Bigboss 12ರ ಹೊಸ ಆಂಕರ್ ಆಗಿ ರಜತ್ ಆಯ್ಕೆ, ಕಿಚ್ಚ ಸುದೀಪ್ ಮೂಲಕ ಗ್ರಾಂಡ್ Welcome
Jan 30, 2025, 22:32 IST
|

ಗ್ರ್ಯಾಂಡ್ ಫಿನಾಲೆ ಇತ್ತೀಚೆಗೆ ಮುಗಿದಿದೆ. ಸತತವಾಗಿ ಬಿಗ್‌ಬಾಸ್ ನಿರೂಪಣೆ ಮಾಡಿಕೊಂಡು ಬಂದಿದ್ದ ನಟ ಕಿಚ್ಚ ಸುದೀಪ್ ಮುಂದಿನ ಸೀಸನ್‌ಗೆ ಬರುತ್ತಿಲ್ಲ. ಇದನ್ನು ಖುದ್ದು ಅವರೇ ಖಚಿತಪಡಿಸಿದ್ದಾರೆ. ಹೀಗಾಗಿ ಮುಂದಿನ ಸೀಸನ್ ಬಿಗ್‌ಬಾಸ್ ನಿರೂಪಣೆಗೆ ಸುದೀಪ್ ಬದಲಿಗೆ ಇನ್ಯಾರು ಬರಲಿದ್ದಾರೆ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ಸ್ಯಾಂಡಲ್‌ವುಡ್‌ನ ಲೀಡ್ ನಟರ ಹೆಸರುಗಳಂತೂ ಈ ವಿಚಾರದಲ್ಲಿ ಓಡಾಡುತ್ತಿವೆ. ಸುದೀಪ್ ಅವರ ಜಾಗಕ್ಕೆ ಯಾರು ಬರ್ತಾರೋ ಅನ್ನೋ ಸುಳಿವು ಇಲ್ಲಿದೆ..
ಬಿಗ್‌ಬಾಸ್ ಕಾರ್ಯಕ್ರಮವು ಹಲವು ಕಾರಣಗಳಿಂದ ಜನಮನ್ನಣೆ ಗಳಿಸಿರುವುದು ಗೊತ್ತಿರುವ ವಿಚಾರ. ಇನ್ನು ಸುದೀಪ್ ಅವರು ಈ ಕಾರ್ಯಕ್ರಮ ನಡೆಸಿಕೊಡುತ್ತಾರೆ ಎಂಬ ಕಾರಣದಿಂದಲೂ ಬಿಗ್‌ಬಾಸ್ ಮನೆಮಾತಾಗಿರುವುದೂ ಸತ್ಯ. ಆದರೆ ಸುದೀಪ್ ಅವರು ಬಿಗ್‌ಬಾಸ್ ನಿರೂಪಣೆಗೆ ಗುಡ್‌ಬೈ ಹೇಳಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಕಿಚ್ಚನಿಲ್ಲದ ಬಿಗ್‌ಬಾಸ್ ಏನ್ ಮಜಾ ಇರುತ್ತೆ ಗುರೂ.. ಎನ್ನುವ ಮಾತುಗಳೂ ಕೇಳಿಬರುತ್ತಿವೆ.
ಮತ್ತೊಂದೆಡೆ ಕಿಚ್ಚನಷ್ಟು ಸೊಗಸಾಗಿ ಬಿಗ್‌ಬಾಸ್ ಕಾರ್ಯಕ್ರಮ ನಡೆಸಿಕೊಡುವ ಸಾಮರ್ಥ್ಯ ಯಾವ ನಟರಿಗಿದೆ? ಎಂಬ ಕುತೂಹಲ ಕೂಡ ಎಲ್ಲರಲ್ಲಿದೆ. ಸದ್ಯ ಈಗಷ್ಟೇ ಗ್ರ್ಯಾಂಡ್ ಫಿನಾಲೆ ಮುಗಿದಿರುವುದರಿಂದ ಮುಂದಿನ ಸೀಸನ್‌ವರೆಗೆ ಈ ಕುತೂಹಲ ಹಾಗೇ ಇರುವ ಸಾಧ್ಯತೆ ಇದೆ. ವಾಹಿನಿ ಕೂಡ ಮುಂದಿನ ಸೀಸನ್ ಯಾರು ನಡೆಸಿಕೊಡ್ತಾರೆ ಎಂದು ಇನ್ನೂ ರಿವೀಲ್ ಮಾಡಿಲ್ಲ.
ಆದರೆ, ಸುದೀಪ್ ಅವರ ಬದಲಿಗೆ ಯಾರು ಬಿಗ್‌ಬಾಸ್ ಹೋಸ್ಟ್ ಮಾಡ್ತಾರೆ ಎಂಬ ಪ್ರಶ್ನೆಗೆ ಹಲವರ ಹೆಸರುಗಳು ಚಾಲ್ತಿಯಲ್ಲಿವೆ. ಕನ್ನಡ ಚಿತ್ರರಂಗದ ಆರು ಪ್ರಮುಖ ನಟರ ಹೆಸರುಗಳು ಬಿಗ್‌ಬಾಸ್ ನಿರೂಪಕರಾಗುವ ರೇಸ್‌ಗೆ ಬಂದಿವೆ. ನಟ ರಮೇಶ್ ಅರವಿಂದ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಾಕಿಂಗ್ ಸ್ಟಾರ್ ಯಶ್, ನಟ ರಿಷಬ್ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಹೆಸರು ಸದ್ಯ ಮುನ್ನೆಲೆಗೆ ಬಂದಿವೆ. ಆದ್ರೆ ಕೆಲವರು ಮಾತ್ರ ಖಡಕ್ ರಜತ್ ಆದ್ರೂ ಓಕೇ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.