವಿಚಾರ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ನನ್ನಂತೆ ಅದೆಷ್ಟೋ ಜರ ಮನಸ್ಸು ಮುಟ್ಟಿದ್ದೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆನಂದ್ ರವಿ ಟ್ವೀಟ್ ಮಾಡಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.