ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ, ಪುಣ್ಯಕ್ಷೇತ್ರ ಧರ್ಮಸ್ಥಳ ಹೆಸರು ಹೇಳಿ ಎಡವಟ್ಟು ಮಾಡಿಕೊಂಡ ಹೆಬ್ಬಾಳ್ಕರ್?
Updated: Jan 15, 2025, 17:18 IST
|

ಸ್ನೇಹಿತರೇ..ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ, ವಿಧಾನಪರಿಷತ್ ಸದಸ್ಯ ಚೆನ್ನರಾಜು ಹಟ್ಟಿಹೊಳಿ ಪ್ರಯಾಣಿಸುತ್ತಿದ್ದ ಕಾರು ಬೆಳಗಾವಿಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಭಾರೀ ಅಪಘಾತಕ್ಕೀಡಾಗಿದೆ. ರಸ್ತೆಯಲ್ಲಿ ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಮರಕ್ಕೆ ಡಿಕ್ಕಿ ಹೊಡೆದಿದೆ. ಹಾಗಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆನ್ನಿಗೆ ಬಲವಾದ ಪೆಟ್ಟಾಗಿದೆ. ಇವರ ಬೆನ್ನಿನ ಎಲ್1 ಮತ್ತು ಎಲ್4 ಫ್ರಾಕ್ಚರ್ ಆಗಿರುವುದು ಧೃಡವಾಗಿದೆ. ಕುತ್ತಿಗೆ ಹಾಗೂ ಮುಖ ಭಾಗಕ್ಕೆ ಕೂಡಾ ಸಣ್ಣ ಪುಟ್ಟ ಗಾಯಗಳಾಗಿವೆ.ಸದ್ಯ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಪತಿ ರವೀಂದ್ರ ಹೆಬ್ಬಾಳ್ಕರ್ ಅವರು ಪತ್ನಿಯ ಆರೋಗ್ಯ ವಿಚಾರಿಸಿದ್ದಾರೆ.
ಸ್ನೇಹಿತರೇ... ಕಳೆದ ಕೆಲ ದಿನಗಳ ಹಿಂದಷ್ಟೇ ನಡೆದಿದ್ದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್ನಲ್ಲಿ ಎಂಎಲ್ಸಿ ಸಿಟಿ ರವಿ ಅವರು ನನ್ನ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪ ಮಾಡಿದ್ದರು. ಆದರೆ, ಸಿಟಿ ರವಿಯವರು ಈ ಆರೋಪವನ್ನು ಅಲ್ಲಗೆಳದಿರು ನಾನು ಅಶ್ಲೀಲ ಪದವನ್ನು ಬಳಕೆ ಮಾಡಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಈ ವಿಚಾರ ರಾಜಕೀಯ ಜಟಾಪಟಿಗೂ ಕಾರಣವಾಗಿತ್ತು.
https://www.youtube.com/live/Uqsm8ZspGMg?si=iEeIDJZSnA_I83KX
ಈ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಶೇಷ ಸಂದರ್ಶನದಲ್ಲಿ ಮಾತನಾಡಿ, ಅಶ್ಲೀಲ ಪದ ಬಳಕೆ ಮಾಡಿಲ್ಲ ಅಂತ ಧರ್ಮಸ್ಥಳ ಮಂಜುನಾಥನ ಮೇಲೆ ಪ್ರಮಾಣ ಮಾಡಿ ಹೇಳಿ, ನೋಡೋಣ. ಬನ್ನಿ ಧರ್ಮಸ್ಥಳಕ್ಕೆ ಪ್ರಮಾಣ ಮಾಡಿ ಹೇಳಿ. ಧರ್ಮಸ್ಥಳಕ್ಕೆ ಬನ್ನಿ, ನಾನೂ ಕೂಡ ಬರುತ್ತೇನೆ ಎಂದು ಸಿಟಿ ರವಿ ಅವರಿಗೆ ಬಹಿರಂಗ ಆಹ್ವಾನ ನೀಡಿದರು. ಆದರೆ ಸುಳ್ಳು ಆರೋಪ ಮಾಡಿದ್ದರಿಂದಲೇ ಧರ್ಮಸ್ಥಳದ ಮಂಜುನಾಥ ಮುನಿಸಿಕೊಂಡಿದ್ದಾನೆ ಹಾಗಾಗಿಯೇ ಈ ಘಟನೆ ಸಂಭವಿಸಿದೆ ಎಂದು ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ನೇಹಿತರೇ..ಒಟ್ಟಿನಲ್ಲಿ ಹೇಳುವುದಾದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಮಯವೇ ಸರಿ ಇರಲಿಲ್ಲ ಎಂದೆನಿಸುತ್ತದೆ. ಏಕೆಂದರೆ ಇತ್ತೀಚೆಗೆಷ್ಟೇ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸರ್ಕಾರದಿಂದ ಹೊಸ ಕಾರು ನೀಡಲಾಗಿತ್ತು. ವಿಶೇಷ ಅಂದರೆ ಸರ್ಕಾರ ನೀಡಿದ ಈ ಕಾರು ಕಪ್ಪು ಬಣ್ಣದಲ್ಲೇ ಇರಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮೊದಲೇ ಸೂಚಿಸಿದ್ದರು. ಕಾರಣ ವಾಹನಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅದೃಷ್ಠದ ಬಣ್ಣ ಕಪ್ಪು.
ಲಕ್ಷ್ಮಿ ಹೆಬ್ಬಾಳ್ಕರ್ ಬಳಿ ಇರುವ ಎಲ್ಲಾ ಐಷಾರಾಮಿ ಹಾಗೂ ದುಬಾರಿ ಕಾರುಗಳ ಬಣ್ಣ ಕಪ್ಪು. ಹಾಗೂ ಸರ್ಕಾರ ನೀಡಿದ ಕಪ್ಪು ಬಣ್ಣದ ಇನ್ನೋವಾ ಹೈಕ್ರಾಸ್ ಕಪ್ಪು ಬಣ್ಣದ ಕಾರಿಗೆ ಹೆಬ್ಬಾಳ್ಕರ್ ಕೆಎ 01 ಜಿಎ 9777 ನಂಬರ್ ಅಲಾಟ್ ಮಾಡಿಸಿಕೊಂಡಿದ್ದರು. ಅಷ್ಟಕ್ಕೂ ಹೆಬ್ಬಾಳ್ಕರ್ ಅವರ ಎಲ್ಲಾ ಕಾರಿನ ನಂಬರ್ 9777. ಅದು ಅವರ ಅದೃಷ್ಟದ ಸಂಖ್ಯೆ ಕೂಡಾ ಹೌದು ಆದರೆ ಇದೇ ಲಕ್ಕಿ ನಂಬರ್ ಕಾರು ಇದೀಗ ಅಪಘಾತಕ್ಕೀಡಾಗಿ ಸಚಿವೆ ಆಸ್ಪತ್ರೆ ಸೇರಿರುವುದು ಬೇಸರದ ಸಂಗತಿಯಾಗಿದೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,14 Mar 2025
ಮಗು ನಾಮಕರಣಕ್ಕೆ ದರ್ಶನ್ ಬರಲ್ಲ, ಬಿರುಗಾಳಿ ಎಬ್ಬಿಸಿದ ಸುಮಲತಾ
Fri,14 Mar 2025
ಸ್ವಂತ ತಂದೆಯಿಂದಲೇ ಮಗಳ ಅ ತ್ಯಾಚಾರ, ಮುದ್ದಿನ ಮಗಳ ಜೀವನ ನುಂಗಿದ ಕಾ ಮುಕ
Thu,13 Mar 2025