ಮಚ್ಚು ಎತ್ತಲು ಹೋಗಿ ಅಧಿಕಾರಿಗಳ ಕೈಯಲ್ಲಿ ಸರಿಯಾಗಿ ತಿಂದು ಬಂದ ಬಿಗ್ ಬಾಸ್ ಜೋಡಿ

 | 
ಕಿ
ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋ ಮೂಲಕ ಖ್ಯಾತರಾಗಿದ್ದ ರಜತ್‌ ಕಿಶನ್‌ ಮತ್ತು ನಟ ವಿನಯ್‌ ಗೌಡ ಇತ್ತೀಚೆಗೆ ಸಾರ್ವಜನಿಕವಾಗಿ ಲಾಂಗ್‌ ಹಿಡಿದು ರೀಲ್ಸ್‌ ಮಾಡಿದ್ದರು. ಈ ರೀಲ್ಸ್‌ನ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದ ರಜತ್‌, ಎಚ್ಚರಿಕೆ, ಇದನ್ನು ಮನೆಯಲ್ಲಿ ಪ್ರಯತ್ನಿಸಬೇಡಿ. ಇದು ಚಿತ್ರೀಕರಣದ ಉದ್ದೇಶಕ್ಕೆ ಮಾತ್ರ. ಇದರಲ್ಲಿ ಬಳಸಿರುವುದು ಸೆಟ್‌ ಪ್ರಾಪರ್ಟಿ ಎಂದು ಬರೆದಿದ್ದರು.
ಆದರೆ, ಅವರು ಬಳಸಿರುವುದು ನಿಜವಾದ ಮಾರಕಾಸ್ತ್ರ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಬಸವೇಶ್ವರನಗರ ಠಾಣೆ ಎಸ್‌ಐ ಭಾನುಪ್ರಕಾಶ್‌ ಅವರು ನೀಡಿದ ದೂರು ಆಧರಿಸಿ, ರಜತ್‌ ಕಿಶನ್‌ ಮತ್ತು ವಿನಯ್‌ ಗೌಡ ವಿರುದ್ಧ ಶಾಂತಿ ಭಂಗ, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಆರೋಪದಡಿ ಹಾಗೂ ಶಸ್ತ್ರಾಸ್ತ್ರ ಕಾಯಿದೆಯಡಿ ಮಾರ್ಚ್ 20ರಂದು ಪ್ರಕರಣ ದಾಖಲಿಸಲಾಗಿತ್ತು.
ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ರಜತ್‌ ಕಿಶನ್‌ ಮತ್ತು ವಿನಯ್‌ ಗೌಡ ಅವರಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸಲಾಗಿತ್ತು. ಆದರೆ, ಅವರು ವಿಚಾರಣೆಗೆ ಬಾರದ ಕಾರಣ ಕುಟುಂಬ ಸದಸ್ಯರಿಗೆ ಕರೆ ಮಾಡಿ ಆ ಇಬ್ಬರನ್ನೂ ವಿಚಾರಣೆಗೆ ಕಳುಹಿಸುವಂತೆ ಸೂಚಿಸಿದ್ದೆವು. ಬಳಿಕ ರಜತ್‌, ತಾವು ಕೊಪ್ಪಳದಲ್ಲಿ ಶೂಟಿಂಗ್‌ನಲ್ಲಿ ಇರುವುದಾಗಿ ಹೇಳಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊನೆಗೂ ಸೋಮವಾರ ಸಂಜೆ ಬಸವೇಶ್ವರನಗರ ಠಾಣೆಗೆ ಬಂದ ರಜತ್‌ ಕಿಶನ್‌ ಮತ್ತು ವಿನಯ್‌ ಗೌಡ ಅವರನ್ನು ಪೊಲೀಸರು ಮೂರು ತಾಸಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡರು. ವಿನಯ್‌ ಗೌಡ ಅವರು ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಶೋನಲ್ಲಿ ಸ್ಪರ್ಧಿಸಿದ್ದರು. ರಜತ್‌ ಕಿಶನ್‌ ಅವರು ಸೀಸನ್‌ 11ರಲ್ಲಿ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಆಗಿದ್ದರು. ಶೋನಲ್ಲಿ ಇರುವಾಗ ಈ ಇಬ್ಬರೂ ಸಾಕಷ್ಟು ವಿವಾದ ಮಾಡಿಕೊಂಡಿದ್ದರು. ಈಗ ಲಾಂಗ್‌ ಹಿಡಿದು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು‌ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub