ರಿಯಾಲಿಟಿ ಶೋ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರಶಾಂತ್, ನಾವು ತಕೆ ಒಡೆದು ದುಡ್ಡು ಮಾಡಿಲ್ಲ
Apr 24, 2025, 10:46 IST
|

ಪ್ರಶಾಂತ್ ಅವರು ಸದಾ ಎಲ್ಲರನ್ನೂ ನಗಿಸುವ ಕಾಮಿಡಿ ಕಿಲಾಡಿ. ಹಾಗಾಗಿ ಅವರನ್ನು ಎಲ್ಲರೂ ಕಾಲೆಳೆಯುವುದು ಕಾಮನ್. ಆದರೆ ಎಲ್ಲದಕ್ಕೂ ಇತಿ ಮಿತಿ ಅನ್ನೋದು ಇರಬೇಕಲ್ಲಾ ಎಂದು ಪ್ರಶಾಂತ್ ಕೋಪಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಬೆರಕೆ ಪ್ರಶಾಂತ್, ಗಂಡ್ಸಲ್ಲ, ಹೆಂಗಸಲ್ಲ ಎಂದೆಲ್ಲ ಅವರನ್ನು ತಮಾಷೆಯಾಗಿ ಕಾಲೆಳೆಯಲಾಗುತ್ತಿತ್ತು. ಈ ವಿಚಾರವನ್ನು ಉಲ್ಲೇಖಿಸಿರುವ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಇದು ಎಕ್ಸ್‌ಟ್ರೀಮ್ ಆಯ್ತು ಎನ್ನುವ ಮೂಲಕ ಕಣ್ಣೀರು ಸುರಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ.
ಬಾಯ್ಸ್ ವರ್ಸಸ್ ಗರ್ಲ್ಸ್ ವೇದಿಕೆಯಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ. ಪ್ರಶಾಂತ್ ಇತ್ತೀಚೆಗೆ ಮಹಿಳೆಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರಿಗೆ ಸೀಮಂತ ಕೂಡ ಮಾಡಲಾಗಿತ್ತು. ಮುಂದುವರಿದಂತೆ ಈಗ ಪ್ರಶಾಂತ್‌ಗೆ ಮಗು ಆಗಿದೆ ಎಂದು ಅನುಪಮಾ ಗೌಡ ಒಂದು ಗೊಂಬೆ ತಂದರು. ಮಗು ತಾಯಿಯನ್ನ ಮಿಸ್ ಮಾಡಿಕೊಳ್ತಿದೆ, ಕೆಲ ವಾರಗಳ ಹಿಂದಷ್ಟೇ ನಮ್ಮ ವೇದಿಕೆಯಲ್ಲಿ ಗರ್ಭಿಣಿಯ ಸೀಮಂತ ನಡೆದು ಕಳೆದ ವಾರ ಗಂಡು ಮಗು ಜನಿಸಿತ್ತು ಎಂದು ಅನುಪಮಾ ಗೌಡ ಹೇಳಿದ್ದರು.
ಇದಕ್ಕೆ ವೇದಿಕೆ ಮೇಲೆಯೇ ಅಸಮಾಧಾನ ಹೊರಹಾಕಿದ ಪ್ರಶಾಂತ್ ಒಂದು ಸಲ ಸರಿ, ಎರಡು ಸಲ ಸರಿ, ಪ್ರತಿ ಬಾರಿಯೂ ಅದನ್ನೇ ಮಾಡಿದರೆ ನನಗೂ ಬೇಜಾರಾಗುತ್ತೆ. ನಮ್ಮನೆ ಹೊರಗೆಲ್ಲ ಅದನ್ನೇ ಮಾತನಾಡಿಕೊಳ್ತಾರೆ. ಪ್ರಶಾಂತ್ ಗಂಡ್ಸಲ್ಲ ಅನ್ನೋದು ಪ್ರತಿ ಬಾರಿ ಮಾಡಿದ್ರೆ ಸರಿಯಲ್ಲ. ಇದನ್ನ ಇಲ್ಲಿಗೇ ನಿಲ್ಲಿಸಿದ್ರೆ ಒಳ್ಳೇದು ಎನ್ನುವುದು ನನ್ನ ಅನಿಸಿಕೆ ಎಂದಿದ್ದಾರೆ. ಇದಕ್ಕೆ ಅಲ್ಲಿದ್ದವರೆಲ್ಲರೂ ಶಾಕ್ ಆಗಿದ್ದಾರೆ. ಇದೆಲ್ಲಾ ತಮಾಷೆಗೆ ಮಾಡೋದಲ್ವಾ ಎಂದು ಅನುಪಮಾ ಗೌಡ ಕೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023