ನಿನ್ನ ಸಂಸಾರ ಹಾಳು‌ ಮಾಡಲು ನೋಡುತ್ತಿದ್ದಾರೆ, ರಿಷಭ್ ಶೆಟ್ಟಿಗೆ ದೈವ ನುಡಿ

 | 
ಕದ೯
ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ಕಾಂತಾರ 2 ಚಿತ್ರೀಕರಣದಲ್ಲಿ ರಿಷಬ್‌ ಶೆಟ್ಟಿ ಹಲವು ವಿಘ್ನಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ದೈವದಿಂದಲೇ ರಿಷಬ್‌ ಶೆಟ್ಟಿಗೆ ಎಚ್ಚರಿಕೆ ಬಂದಿದೆ.ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ ಕಾಂತಾರ ಸಿನಿಮಾ ನಟ-ನಿರ್ದೇಶಕ ರಿಷಬ್‌ ಶೆಟ್ಟಿಗೂ ಒಳ್ಳೆ ಹೆಸರು ತಂದುಕೊಟ್ಟಿತ್ತು. ಪಂಜುರ್ಲಿ ದೈವ, ದೈವ ನರ್ತಕರ ಕಥೆಯನ್ನು ಕನ್ನಡ ನಾಡಿನ ಜನತೆಯ ಮುಂದೆ ಇದು ಪ್ರಸ್ತುತಪಡಿಸಿತ್ತು.
ಆದರೆ, ಕಾಂತಾರ ಸಿನಿಮಾ ಬಂದ ಬಳಿಕ ಪಂಜುರ್ಲಿ ದೈವದ ವೇಷಭೂಷಣ ತೊಟ್ಟುಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮಾಡುವುದು, ತಮಾಷೆ ಮಾಡುವುದು ಕೂಡ ಹೆಚ್ಚಾಗಿತ್ತು. ಇದರಿಂದಾಗಿ ಕೊನೆಗೆ ತುಳುನಾಡಿನ ಜನತೆ ಕಾಂತಾರ ಸಿನಿಮಾವೊಂದು ಬರದೆ ಹೋಗಿದ್ದರೆ ಇಂಥ ಅಪಪ್ರಚಾರಗಳು ತಪ್ಪುತ್ತಿದ್ದವು ಎಂದು ಮಾತನಾಡಿಕೊಂಡರು.
ಕಾಂತಾರದ ಬಳಿಕ ಕಾಂತಾರ ಚಾಪ್ಟರ್‌-1 ಎನ್ನುವ ಸಿನಿಮಾವನ್ನು ರಿಷಬ್‌ ಶೆಟ್ಟಿ ಮಾಡುತ್ತಿದ್ದಾರೆ. ಆದರೆ, ಈ ಸಿನಿಮಾ ಸೆಟ್ಟೇರಿದ ಕ್ಷಣದಿಂದಲೂ ನಟ-ನಿರ್ದೇಶಕ ರಿಷಬ್‌ ಸಾಲು ಸಾಲು ತೊಂದರೆಗಳನ್ನು ಎದುರಿಸುವಂತಾಗಿದೆ. ಹೌದು, ಕಾಂತಾರ ಚಾಪ್ಟರ್​-1 ಸಿನಿಮಾಗೆ ಒಂದರ ಮೇಲೊಂದು ವಿಘ್ನ ಎದುರಾಗಿದೆ. ಕಾಂತಾರ ಬಂದಾಗಿದೆ. ಅದರ ಭಾಗವಾಗಿ ಮತ್ತೆ ಅದೇ ರೀತಿಯ ಯಾವುದೇ ಸಿನಿಮಾ ಮಾಡಬಾರದು ಎಂದು ದೈವಾರಾಧಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಕಾಂತಾರ ಸಿನಿಮಾವನ್ನು ಬ್ಯಾನ್‌ ಮಾಡಬೇಕು ಎಂದು ತುಳುನಾಡಿನಲ್ಲೇ ಆಗ್ರಹ ಮಾಡಲಾಗಿತ್ತು. ಇದರಿಂದ ಸಿನಿಮಾ ಹೇಗೋ ಪಾರಾಗಿ ಯಶಸ್ಸು ಕಂಡಿತ್ತು.ಕಾಂತಾರ ಚಾಪ್ಟರ್‌-1 ಸಿನಿಮಾದಲ್ಲಿ ಸರಿಯಾಗಿ ವೇತನ ನೀಡಿಲ್ಲ ಎಂದು ಸಹ ಕಲಾವಿದರು ಪ್ರತಿಭಟನೆ ಮಾಡಿದ್ದು ಕೂಡ ಸುದ್ದಿಯಾಗಿತ್ತು. ಈಗ ಸ್ವತಃ ರಿಷಬ್‌ ಶೆಟ್ಟಿಗೆ ದೈವದಿಂದಲೇ ಎಚ್ಚರಿಕೆ ಬಂದಿದೆ. 
ಇತ್ತೀಚೆಗೆ ಮಂಗಳೂರಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೇಮದಲ್ಲಿ ರಿಷಬ್‌ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ಪಂಜುರ್ಲಿ ಜಗತ್ತಿನೆಲ್ಲೆಡೆ ನಿನಗೆ ದುಷ್ಮನ್‌ಗಳಿದ್ದಾರೆ. ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದೆ. ಅದರೊಂದಿಗೆ ರಿಷಬ್‌ ಶೆಟ್ಟಿಗೆ ಶತ್ರುಕಾಟ ಇರುವ ಬಗ್ಗೆಯೂ ಎಚ್ಚರಿಕೆಯನ್ನು ನೀಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub