ಲೀಲಾವತಿ ಅಮ್ಮನಿಗೆ ಏನಾಯಿತು, ಒಮ್ಮೆಲೇ ಭೇಟಿ ಕೊಟ್ಟ ಅರ್ಜುನ್ ಸರ್ಜಾ

 | 
ರ

80 ರ ದಶಕದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಹಲವರ ಮನಗೆದ್ದ ನಟಿ ಲೀಲಾವತಿ ಅವರು ಈಗ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ.ಇದೀಗ ಹಿರಿಯ ನಟಿ ಲೀಲಾವತಿ  ಅವರ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ ಖ್ಯಾತ ನಟ ಅರ್ಜುನ್ ಸರ್ಜಾ ಅವರು. 

ನೆಲಮಂಗಲದ ಬಳಿ ಇರುವ ಸೋಲದೇವನಹಳ್ಳಿ ತೋಟದ ಮನೆಗೆ ಬಂದಿದ್ದ ಅರ್ಜುನ್ ಸರ್ಜಾ, ಕೆಲವು ಹೊತ್ತು ಲೀಲಾವತಿ ಅವರ ಮನೆಯಲ್ಲಿ ಇದ್ದು, ಆರೋಗ್ಯ ವಿಚಾರಿಸಿದ್ದಾರೆ. ವಯಸ್ಸಿನ ಕಾರಣದಿಂದಾಗಿ ಲೀಲಾವತಿ ಅವರು ಹಾಸಿಗೆ ಹಿಡಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಗೆ ತೆರೆಳ ಆರೋಗ್ಯ ವಿಚಾರಿಸುತ್ತಿದ್ದಾರೆ. ಇದೀಗ ಅರ್ಜುನ್ ಸರ್ಜಾ ಕೂಡ ಅದೇ ಕೆಲಸ ಮಾಡಿದ್ದಾರೆ. 

87 ವರ್ಷದ ಹಿರಿಯ ನಟಿ ಲೀಲಾವತಿಯವರು ಆರೋಗ್ಯ ಸಮಸ್ಯೆಯಿಂದಾ ವಿಶ್ರಾಂತಿ ಪಡೆಯುತ್ತಿದ್ದಾರೆ.
ಲೀಲಾವತಿ ಅವರ ಕೈ ಹಿಡಿದು ಕೆಲ ಸಮಯ ಮಾತನಾಡಿದ ಅರ್ಜುನ್ ಸರ್ಜಾ ಬಳಿಕ ಕಾಲು ಮುಟ್ಟಿ ನಮಸ್ಕಾರ ಮಾಡಿದರು. ಆ ಬಳಿಕ ಲೀಲಾವತಿ ಅವರ ಹಣೆಗೆ ಮುತ್ತು ಕೊಟ್ಟು, ಎಲ್ಲವೂ ಒಳ್ಳೆಯದಾಗಲಿ, ಆದಷ್ಟು ಬೇಗ ನೀವು ಗುಣ ಆಗುತ್ತೀರ, ದೇವರಲ್ಲಿ ಪ್ರಾರ್ಥನೆ ಮಾಡಿ, ನಾನೂ ಸಹ ನಿಮಗಾಗಿ ಪ್ರಾರ್ಥನೆ ಮಾಡುತ್ತೇನೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹಾರೈಸಿದರು. 

ಅಲ್ಲಿಯೇ ಇದ್ದ ವಿನೋದ್ ಅವರಿಗೂ ಧೈರ್ಯ ತುಂಬಿದರು. ಅವರ ಕಾರ್ಯವನ್ನು ಹೊಗಳಿದರು.
ತಾಯಿಯ ಆರೋಗ್ಯ ವಿಚಾರಿಸುವಾಗ ಲೀಲಾವತಿ ಪುತ್ರ ವಿನೋದ್ ರಾಜ್ ಕಣ್ಣೀರಿಟ್ಟಿದ್ದಾರೆ. ಆನಂತರ ಲೀಲಾವತಿಯವರು ಬೇಗ ಆರೋಗ್ಯ ಸುಧಾರಿಸಲು ಭಗವಂತ ಹನುಮಂತನಲ್ಲಿ ಪ್ರಾರ್ಥಿಸುವುದಾಗಿ ನಟ ಅರ್ಜುನ್ ಸರ್ಜಾ ತಿಳಿಸಿದ್ದಾರೆ. 

ದೊಡ್ಡ ಹನುಮಂತನ ದೇವಾಲಯ ಕಟ್ಟಿಸಿದ್ದು ಅಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದರು ಅರ್ಜುನ್ ಸರ್ಜಾ. ಇದೀಗ ಅರ್ಜುನ್ ಸರ್ಜಾ ಅವರು ಲೀಲಾವತಿ ಅವರೊಟ್ಟಿಗೆ ಮಾತನಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.