ನಿನ್ನ ತಲೆಯಲ್ಲಿ ಕೂದಲಿಲ್ಲ ನಿನ್ನ ಕೈಯಲ್ಲಿ ಏನೂ ಕಿಸಿಯೋಕೆ ಆಗಲ್ಲ; ಗಂಡನಿಗೆ ಹೆಂಡತಿ ಅಪಹಾಸ್ಯ
Jul 23, 2025, 17:22 IST
|

ನೋಡೋಕೆ ಚಂದ ಇದ್ರೆ ಮಾತ್ರ ಸೂಪರ್ ಅನ್ನೋ ಕಾಲವಿದು . ಹಣ ಇರಬೇಕು. ನೋಡೋಕೆ ಸುಂದರವಾಗಿದ್ದರೆ ಸಾಕು ಅನ್ನೋ ಜಮಾನ. ಇದರಿಂದಾಗಿ ನೋವು ಉಂಡವರು ಹಲವರು. ಆದರೆ ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿಯ ಕಿರುಕುಳಕ್ಕೆ ಬೇಸತ್ತು ಡೆತ್ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ. ಪರಶಿವಮೂರ್ತಿ ಮೃತ ಪತಿ.
ಹೌದು ಆಗಾಗ ತಲೆಯಲ್ಲಿ ಕೂದಲಿಲ್ಲ ಎಂದು ಪರಶಿವಮೂರ್ತಿಗೆ ಪತ್ನಿ ಮಮತಾ ಅಪಹಾಸ್ಯ ಮಾಡುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಚಾಮರಾಜನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದ ಹಿಂದೆ ಪರಶಿವಮೂರ್ತಿ ಮತ್ತು ಮಮತಾ ಮದುವೆಯಾಗಿದ್ದರು. ವೃತ್ತಿಯಲ್ಲಿ ಪರಶಿವಮೂರ್ತಿ ಲಾರಿ ಚಾಲಕನಾಗಿದ್ದರು. ಮದುವೆ ಬಳಿಕ ಪರಶಿವಮೂರ್ತಿ ಕೂದಲು ಸಂಪೂರ್ಣ ಉದುರಿತ್ತು. ಹೊರಗಡೆ ಹೋದರೆ ನನೆಗೆ ನಾಚಿಕೆಯಾಗುತ್ತೆಂದು ಮಮತಾ ಅಪಹಾಸ್ಯ ಮಾಡುತ್ತಿದ್ದರು ಎನ್ನಲಾಗಿದೆ.
ಇನ್ನು ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ಸಹ ಮಮತಾ ದಾಖಲಿಸಿದ್ದು, ಪರಶಿವಮೂರ್ತಿಯನ್ನ ಜೈಲಿಗೂ ಕಳುಹಿಸಿದ್ದರು. ಇಷ್ಟೇ ಅಲ್ಲದೆ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದ ಮಮತ, ಮದುವೆಯಾಗಿದ್ದರೂ ತಾಳಿ ಇಲ್ಲದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೇ ವಿಚಾರಕ್ಕೆ ಮನೆಯಲ್ಲಿ ಪದೇಪದೆ ಜಗಳ ಆಗುತ್ತಿತ್ತು. ಹೀಗಾಗಿ ಹೆಂಡತಿಯ ನವರಂಗಿ ಆಟಕ್ಕೆ ರೋಸಿ ಹೋಗಿದ್ದ ಪರಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023