ಒಂದೇ ದಿನದಲ್ಲಿ ಯುದ್ಧಕಾಂಡ ಸಿನಿಮಾಗೆ ಕೋಟ್ಯಾಂತರ ರೂಪಾಯಿ ಆದಾಯ, ಹಾಕಿದ ಹಣ ಫುಲ್ ವಸೂಲಿ

 | 
Nd
ಒಂದು ಲಾಂಗ್ ಗ್ಯಾಪ್ ಬಳಿಕ ಅಜಯ್ ರಾಜ್ ಯುದ್ಧಕಾಂಡ ಚಾಪ್ಟರ್ 2 ಸಿನಿಮಾ ಮೂಲಕ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದಾರೆ. ಸ್ವತ: ಅಜಯ್ ರಾವ್ ಅವರೇ ನಿರ್ಮಾಣ ಮಾಡಿರುವುದು ಮತ್ತೊಂದು ವಿಶೇಷ. ಕನ್ನಡದಲ್ಲಿ ಕೋರ್ಟ್ ರೂಮ್ ಡ್ರಾಮಗಳು ತೀರಾ ಕಡಿಮೆ. ಬಾಲಿವುಡ್‌ನಲ್ಲಿ ಹೆಚ್ಚಾಗುತ್ತಿರುವ ಈ ಟ್ರೆಂಡ್ ಅನ್ನು ಅಜಯ್ ರಾವ್ ಬಹುಬೇಗನೇ ಫಾಲೋ ಮಾಡಿದಂತೆ ಇದೆ.
ಕೋರ್ಟ್ ರೂಮ್‌ ಡ್ರಾಮ ಓಟಿಟಿ ವೇದಿಕೆಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಬಾಲಿವುಡ್‌ನಲ್ಲಿ ನಡೆದ ಚಮತ್ಕಾರ ಸ್ಯಾಂಡಲ್‌ವುಡ್‌ನಲ್ಲಿ ನಡೆಯಬೇಕಿದೆ. ಅಂತಹದ್ದೊಂದು ಪ್ರಯತ್ನಕ್ಕೆ ಅಜಯ್ ರಾವ್ ಕೈ ಹಾಕಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ಹಿಂದೆ ಬಿದ್ದಿರೋ ಸ್ಟಾರ್ ನಟರಿಂದ ಕೊಂಚ ದೂರ ಸರಿದು, ಕಮರ್ಷಿಯಲ್ ಜೊತೆ ಗಂಭೀರ ಸಮಸ್ಯೆಯನ್ನು ಇಟ್ಟಿಕೊಂಡು ಬಾಕ್ಸಾಫೀಸ್‌ನಲ್ಲಿ ಯುದ್ಧ ಸಾರುವುದಕ್ಕೆ ಮುಂದಾಗಿದ್ದಾರೆ.
ಇನ್ನು ಅಜಯ್ ರಾವ್ ಯುದ್ಧಕಾಂಡ 2 ಸಿನಿಮಾಗೆ ಪ್ರೇಕ್ಷಕರಿಂದ ಸಾಧಾರಾಣ ಓಪನಿಂಗ್ ಸಿಕ್ಕಿದೆ. ಅದೆಷ್ಟೇ ಸಿನಿಮಾ ಬಗ್ಗೆ ಪ್ರಚಾರ ಮಾಡಿದರೂ, ನಿನ್ನೆ ಜನರು ಥಿಯೇಟರ್‌ಗೆ ಬಂದು ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನೋಡಿಲ್ಲ. ಬಹುಶ: ಮೌತ್ ಪಬ್ಲಿಸಿಟಿಯಿಂದ ಮುಂದಿನ ದಿನಗಳಲ್ಲಿ ಜನರು ಥಿಯೇಟರ್‌ಗೆ ಬರಬಹುದು. ಅಂದ್ಹಾಗೆ, ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ವರದಿ ಮಾಡುವ ಸ್ಯಾಕ್ನಿಲ್ಕ್ ವೆಬ್‌ ಸೈಟ್‌ ಪ್ರಕಾರ, ಯುದ್ಧಕಾಂಡ 2 ಮೊದಲ ದಿನ 27ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ.
ಕರ್ನಾಟಕದ ವಿತರಕರ ಪ್ರಕಾರ, 'ಯುದ್ಧಕಾಂಡ ಚಾಪ್ಟರ್ 2'ಗೆ ಸಿಂಗಲ್‌ ಸ್ಕ್ರೀನ್‌ಗಳಿಗಿಂತ ಮಲ್ಟಿಪ್ಲೆಕ್ಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಏನೂ ಸಿಕ್ಕಿಲ್ಲ. ಆದರೆ, ವೀಕೆಂಡ್‌ನಲ್ಲಿ ಸಿನಿಮಾದ ಮೊದಲನೇ ದಿನಕ್ಕಿಂತ ಹೆಚ್ಚಿನ ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಕೊನೆಯ ಪಕ್ಷ ಎರಡು ದಿನಗಳಲ್ಲಿ 35 ರಿಂದ 40 ಲಕ್ಷ ರೂಪಾಯಿ ಕಲೆಕ್ಷನ್ ಆದರೆ, ಮೂರು ದಿನಕ್ಕೆ ಒಂದು ಕೋಟಿ ರೂಪಾಯಿ ಗಳಿಕೆ ಮಾಡಿದಂತೆ ಆಗುತ್ತೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.