10ನೇ ತರಗತಿಯಲ್ಲಿ ವಿರಾಟ್ ಕೊಹ್ಲಿ ಅಂಕ ಕಂಡು ಇದೀಗ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ
May 19, 2025, 09:01 IST
|

ವಾಸ್ತವವಾಗಿ, ಇತ್ತೀಚೆಗೆ ಕರ್ನಾಟಕ ಸೇರಿ ಕೆಲ ರಾಜ್ಯಗಳ 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿವೆ. ಇದರಿಂದಾಗಿ ಹೆಚ್ಚಿನ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಕೆಲವರು ಶೇಕಡಾ 90 ಅಂಕಗಳನ್ನು ಪಡೆದಿದ್ದಾರೆ, ಇನ್ನು ಕೆಲವರು ಶೇಕಡಾ 100ಕ್ಕೆ 100 ಪಡೆದಿದ್ದಾರೆ. ಏತನ್ಮಧ್ಯೆ, ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಅವರ 10ನೇ ಮಾರ್ಕ್ಸ್ಕಾರ್ಡ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕೊಹ್ಲಿ 2004ರಲ್ಲಿ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದರು. ಆದರೆ, ಬ್ಯಾಟ್ ಹಿಡಿದು ಕ್ರೀಸ್‌ಗೆ ಪ್ರವೇಶಿಸಿದಾಗ ರನ್‌ಗಳ ಮಳೆ ಸುರಿಸಬಲ್ಲ ವಿರಾಟ್, 10ನೇ ತರಗತಿಯಲ್ಲಿ ಸಾಮಾನ್ಯ ಪ್ರದರ್ಶನ ನೀಡಿರುವುದ ಕಂಡುಬರುತ್ತದೆ. ಅವರು ಇಂಗ್ಲಿಷ್ ವಿಷಯದಲ್ಲಿ 82 ಅಂಕದೊಂದಿಗೆ A1 ಗ್ರೇಡ್ ಪಡದಿದ್ದರೇ, ಸಮಾಜ ವಿಜ್ಞಾನದಲ್ಲಿ 81 ಅಂಕ, ಹಿಂದಿಯಲ್ಲಿ 74 ಅಂಕ ಪಡದಿದ್ದಾರೆ. ಆದರೆ ಸೈನ್ಸ್ ಮತ್ತು ಟೆಕ್ನಲ್ಲಿ 55 ಮತ್ತು ಗಣಿತದಲ್ಲಿ 51 ಅಂಕ ಪಡೆದಿದ್ದಾರೆ.
ಒಟ್ಟಾರೆಯಾಗಿ ವಿರಾಟ್ ಮೊದಲ ಪ್ರಯತ್ನದಲ್ಲೇ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಅಂಕಪಟ್ಟಿಗೆ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕ್ರಿಕೆಟ್ ಮೇಲೆ ಗಮನಹರಿಸಿದ್ದರಿಂದ ಅವರು ಓದಿನಲ್ಲಿ ಉತ್ತಮ ಸಾಧನೆ ಮಾಡಲಿಲ್ಲ ಎಂದು ಹೇಳಿದ್ದಾರೆ.ಕ್ರಿಕೆಟ್ ಬದಲು ಅವರು ತಮ್ಮ ಓದಿನತ್ತ ಹೆಚ್ಚಿನ ಗಮನ ಹರಿಸಿದ್ದರೇ ಇಂದು ವಿರಾಟ್ ಕೊಹ್ಲಿ ಹೆಸರು ಪ್ರಪಂಚದ ಯಾವೊಬ್ಬರಿಗೆ ತಿಳಿಯುತ್ತಿರಲಿಲ್ಲ ಎಂದು ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,19 Jun 2025
40ರ ಸನಿಹದಲ್ಲಿ ಮೇಘನಾ ರಾಜ್, ಆದರೂ ಎರಡನೇ ಮದುವೆಗೆ ಹೆಚ್ಚಾಯಿತು ಡಿಮಾಂಡ್
Thu,19 Jun 2025