ಮಂಗಳೂರಿನ ಆಸ್ಪತ್ರೆಯಲ್ಲಿ ಕಾ.ಮುಕರ ಅಟ್ಟಹಾಸ

 | 
Bd

ಪುರಾಣ ಕಾಲದಲ್ಲಿ ರಾಕ್ಷಸರು ಇದ್ದಂತೆ ಈಗ ಅಲ್ಲಲ್ಲಿ ಮಾನವ ರೂಪಿ ರಾಕ್ಷಸರು ಕಾಣ ಸಿಗುತ್ತಾರೆ ಹೌದು ಮಂಗಳೂರು ನಗರದ ಪಂಪ್‌ವೆಲ್ ಬಳಿಯಿರುವ ಖಾಸಗಿ ಆಸ್ಪತ್ರೆಯಲ್ಲಿಯೇ ಕಾಮುಕನೋರ್ವನು ವಿಶೇಷ ಚೇತನೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮನ್ಸೂರ್ ಅಹ್ಮದ್ ಬಾಬಾ ಶೇಖ್ ಹಾಗೂ ಮುಂಬೈ ವಾಸಿ ಅಬ್ದುಲ್ ಹಲೀಂ ಆಗಸ್ಟ್ 10ರಂದು ಬೈಕ್‌ನಲ್ಲಿ ಕಾಸರಗೋಡಿಗೆ ಹೋಗಿ ಬರುತ್ತಿದ್ದ ವೇಳೆ ಮಂಜೇಶ್ವರ ಹೊಸಂಗಡಿ ಬಳಿ ಬೈಕ್ ಅಪಘಾತಗೊಂಡಿದೆ. 

ಆಗ ಇಬ್ಬರೂ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳು ತಮ್ಮನನ್ನು ನೋಡಲು ಮನ್ಸೂರ್ ಅಹ್ಮದ್ ಸಹೋದರಿ ತನ್ನ ವಿಶೇಷ ಚೇತನೆ ಅಪ್ರಾಪ್ತ ಪುತ್ರಿ ಹಾಗೂ ಮನ್ಸೂರ್ ಪತ್ನಿ ಶಮೀನಾ ಬಾನುವಿನೊಂದಿಗೆ ಬಂದಿದ್ದರು‌. ಬಳಿಕ ಆಕೆ ತನ್ನ ಪುತ್ರಿ ಹಾಗೂ ಶಮೀನಾ ಬಾನುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೊರಗಡೆ ಹೋಗಿದ್ದರು‌. 

ಈ ವೇಳೆ ಆರೋಪಿ ಅಬ್ದುಲ್ ಹಲೀಂ ಗಾಯಾಳು ಮನ್ಸೂರ್ ಪತ್ನಿ ಶಮೀನಾ ಬಾನುವಿನೊಂದಿಗೆ ಆಸ್ಪತ್ರೆಯೊಳಗಡೆಯೇ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಇದನ್ನು ವಿಶೇಷ ಚೇತನೆ ಅಪ್ರಾಪ್ತೆ ನೋಡಿದ್ದಾಳೆ. ಇದನ್ನು ಗಮನಿಸಿದ ಅಬ್ದುಲ್ ಬಾಲಕಿಯನ್ನು ಬೆಡ್ ಮೇಲೆ ಕುಳ್ಳಿರಿಸಿದ್ದಾಳೆ. ಆಗ ಆರೋಪಿ ಆಕೆಯ ಮೇಲೂ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಇದಕ್ಕೆ ಪ್ರತಿರೋಧ ಒಡ್ಡಿದಾಗ ಶಮೀನಾ ಬಾನು ಅತ್ಯಾಚಾರ ಎಸಗಲು ಸಹಕರಿಸಿದ್ದಾಳೆ‌ ಎಂದು ತಿಳಿದುಬಂದಿದೆ.

ವಿಚಾರ ತಿಳಿದು ಮಂಗಳೂರು ಮಹಿಳಾ ಠಾಣೆಗೆ ಸಂತ್ರಸ್ತ 
ಬಾಲಕಿ ತಾಯಿ ದೂರು ನೀಡಿದ್ದಾರೆ. ಅದರಂತೆಯೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂಬೈಗೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಅಬ್ದುಲ್ ಹಲೀಂನನ್ನು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಸಹಕರಿಸಿರುವ ಶಮೀನಾ ಬಾನುವನ್ನು ಬಂಧಿಸಿದ್ದಾರೆ. ಇನ್ನು ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಈ ವೇಳೆ ಇವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.