'ಆ ಸುಖಕ್ಕಾಗಿ ಟಿ.ವಿ ಆಂಕರ್ ನನ್ನು ಎತ್ತಾಕೊಂಡು ಹೋದ ಯುವತಿ' ಮಾಡಿದ್ದೇನು ಗೊ.ತ್ತಾ

 | 
Dgu

ಮದುವೆ ಆಗಲು ವೀಡಿಯೋ ನಿರೂಪಕ ನನ್ನು ಅಪಹರಣ ಮಾಡಿಸಿದ್ದ ಮಹಿಳಾ ಉದ್ಯಮಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಭೋಗಿರೆಡ್ಡಿ ತ್ರಿಶಾ ಎಂದು ಗುರುತಿಸಲಾಗಿದೆ.ಆಕೆ ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿ ಎಂದು ತಿಳಿದು ಬಂದಿದೆ. 

ತ್ರಿಶಾ ಮ್ಯಾಟ್ರಿಮೋನಿಯಲ್ ವೆಬ್‍ಸೈಟ್ ‍ನಲ್ಲಿ ಟಿವಿ ಆಂಕರ್ ಪ್ರಣವ್ ಎಂಬವರ ಪ್ರೊಫೈಲ್ ನೋಡಿ ಮದುವೆ ಪ್ರಸ್ತಾಪ ಮಾಡಿದ್ದಳು. ಈ ಪ್ರಸ್ತಾಪಕ್ಕೆ ಪ್ರಣವ್ ಕಡೆಯಿಂದಲೂ ಒಪ್ಪಿಗೆ ಸಿಕ್ಕಿತ್ತು. ಇದಾದ ಬಳಿಕ ಚಾಟಿಂಗ್ ಆರಂಭಿಸಿ ಹಲವು ತಿಂಗಳ ಬಳಿಕ ಅದು ನಕಲಿ ಪ್ರೊಫೈಲ್ ಎಂದು ತ್ರಿಶಾಗೆ ಗೊತ್ತಾಗಿದೆ. ಇದಾದ ಬಳಿಕ ಆಕೆ ಪ್ರಣವ್ ಅವರ ನಿಜವಾದ ಮೊಬೈಲ್ ನಂಬರ್ ಪಡೆದು ನಡೆದ ವಿಚಾರವನ್ನು ಹೇಳಿಕೊಂಡಿದ್ದಳು.

 ಅಲ್ಲದೇ ಮದುವೆ ವಿಚಾರ ಪ್ರಸ್ತಾಪಿಸಿದ್ದಳು. ಇದಕ್ಕೆ ಪ್ರಣವ್ ಒಪ್ಪಿರಲಿಲ್ಲ. ಇದರಿಂದ ಬೇಸತ್ತ ತ್ರಿಶಾ ಆಂಕರ್ ನ ಕಾರಿಗೆ ಜಿಪಿಎಸ್ ಟ್ರ್ಯಾಕ್ ಅಳವಡಿಸಿ ಆತನ ಚಲನವಲನಗಳ ಮೇಲೆ ನಿಗಾ ವಹಿಸಿದ್ದ 31 ವರ್ಷದ ಮಹಿಳಾ ಉದ್ಯಮಿ ಹಣ ನೀಡಿ ಅಪಹರಣಕಾರರ ಮೂಲಕ ಕಿಡ್ನಾಪ್ ಮಾಡಿಸಿ ಸಿಕ್ಕಿಬಿದ್ದಿದ್ದಾಳೆ.

ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಪ್ರಣವ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದೀಗ ತ್ರಿಶಾ ಹಾಗೂ ಆಕೆಯ ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತಾನು ಮ್ಯಾಟ್ರಿಮೋನಿಯಲ್ ವೆಬ್‍ಸೈಟ್ ‍ನಲ್ಲಿ ಪ್ರಣವ್ ಪ್ರೊಫೈಲ್ ನೋಡಿ ಮದುವೆಯ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾಳೆ. ಇದಕ್ಕೆ ಆತ ಒಪ್ಪದಿದ್ದಾಗ ಆತನನ್ನು ಅಪಹರಿಸಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.