ಮಗ ರಾಯನ್ ಭವಿಷ್ಯಕ್ಕಾಗಿ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಏನು ನಿರ್ಧಾರ ಗೊತ್ತಾ

 | 
Bs

ಸ್ಯಾಂ ಡಲ್ವುಡ್ ಬ್ಯೂಟಿ ಮೇಘನಾ ರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಿಂತ ತಮ್ಮ ವೈಯಕ್ತಿಕ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ನಟಿ ಮೇಘನಾ ಎರಡನೇ ಮದುವೆಯ ವದಂತಿ ಸಖತ್ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ನಟಿ ಕೂಡ ಸ್ಪಷ್ಟನೆ ನೀಡಿದ್ದಾರೆ. ನಟಿ ಮೇಘನಾ ರಾಜ್, ಸದ್ಯ ಮಗುವಿನ ಪೋಷಣೆಯಲ್ಲಿ ಬ್ಯೂಸಿಯಾಗಿದ್ದಾರೆ. 

ಮಗ ರಾಯನ್ ಖುಷಿಯಲ್ಲಿ ಮೇಘನಾ ಜೀವನ ಸಾಗಿಸುತ್ತಿದ್ದಾರೆ. 2020ರಲ್ಲಿ ನಟ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದಿದ್ದರು. ಪತಿಯ ನೆನಪಿನಲ್ಲೇ ಇರುವ ನಟಿಗೆ ಇದೀಗ ಹೊಸ ವದಂತಿಯೊಂದನ್ನ ಎದುರಿಸುತ್ತಿದ್ದಾರೆ. ತಮ್ಮ ಎರಡನೇ ಮದುವೆಯ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಮೇಘನಾ ರಾಜ್‌ಗೆ ಎರಡನೇ ಮದುವೆಯ ಬಗ್ಗೆ ಯೋಚಿಸಿದ್ದೀರಾ ಎಂದು ನಿರೂಪಕ ಕೇಳಿದ್ದರು. 

ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ನಟಿ, ಮದುವೆಯಾಗುತ್ತಾಳೆ ಎಂದು ಸಲಹೆ ಕೊಡುವವರ ಗುಂಪಿದೆ. ಮದುವೆಯಾಗು ಅಂತಾ ಸಲಹೆ ಕೊಡುವವರ ಗುಂಪಿದೆ. ಮಗನಿಗೆ ಖುಷಿಯಾಗಿರುತ್ತದೆ ಎಂದು ಹೇಳುವವರ ಮತ್ತೊಂದು ಗುಂಪಿದೆ. ಹಾಗಾದರೆ ಯಾರ ಮಾತು ಕೇಳಲಿ. ಜಿರಂಜೀವಿ ಯಾವಾಗಲೂ ಹೇಳುತ್ತಿದ್ದರು, ಜಗತ್ತು ಏನೇ ಹೇಳಿದ್ದರು. 

ನಿನ್ನ ಹೃದಯವನ್ನು ಆಲಿಸು ಎಂದು, ನಾನು ಇನ್ನೂ ಮದುವೆಯ ಬಗ್ಗೆ ಪ್ರಶ್ನೆ ಕೇಳಲಿಲ್ಲ. ಎಂದು ತಮ್ಮ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಮೂಲಕ ತಮ್ಮ ಎರಡನೇ ಮದುವೆಯ ವದಂತಿಯ ಕುರಿತು ನಟಿ ಮಾತನಾಡಿದ್ದಾರೆ. ಇನ್ನು ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದಿರುವೆ ಅದೂ ಮುದ್ದು ಮಗನ ಜೊತೆ ಎಂದು ನಕ್ಕು ಸುಮ್ಮನಾಗಿದ್ದಾರೆ.