ಹೊಸ ವರ್ಷಕ್ಕೆ ಕಾರಿನಲ್ಲಿ ಪಾರ್ಟಿ ಮಾಡಿ ಎದ್ವತದ್ವ ಡ್ಯಾನ್ಸ್ ಮಾಡಿದ ಶ್ರೀಲೀಲಾ
Jan 6, 2025, 15:45 IST
|
ಮುದ್ದು ಮುಖದ ಚಲುವೆ ಕಿಸ್ ಸುಂದ್ರಿ ತೆಲುಗು ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿದ ನಾಯಕಿ ಅಂದ್ರೆ ಅದು ಶ್ರೀಲೀಲಾ. ಯಾವ ನಾಯಕಿಯರಿಗೂ ಸಾಧ್ಯವಾಗದ ರೀತಿಯಲ್ಲಿ ಸರಣಿ ಚಿತ್ರಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡರು. ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಅವರ ಹೆಸರು ಇತ್ತೀಚಿನವರೆಗೂ ಪ್ರಚಾರದಲ್ಲಿದೆ. ಯುವ ನಾಯಕರಲ್ಲದೆ, ಈ ನಟಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಕೂಡ ನಟಿಸಿದ್ದಾರೆ.
ಆದರೆ ಕೆಲ ದಿನಗಳಿಂದ ಶ್ರೀಲೀಲಾ ಹವಾ ಕಡಿಮೆಯಾಗಿದೆ ಎಂದೇ ಹೇಳಬೇಕು. ಆಕೆ ಮಾಡಿದ ಸಿನಿಮಾಗಳು ಇತ್ತೀಚೆಗೆ ಅಷ್ಟಗಿ ಬಾಕ್ಸ್ ಆಫಿಸ್‌ನಲ್ಲಿ ಸದ್ದು ಮಾಡದ ಕಾರಣ ಆಕೆಗೆ ಡಿಮ್ಯಾಂಡ್ ಕಡಿಮೆಯಾಗಿದೆ.ಆದರೆ ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾದರೂ ನಟಿಗೆ ತಮಿಳು, ಹಿಂದಿ ಭಾಷೆಗಳಲ್ಲಿ ಸಾಲು ಸಾಲು ಅವಕಾಶಗಳು ಬರುತ್ತಿವೆ. ಇತ್ತೀಚೆಗಷ್ಟೇ ‘ಗುಡ್ ಬ್ಯಾಡ್ ಆಗ್ಲಿ’ ಸಿನಿಮಾದಲ್ಲಿ ತಮಿಳು ಸ್ಟಾರ್ ಅಜಿತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹೊರ ಬಂದಿತ್ತು.
ಹೀಗಿರುವಾಗ ಇದೀಗ ಶ್ರೀಲೀಲಾ ಬಾಲಿವುಡ್ ಎಂಟ್ರಿಗೆ ರೆಡಿಯಾಗಿದ್ದಾರೆ. ಸ್ಟಾರ್ ಹೀರೋ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಖಾನ್ ಜೊತೆಗೆ ನಟಿ ಶ್ರೀಲೀಲಾ ಸದ್ಯ 'ದಿಲಾರ್' ಸಿನಿಮಾ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಎರಡು ಚಿತ್ರಗಳು ಹಿಟ್ ಆದಲ್ಲಿ ಶ್ರೀಲೀಲಾ ಅವರಿಗೆ ಬಾಲಿವುಡ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗಲಿದೆ.
https://youtube.com/shorts/BDnMJMir4es?si=HYshDnz7cdVOCqXi
ಏತನ್ಮಧ್ಯೆ, ಶ್ರೀಲಿಗೆ ಸಂಬಂಧಿಸಿದ ಕೆಲವು ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಿವೆ, ಅದ್ಭುತವಾದ ಡ್ರೆಸ್ ಧರಿಸಿ ನಟಿ ಶ್ರೀಲೀಲಾ ತಮ್ಮ ಕಾರಿನಲ್ಲಿ ಮೋಜು ಮಸ್ತಿ ಮಾಡುತ್ತಿರುವುದು ಕಾನಬಹುದು. ಶ್ರೀಲೀಲಾ ಅವರ ಮುದ್ದಾದ ವಿಡಿಯೋ ನೋಡಿ ನೆಟ್ಟಿಗರು ವಿವಿಧ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ ಏಕೆಂದರೆ ಈ ವಿಡಿಯೋದಲ್ಲಿ ಶ್ರೀಲೀಲಾ ಪಾರ್ಟಿ ಮೂಡ್ ನಲ್ಲಿ ಖುಷಿಯಾಗಿರುವಂತೆ ಕಾಣುತ್ತಿದ್ದಾರೆ.
ಡ್ಯಾನ್ಸ್ ಮಾಡುವಾಗ ಕಾರಿನಲ್ಲಿ ವಿವಿಧ ಫೋಟೋಗಳಿಗೆ ನಟಿ ಪೋಸ್ ನೀಡಿದ್ದಾಳೆ.ಈ ಫೋಟೋಗಳನ್ನು ನೋಡಿದ ಕೆಲವು ಅಭಿಮಾನಿಗಳಿಗೆ ನಿರಾಸೆಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.