ನನ್ನ ಅತ್ತೆ ಬೇಗ ಸಾ,ಯಬೇಕು ಸ್ವಾಮಿ, ದೇವಲದ ಹುಂಡಿಯಲ್ಲಿ ವಿಚಿತ್ರ ನೋಟು ಪತ್ತೆ
ಜಿಲ್ಲೆಯ ಪ್ರಸಿದ್ಧ ದೇಗುಲಗಳ ಹುಂಡಿ ಎಣಿಕೆ ಕಾರ್ಯ ಮಾಡುವಾಗ ವಿಶೇಷ ಹರಕೆ ಮಾಡಿಕೊಂಡಿರುವ ನೋಟು ಪತ್ತೆಯಾಗಿದೆ. ಸಾಮಾನ್ಯವಾಗಿ ಜನರು ಇಷ್ಟಾರ್ತ ಸಿದ್ಧಿಗೆ ಅಂತ ಚೀಟಿಗಳಲ್ಲಿ ಆಗಬೇಕಿರೋ ಕಾರ್ಯದ ಬಗ್ಗೆ ಬರೆದು ದೇವರ ಹುಂಡಿಗೆ ಹಾಕುತ್ತಾರೆ. ಆದರೆ ಇಲ್ಲಿ ವಿಚಿತ್ರ ಹರಕೆಯ ನೋಟು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಸಾಮಾನ್ಯವಾಗಿ ಆಸ್ತಿ, ಪ್ರೀತಿ, ಮನೆ ನಿರ್ಮಾಣ, ಸಾಲ ಬಾಧೆ ನಿವಾರಣೆ, ಆರೋಗ್ಯ ಸಮಸ್ಯೆ ನಿವಾರಣೆ ಸೇರಿದಂತೆ ದೇವರಿಗೆ ಹರಕೆ ಚೀಟಿ ಬರೆದು ಹುಂಡಿಗೆ ಹಾಕುವುದು ಸಾಮಾನ್ಯ. ಆದರೆ ಸದ್ಯ ಕಲಬುರಗಿ ಜಿಲ್ಲೆ ವಾಟ್ಸಾಪ್ ಗ್ರೂಪ್‌ಗಳಲ್ಲಿ ವಿಚಿತ್ರ ಹರಕೆಯ ನೋಟಿನ ಫೋಟೋ ಹರಿದಾಡ್ತಿದೆ.
50 ರೂಪಾಯಿ ನೋಟಿನ ಮೇಲೆ ನಮ್ಮ ಅತ್ತೆ ಬೇಗ ಸಾಯಿಬೇಕು ಸ್ವಾಮಿ ಎಂದು ಬರೆದು ದೇವರ ಹುಂಡಿಕೆ ಹಾಕಿರುವ ಅನುಮಾನ ವ್ಯಕ್ತವಾಗಿದೆ. ಗಾಣಗಾಪುರ ದತ್ತಾತ್ರೇಯ ದೇಗುಲದ ಹುಂಡಿ ಎಣಿಕೆ ವೇಳೆ ವಿಚಿತ್ರ 50 ರೂ ನೋಟ್ ಸಿಕ್ಕಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದ ದತ್ತನ ಹುಂಡಿ ಎಣಿಕೆ ಮಾಡಲಾಗಿತ್ತು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ 50 ರೂಪಾಯಿ ನೋಟಿನ ಫೋಟೋ ವೈರಲ್ ಆಗಿದ್ದು, ಜನರು ಮಿಶ್ರ ಪ್ರತಿಕ್ರಿಯೆ ನೀಡಿ ಕಾಮೆಂಟ್ ಮಾಡ್ತಿದ್ದಾರೆ.
ಸೊಸೆ ಅತ್ತೆ ಮೇಲಿನ ಸಿಟ್ಟಿಗೆ ದೇವರ ಬಳಿ ಹರಕೆ ಕಟ್ಟಿಕೊಂಡಿರಬೇಕು ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದು, ನೋಟಿನ ಮೇಲೆ ಬರೆಯುವ ಮೂಲಕ ಸೊಸೆ ತನ್ನ ಕೋಪವನ್ನು ಹೊರಹಾಕಿ ಸಮಾಧಾನ ಮಾಡಿಕೊಂಡಿರಬೇಕು ಎಂದಿದ್ದಾರೆ.ಕಲಬುರಗಿಯಿಂದ ಕೇವಲ 50 ಕಿ.ಮಿ. ದೂರದಲ್ಲಿ ಶ್ರೀ ಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಇದೆ.
ಕಲಬುರಗಿ ಜಿಲ್ಲೆ ಎಂದ ತಕ್ಷಣ ನೆನಪಿಗೆ ಬರುವುದು ಶ್ರೀ ದತ್ತಾತ್ರೇಯ ದೇವಸ್ಥಾನ ಇರುವ ಸ್ಥಳ ಗಾಣಗಾಪುರ. ಇಲ್ಲಿ ರಾಜ್ಯದ ಮೂಲ ಮೂಲೆಗಳಿಂದ ಭಕ್ತರು ಬಂದು ದೇವರ ದರ್ಶನ ಪಡೆದುಕೊಳ್ಳುತ್ತಾರೆ. ಕೆಲವರು ಹೀಗೆಲ್ಲಾ ಬೇಡಿಕೊಳ್ಳುತ್ತಾರ ಎಂದು ಆಶ್ಚರ್ಯ ವ್ಯಕ್ತಡಿಸಿದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.