ಮದುವೆಗೂ ಮುನ್ನ ಲವರ್ ಅನ್ನು ಗರ್ಭಿಣಿ ಮಾಡಿದ SRH ತಂಡದ ನಾಯಕ; ' ಇದು ಸಾಧನೆ ಎಂದ ಫ್ಯಾನ್ಸ್'

 | 
Yeh

ಐಪಿಎಲ್ ಮ್ಯಾಚ್ ಅಲ್ಲಿ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇತ್ತೀಚಿಗಷ್ಟೇ ಸಖತ್ ಪ್ರದರ್ಶನ ನೀಡ್ತಿದೆ. 7 ಪಂದ್ಯಗಳನ್ನು ಆಡಿರುವ ಹೈದರಾಬಾದ್​ ತಂಡವು ಐದರಲ್ಲಿ ಗೆದ್ದು ಪಾಯಿಂಟ್ಸ್​ ಟೇಬಲ್​​ನಲ್ಲಿ ಮೂರನೇ ಸ್ಥಾನದಲ್ಲಿದೆ. ತಂಡದ ಅದ್ಭುತ ಪ್ರದರ್ಶನದ ಜೊತೆಗೆ ಅವರ ಬೌಲಿಂಗ್​ ಕೂಡ ಸಾಕಷ್ಟು ಪ್ರಭಾವ ಬೀರಿದೆ.

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಗೆದ್ದುಕೊಂಡಿತ್ತು. ಆಸ್ಟ್ರೇಲಿಯಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ, ಹೈದರಾಬಾದ್ ತಂಡವನ್ನೂ ಅದ್ಭುತವಾಗಿ ಮುನ್ನಡೆಸಿಕೊಂಡು ಹೋಗ್ತಿದ್ದಾರೆ.

ಕ್ಯಾಪ್ಟನ್ಸಿ ಮತ್ತು ಬೌಲಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿರುವ ಕಮ್ಮಿನ್ಸ್​, ನಿಜ ಜೀವನದಲ್ಲಿ ಸಂಗಾತಿಯ ಮನಸ್ಸು ಕದ್ದಿರುವ ಕತೆ ಬಗ್ಗೆ ನಿಮಗೆ ಗೊತ್ತಿರಲಿಕ್ಕಿಲ್ಲ. ಕಮ್ಮಿನ್ಸ್ ಪತ್ನಿಯ ಹೆಸರು ಬೆಕಿ ಬೋಸ್ಟನ್. ಇಬ್ಬರ ಪ್ರೀತಿಯ ಕಹಾನಿ ಸಿನಿಮಾವನ್ನೂ ಮೀರಿಸುವಂತಿದೆ. ಹೌದು ಇವರಿಬ್ಬರ ಕಹಾನಿ ಅದ್ಭುತವಾಗಿದೆ.

ಕಮ್ಮಿನ್ಸ್ ಹಾಗೂ ಬೆಕಿ 2022ರಲ್ಲಿ ಎಂಗೇಜ್ ಆದರು. ಪಿಕ್ನಿಕ್ ಸ್ಪಾಟ್​​ ಒಂದರಲ್ಲಿ ಸಿನಿಮಾ ಸ್ಟೈಲ್​​ನಲ್ಲಿ ಕಮ್ಮಿನ್ಸ್​ ತಾವು ಪ್ರೀತಿಸುತ್ತಿದ್ದ ಹುಡುಗಿಗೆ ಪ್ರಪೋಸ್ ಮಾಡಿದ್ದರಂತೆ. ಇದನ್ನು ಖುದ್ದ ಬೆಕಿ ಬೋಸ್ಟನ್ ಅವರೇ ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಇಬ್ಬರು ಮದುವೆಯಾಗಲು ಬಯಸಿದ್ದರು. ಆದರೆ ಕೊರೊನಾ ವೈರಸ್ ಕಾಟದಿಂದ ಮದುವೆ ವಿಳಂಬವಾಯಿತು. ಇದೇ ಸಮಯದಲ್ಲಿ ಅವರು ಮದುವೆಗೂ ಮೊದಲೇ ಪೋಷಕರಾದರು. ಇವರಿಬ್ಬರಿಗೆ ಮುದ್ದಾದ ಮಗನಿದ್ದಾನೆ. ಬೆಕಿ ಅವರು ಇಂಗ್ಲೆಂಡ್‌ನ ಬೋಸ್ಟನ್ ನಿವಾಸಿ. ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ಬೆಕಿ ಬೋಸ್ಟನ್, ಕಮ್ಮಿನ್ಸ್​ಗಿಂತ ಸುಮಾರು ಎರಡೂವರೆ ವರ್ಷ ವಯಸ್ಸಿನಲ್ಲಿ ಹಿರಿಯಳು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.