ಆ ಭಗವಂತ ನನ್ನ ಜೊತೆ ಯಾವಾಗಲೂ ಇದ್ದಾನೆ, ಹಿಂದಿವಾಲ‌ ಸಿಕ್ಕ‌ ಬಳಿಕ ವೈಷ್ಣವಿ ಫುಲ್ ಪಿದಾ

 | 
Hhhh
ನಟಿ ವೈಷ್ಣವಿ ಗೌಡ ಒಂದಿಷ್ಟು ಸಂತೋಷ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.ಸೀತಾರಾಮ ಸೀರಿಯಲ್ ನಟಿ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮದುವೆಯಾಗೋ ಭಾವಿ ಪತಿ ಬಗ್ಗೆ ಓಪನ್ ಆಗಿ ನಟಿ ಹಂಚಿಕೊಂಡಿದ್ದಾರೆ. ಈ ವೇಳೆ, ಈ ಹಿಂದೆ ಮುರಿದುಬಿದ್ದ ಸಂಬಂಧದ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಜೀವನದಲ್ಲಿ ಆಗೋದೆಲ್ಲಾ ಒಳ್ಳೆಯದಕ್ಕೆ ಎಂದು ನಟಿ ವೈಷ್ಣವಿ ರಿಯಾಕ್ಟ್ ಮಾಡಿದ್ದಾರೆ.
ನನ್ನ ಜೀವನದಲ್ಲಿ ಒಂದನ್ನೇ ನಂಬಿರೋದು. ಆಗೋದೆಲ್ಲಾ ಒಳ್ಳೆಯದಕ್ಕೆ ಭಗವಂತ ನಮ್ಮ ಜೊತೆ ಇದ್ದಾನೆ. ಅವರು ಯಾವತ್ತೂ ನನ್ನ ಕೈಬಿಡೋದಿಲ್ಲ. ಅದನ್ನು ಅಷ್ಟೇ ನಂಬಿದ್ದೀನಿ. ಒಳ್ಳೆಯ ಮನಸ್ಸಿದ್ದರೆ ಒಳ್ಳೆಯದು ಆಗುತ್ತದೆ ಎಂದಿದ್ದಾರೆ. ಈ ಹಿಂದೆ ನಟ ವಿದ್ಯಾಭರಣ ಜೊತೆ ಮುರಿದುಬಿದ್ದ ಮದುವೆ ವಿಚಾರಕ್ಕೆ ನಟಿ ಕ್ಲ್ಯಾರಿಟಿ ನೀಡಿದ್ದಾರೆ. ಕಹಿ ಘಟನೆ ಮರೆತು ಈಗ ಅನುಕೂಲ್ ಜೊತೆ ಹೊಸ ಅದ್ಯಾಯಕ್ಕೆ ಮುನ್ನುಡಿ ಬರೆಯಲು ವೈಷ್ಣವಿ ರೆಡಿಯಾಗಿದ್ದಾರೆ.
ಕಳೆದ ಸೋಮವಾರವಷ್ಟೇ ಏರ್‌ಫೋರ್ಸ್ ಲೆಫ್ಟಿನೆಂಟ್ ಆಗಿರುವ ಛತ್ತೀಸ್‌ಗಢ ಮೂಲದ ಅನುಕೂಲ್ ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಒಂದು ವರ್ಷದಿಂದ ಅನುಕೂಲ್ ಪರಿಚಯವಿದೆ. ಇದು ಲವ್ ಮ್ಯಾರೇಜ್ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇದು ಅರೇಂಜ್ ಮ್ಯಾರೇಜ್. ಇದು ಹಿರಿಯರು ನೋಡಿ ನಿಶ್ಚಯಿಸಿದ ಮದುವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮ್ಯಾಟ್ರಿಮೋನಿ ಮೂಲಕ ಜಾತಕ ಶೇರ್ ಆದ ಬಳಿಕ ಅಪ್ಪ ಅಮ್ಮ ಈ ಮದುವೆ ನಿಶ್ಚಯಿಸಿದ್ದಾರೆ. ನಾವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು 1 ವರ್ಷ ಸಮಯ ತೆಗೆದುಕೊಂಡಿದ್ದೆವು. ಮದುವೆ ತಯಾರಿ ನಡೀತಿದೆ. ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದರು.ಈಗ ಎಲ್ಲರಿಗೂ ಉತ್ತರ ಸಿಕ್ಕಿದೆ. ನನಗೆ ಯಾವ ಥರದ ಹುಡುಗ ಬೇಕಿತ್ತು ಎಂದು. ಅನುಕೂಲ್ ಅವರು ಏರ್‌ಫೋರ್ಸ್‌ನಲ್ಲಿ ಇರೋದ್ರಿಂದ ಎತ್ತರವಾಗಿದ್ದಾರೆ. ಹೈಟ್ ಮ್ಯಾಚ್ ಆಗದೇ ಇದ್ದರೂ ಹಾರ್ಟ್ ಮ್ಯಾಚ್ ಆಗಿದೆ ಎನ್ನುತ್ತಾ ಭಾವಿ ಪತಿ ನೆನೆದು ವೈಷ್ಣವಿ ನಾಚಿನೀರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub