ಬೈಕ್ ವೀಲಿಂಗ್ ಮಾಡಿ ಅಮಾಯಕನ ಪ್ರಾಣ ತೆಗೆದ ಮಹಿಳಾ ಪೋಲಿ ಸ್ ಮಗ

 | 
Hd

 ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಈ ಘಟನೆ ಪ್ರತ್ಯಕ್ಷ ಉದಾಹರಣೆ ಹೌದು ತಾಯಿ ಪೊಲೀಸ್ ಅಧಿಕಾರಿಯಾದರೆ ಮಗ ಈಗ ಅಪರಾಧಿ ಪಿಎಸ್ಐ ಪುತ್ರನ ವ್ಹೀಲಿಂಗ್ ಹುಚ್ಚಾಟಕ್ಕೆ ವೃದ್ಧ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಿಮ್ಮಾವು ಹತ್ತಿರ ನಡೆದಿದೆ.

68 ವರ್ಷದ ಗುರುಸ್ವಾಮಿ ಮೃತ ದುರ್ದೈವಿಯಾಗಿದ್ದು, ವ್ಹೀಲಿಂಗ್ ಮಾಡಿ ವೃದ್ಧನನ್ನು ಪಿಎಸ್ ಐ ಪುತ್ರ ಬಲಿ ಪಡೆದಿದ್ದಾನೆ. ಉದಯಗಿರಿ ನಿವಾಸಿಯಾಗಿರುವ ವೃದ್ಧ ಗುರುಸ್ವಾಮಿ ಹಸುಗಳನ್ನು ಮೇಯಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ವ್ಹೀಲಿಂಗ್ ಮಾಡಿಕೊಂಡು ಬಂದು ಯುವಕ ಸೈಯದ್ ಐಮಾನ್ ಎಂಬಾತ ವೃದ್ಧನಿಗೆ ಡಿಕ್ಕಿಯೊಡೆದಿದ್ದು, ಈ ವೇಳೆ ವೃದ್ಧ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.ಸೈಯದ್ ಐಮಾನ್ ಪಿಎಸ್​​ಐ ಯಾಸ್ಮಿನ್ ತಾಜ್ ಪುತ್ರನಾಗಿದ್ದು, ಯಾಸ್ಮಿನ್ ತಾಜ್ ನಂಜನಗೂಡು ಸಂಚಾರಿ ಪೊಲೀಸ್ ಠಾಣೆ ಪಿಎಸ್​​ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ವ್ಹೀಲಿಂಗ್ ವಿಚಾರಕ್ಕೆ ವಶಕ್ಕೆ ಪಡೆದು ದಂಡ ಹಾಕಲಾಗಿತ್ತು. ಇದಷ್ಟೆ ಅಲ್ಲದೆ ಈತನ ವಿರುದ್ಧ ಕಳ್ಳತನ ಆರೋಪ ಕೂಡ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ.ಘಟನೆಯಲ್ಲಿ ಆರೋಪಿ‌ ಸೈಯದ್ ಐಮಾನ್ ಗ್ ಸಣ್ಣಪುಟ್ಟ ಗಾಯವಾಗಿದ್ದು, ಆರೋಪಿಯನ್ನು ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರೇ ರಕ್ಷಣೆ ಮಾಡಿ ಚಿಕಿತ್ಸೆಗೆ ಆಸ್ಪತ್ರೆಗೆ ಕರೆತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಮಗೆ ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.