ಕೊನೆಗೂ ಎಲ್ಲಾ ಬಾಯ್ಬಿಟ್ಟ ಸಂಗೀತಾ ಶೃಂಗೇರಿ, ಬಿಗ್ಬಾಸ್ ನಲ್ಲಿ ಆಗಿದ್ದೇನು ಗೊತ್ತಾ

 | 
Hu

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಟ್ರಾಂಗ್‌ ಸ್ಪರ್ಧಿ ಎಂದೇ ಕರೆಸಿಕೊಂಡಿದ್ದ ಸಂಗೀತಾ ಶೃಂಗೇರಿ, ಮನೆಯಲ್ಲಿದ್ದಷ್ಟು ದಿನ ತಮ್ಮ ಮಾತು, ವರ್ತನೆಯಿಂದಲೇ ಸುದ್ದಿಯಾಗಿದ್ದರು. ಈಗ ಶೋ ಮುಗಿದಿದೆ. ಜನರಿಂದ ಅದ್ಧೂರಿ ಸ್ವಾಗತವನ್ನೂ ಪಡೆದುಕೊಂಡಿದ್ದಾರೆ. ಈ ಗ್ಯಾಪ್‌ನಲ್ಲಿಯೇ ಹೊಸ ಫೋಟೋಶೂಟ್‌ಗಳಿಗೂ ಮುಖವೊಡ್ಡಿದ್ದಾರೆ.

ಕನ್ನಡ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ನಟಿಸಿ ಮೆಚ್ಚುಗೆ ಪಡೆದವರು ನಟಿ ಸಂಗೀತಾ ಶೃಂಗೇರಿ. ಆ ಫೇಮ್‌ನಿಂದಲೇ ಅಸಮರ್ಥರಾಗಿ ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದರು ಸಂಗೀತಾ. ತಮ್ಮ ಮಾತು, ನೇರ ನಡೆಯ ಮೂಲಕವೇ ಬಿಗ್‌ ಮನೆಯಲ್ಲಿ ಸದ್ದು ಮಾಡಿದ್ದರು ಸಂಗೀತಾ.

ಬಿಗ್‌ಬಾಸ್‌ನಲ್ಲಿದ್ದಾಗ ಒಂದಷ್ಟು ಮಂದಿಯ ಕೆಂಗೆಣ್ಣಿಗೂ ಗುರಿಯಾಗಿದ್ದರು. ಆ ಪೈಕಿ ವಿನಯ್‌ ಜತೆಗಿನ ಜಗಳವೇ ಅವರನ್ನು ಮತ್ತೊಂದು ಹಂತ ಮೇಲಕ್ಕೆ ಏರಿಸಿತ್ತು. ಅಷ್ಟೇ ಅಲ್ಲ ಬಿಗ್‌ ಬಾಸ್‌ ಫಿನಾಲೆಗೆ ಮೊದಲ ಆಯ್ಕೆಯಾದ ಸ್ಪರ್ಧಿಯೂ ಅವರೇ. ಆದರೆ, ಅಂತಿಮವಾಗಿ ಕಾರ್ತಿಕ್‌ ಮಹೇಶ್‌ ವಿಜೇತರಾಗಿ ಹೊರಹೊಮ್ಮಿದರು.

ಇದೀಗ ಆ ಕುರಿತು ಶಾಕಿಂಗ್ ಹೇಳಿಕೆ ನೀಡಿರುವ ಅವರು ಅದೆಲ್ಲಾ ಬೇಕೆಂದು ಮಾಡಿದ್ದಲ್ಲ. ಅಲ್ಲಿ ಮಾಡೋಕೆ ಹೇಳುತ್ತಿದ್ದರು ಅದಕ್ಕೆ ಮಾಡಿದ್ದು ಎಂದಿದ್ದಾರೆ. ಅದನ್ನು ಕೇಳಿ ಅಭಿಮಾನಿಗಳು ಸುತ್ತಿ ಬಳಸಿ ಹೇಳುವ ಬದಲು ಸ್ಕ್ರಿಪ್ಟೆಡ್ ಅಂತ ಹೇಳಿ ಎಂದು ಹೇಳಿದ್ದಾರೆ.ಬಿಗ್‌ಬಾಸ್‌ನಿಂದ ಮರಳಿದ ಎಷ್ಟೋ ಮಂದಿ ಕಲರ್‌ಫುಲ್‌ ಮತ್ತು ಗ್ಲಾಮರಸ್‌ ಫೋಟೋಶೂಟ್‌ ಮೂಲಕ ಗಮನ ಸೆಳೆದರೆ, ಸಂಗೀತಾ ಮಾತ್ರ ಬೇರೆ ಅವತಾರದಲ್ಲಿಯೇ ಮಿಂಚುತ್ತಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.