ಕುರಿಗಾಯಿ ಹನುಮಂತ SSLC ಯಲ್ಲಿ ಎಷ್ಟು ಅಂಕ ಪಡೆದಿದ್ದಾನೆ ಗೊತ್ತಾ, ಈತನ ಬುದ್ದಿವಂತಿಕೆಗೆ ರಾಜ್ಯದ ಜನ ಮೆಚ್ಚುಗೆ

 | 
ಕಿ
ವೈಲ್ಡ್ ಕಾರ್ಡ್​ ಮೂಲಕ ಕನ್ನಡ ಬಿಗ್​ ಬಾಸ್ ಸೀಸನ್​ 11ಕ್ಕೆ ಎಂಟ್ರಿ ಕೊಟ್ಟಿದ್ದ ಹಾವೇರಿಯ ಹಳ್ಳಿ ಹೈದ ಹನುಮಂತ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಬಿಗ್‌ಬಾಸ್ ಕನ್ನಡ 11 ರ ಟ್ರೋಫಿ ಗೆಲ್ಲುವ ಮೂಲಕ ಬಿಬಿಕೆ ಕಪ್ ಗೆದ್ದ ಮೊಟ್ಟ ಮೊದಲ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಬ ಗರಿಯೂ ಅವರ ಮುಡಿಗೇರಿದೆ.
ಹೌದು.. ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭವಾದ 15 ದಿನಗಳ ನಂತರ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ಗಾಯಕ ಹನುಮಂತ ಲಮಾಣಿ ಆರಂಭದಿಂದ ಕಡೆಯತನಕ ತಮ್ಮ ಸಮಚಿತ್ತದ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಕರ್ನಾಟಕದ ಜನರ ಮನಗೆದ್ದಿದ್ದರು. ಇದರ ಫಲವಾಗಿಯೇ 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದು ಕಪ್ ಗೆಲ್ಲುವ ಮೂಲಕ ರೆಕಾರ್ಡ್ ಬರೆದಿದ್ದಾರೆ. 
ಜಗದೀಶ್ ಹಾಗೂ ರಂಜಿತ್ ಹೊಡೆದಾಡಿಕೊಂಡು ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ಬಳಿಕ, ಜನರು ಬಿಗ್‌ಬಾಸ್ ನೋಡೋದೇ ಇಲ್ಲ, ಇನ್ಮುಂದೆ ಶೋ ಬೋರ್ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಮಾತಾಡಿಕೊಂಡಿದ್ದರು. ಆದರೆ ಆ ಖಾಲಿಯನ್ನು ತುಂಬಲು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಹನುಮಂತು ದೊಡ್ಮನೆಗೆ ಹೊಸ ಕಳೆ ತುಂಬಿದ್ದರು. 
ನಾನು ಗೆಲ್ಲೋಕೆ ಬಂದಿಲ್ಲ, ಇರೋವಷ್ಟು ದಿನ ಜಾಲಿ ಮಾಡಿ ಖುಷಿಯಾಗಿರ್ತೀನಿ ಎಂದು ಹೇಳಿ ಜನರ ಮೆಚ್ಚುಗೆ ಗಳಿಸಿದ್ದರು. ಇನ್ನು ವಿಟಿ ಅಲ್ಲಿ ನೋಡೋದಾದರೆ ಕಲಿಯೋಕೆ ಕೂಡಾ ಹನುಮಂತು ದಡ್ಡ ಏನಲ್ಲ.SSLC ಪರೀಕ್ಷೆಯಲ್ಲಿ 625 ಅಂಕಕ್ಕೆ 535 ಅಂಕ ಗಳಿಸಿ ಶಿಕ್ಷಕರಿಂದ ಭೇಷ್ ಅನ್ನಿಸಿಕೊಂಡ ಹಳ್ಳಿ ಹೈದ. ಹೌದು ಈದೀಗ ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.