ಬಿಗ್ ಬಾಸ್ ಮನೆಯಿಂದ ಹೊರಬಂದ ತಕ್ಷಣ ದೊಡ್ಡ ಪಾರ್ಟಿ ಇಟ್ಟ ಮೈಕಲ್

 | 
ರರರ

ಕನ್ನಡ ಬಾರದಿದ್ದರೂ, ಫೈನಲ್‌ಗೆ ಕೆಲವೇ ಹೆಜ್ಜೆ ಎನ್ನುವಷ್ಟು ದಿನಗಳವರೆಗೆ ಬಿಗ್‌ ಬಾಸ್‌ ಮನೆಯಲ್ಲಿ ಉಳಿದುಕೊಂಡಿದ್ದ ಸ್ಪರ್ಧಿ ಮೈಕಲ್‌ ಅಜಯ್‌.10ನೇ ಆವೃತ್ತಿಯ ಈ ರಿಯಾಲಿಟಿ ಶೋ ಆರಂಭವಾದಾಗ  ಮೈಕಲ್ ಅಜಯ್ ಯಾರೆಂಬುದು ಹೆಚ್ಚಿನವರಿಗೆ ತಿಳಿದಿರಲಿಲ್ಲ. ಹಿಂದಿಯ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದ ಮೈಕಲ್‌ ವಿದೇಶದ ಪ್ರಜೆಯಾಗಿದ್ದರೂ, ಕರ್ನಾಟಕದಲ್ಲಿ ಸಂಬಂಧಿಕರನ್ನು ಹೊಂದಿದ್ದಾರೆ.

ಕನ್ನಡವೇ ಬಾರದ ಕಾರಣ ಮೈಕಲ್‌ ಅವರು ಹೆಚ್ಚು ಬಿಗ್‌ ಬಾಸ್‌ ಮನೆಯಲ್ಲಿ ಉಳಿಯಲಾರರು ಎಂದು ಹೆಚ್ಚಿನವರು ಭಾವಿಸಿದ್ದರು. ಬೇರೆಯವರು ಬಿಡಿ, ಸ್ವತಃ ಅವರಿಗೂ ಎರಡು ಮೂರು ವಾರಕ್ಕಿಂತ ಹೆಚ್ಚು ದಿನ ಇರುವ ಬಗ್ಗೆ ಭರವಸೆ ಇರಲಿಲ್ಲ. ಬಿಗ್‌ ಬಾಸ್‌ ಮನೆಯಲ್ಲಿ ಕನ್ನಡ ಕಲಿತು ಕನ್ನಡಿಗರ ಮನಗೆದ್ದರ ಅವರು, ನೇರ ಮಾತುಗಳ ಮೂಲಕ ಎಲ್ಲರಿಗೂ ಇಷ್ಟವಾಗಿ ಇಷ್ಟು ದಿನ ಉಳಿದಿದ್ದರು.

ನಾನು ನಿಮ್ಮ ಮಣ್ಣಿನ ಮಗ. ನಿಮ್ಮ ಕನ್ನಡದ ಕಂದ. ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ಮೈಕಲ್ ಅಜಯ್. ತುಂಬ ಮಿಸ್ಸಿಂಗ್ ಫೀಲಿಂಗ್‌ನಲ್ಲಿದ್ದೀನಿ. ಆದರೆ ಈಗ ಹೊರಗಡೆ ಇರುವ ಜೀವನವನ್ನು ಅನುಭವಿಸಲು ಎಕ್ಸೈಟ್‌ ಆಗಿದ್ದೀನಿ. ನಾನು ಬಿಗ್‌ಬಾಸ್‌ ಮನೆಯೊಳಗೆ ಹೋದಾಗ, ಅಲ್ಲಿನ ವಾತಾವರಣ ನೋಡಿ ಎರಡು ಮೂರು ವಾರ ಇರಬಹುದಷ್ಟೇ ಎಂದುಕೊಂಡಿದ್ದೆ. ಆದರೆ ಹದಿಮೂರು ವಾರ ಉಳಿದೆ. ಈವತ್ತು ಎಲಿಮಿನೇಟ್ ಆಗಬಹುದು ಎಂಬ ನಿರೀಕ್ಷೆ ಇತ್ತು. 

ಆದರೆ ಎಲ್ಲೋ ಒಂದು ಕಡೆ, ಇನ್ನೊಂದೆರಡು ವಾರ ಕಳೆದು ಫೈನಲ್‌ಗೂ ಹೋಗಬಹುದು ಎಂಬ ವಿಶ್ವಾಸವೂ ಇತ್ತು. ಆದರೆ ಬ್ಯಾಡ್‌ಲಕ್ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಟಾರ್ಟಿಂಗ್‌ನಲ್ಲಿ ತುಂಬ ಸ್ಲೋ ಆಗಿದ್ದೆ. ಅದೇ ನನ್ನನ್ನು ಕೊಂಚ ಹಿಂದಕ್ಕೆ ತಳ್ಳಿತು ಅನಿಸುತ್ತದೆ. ಆರಂಭದಿಂದಲೇ ಇನ್ನಷ್ಟು ಸ್ಟ್ರಾಂಗ್ ಆಗಿ ನಿಂತುಕೊಂಡಿದ್ದರೆ ಇನ್ನೂ ತುಸು ಮುಂದಕ್ಕೆ ಹೋಗಬಹುದಿತ್ತು ಅನಿಸುತ್ತದೆ. ಈಗೇನಾದ್ರೂ ಮತ್ತೆ ಪುನಃ ಮನೆಯೊಳಗೆ ಹೋಗಲು ಅವಕಾಶ ಸಿಕ್ಕರೆ ಮೊದಲ ದಿನದಿಂದಲೇ ಎಲ್ಲರ ಜೊತೆಯಲ್ಲಿ ಬೆರೆಯಲು ಶುರುಮಾಡುತ್ತಿದ್ದೆ.

ಬೆಳಿಗ್ಗೆ ಹಾಡು ಹಾಕಿ ಎಬ್ಬಿಸುತಿದ್ದದ್ದನ್ನು ಮಿಸ್ ಮಾಡ್ತೀನಿ. ಬೆಳಿಗ್ಗೆ ಹಾಡು ಕೇಳಿ ಎದ್ದು, ಡಾನ್ಸ್ ಮಾಡಿ, ಕಾಫಿ ಕುಡಿದು, ವರ್ಕೌಟ್ ಮಾಡಿ ಹೋಗಿ ಪಾತ್ರೆ ತೊಳೆಯುವ ದಿನಚರಿಯನ್ನು ತುಂಬ ಮಿಸ್ ಮಾಡ್ಕೋತೀನಿ. 90 ದಿನಗಳ ಕಾಲ ಆ ದಿನಚರಿ ಮಾಡಿ ಸೆಟ್ ಆಗಿಬಿಟ್ಟಿದೆ ನನಗೆ. ಅದನ್ನು ಮಿಸ್ ಮಾಡ್ಕೋತೀನಿ. ಬಿಗ್‌ಬಾಸ್ ಜರ್ನಿ ತುಂಬ ಅಮೇಜಿಂಗ್ ಆಗಿತ್ತು. ಎರಡೇ ವಾರ ಇರ್ತೀನಿ ಅಂದುಕೊಂಡು ಹೋದವನು ನಾನು. 

ಆದರೆ, ಈ ಹದಿಮೂರು ವಾರದಲ್ಲಿ ಹಲವು ಬಗೆಯ ಸಂದರ್ಭಗಳಲ್ಲಿ ಸಾಗಿದರೂ ನಾನು ನಾನಾಗಿಯೇ ಇದ್ದೀನಿ. ಹಾಗಾಗಿ ಇನ್ನೂ ಸಾಕಷ್ಟು ಸಾಧನೆ ಮಾಡಬಹುದು ಎಂದು ನನಗೆ ವಿಶ್ವಾಸ ಹುಟ್ಟಿದೆ. ಈಗ ಹೊರಬಂದಮೇಲೆ ಪಾರ್ಟಿ ಮಾಡಿಕೊಂಡು ಆರಾಮಾಗಿ ಇದ್ದೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.